ತುಕಾಲಿ ಸಂತೋಷ್​ಗೆ ಉತ್ತಮ, ತನಿಷಾಗೆ ಕಳಪೆ; ಲೆಕ್ಕಾಚಾರವೇ ಉಲ್ಟಾ

ಒಂದು ವಾರ ಕಳಪೆ ಪಡೆದವರು ಮುಂದಿನ ವಾರಕ್ಕೆ ತಮ್ಮ ಆಟವನ್ನು ತೋರಿಸಿ ಬೆಸ್ಟ್ ಎನಿಸಿಕೊಳ್ಳಬಹುದು. ಈ ವಾರ ಬಿಗ್ ಬಾಸ್​ ಮನೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ. ತುಕಾಲಿ ಸಂತೋಷ್ ಅವರು ಉತ್ತಮ ಎನಿಸಿಕೊಂಡರೆ, ತನಿಷಾ ಕಳಪೆ ಪಟ್ಟ ಪಡೆದಿದ್ದಾರೆ.

ತುಕಾಲಿ ಸಂತೋಷ್​ಗೆ ಉತ್ತಮ, ತನಿಷಾಗೆ ಕಳಪೆ; ಲೆಕ್ಕಾಚಾರವೇ ಉಲ್ಟಾ
ತನಿಷಾ-ಸಂತೋಷ್

Updated on: Nov 18, 2023 | 7:09 AM

ಬಿಗ್ ಬಾಸ್​ನಲ್ಲಿ(Bigg Boss)  ಯಾವಾಗ ಏನು ಆಗುತ್ತದೆ ಎಂದು ಊಹಿಸುವುದು ಕಷ್ಟ. ಒಂದು ವಾರ ಉತ್ತಮ ಪರ್ಫಾರ್ಮೆನ್ಸ್ ನೀಡಿದವರು, ಕ್ಯಾಪ್ಟನ್ ಆದವರು ಕಳಪೆ ಹಣೆಪಟ್ಟಿ ಪಡೆದು ಜೈಲು ಸೇರಬಹುದು. ಅದೇ ರೀತಿ ಒಂದು ವಾರ ಕಳಪೆ ಪಡೆದವರು ಮುಂದಿನ ವಾರಕ್ಕೆ ತಮ್ಮ ಆಟವನ್ನು ತೋರಿಸಿ ಬೆಸ್ಟ್ ಎನಿಸಿಕೊಳ್ಳಬಹುದು. ಈ ವಾರ ಬಿಗ್ ಬಾಸ್​ ಮನೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ. ತುಕಾಲಿ ಸಂತೋಷ್ ಅವರು ಉತ್ತಮ ಎನಿಸಿಕೊಂಡರೆ, ತನಿಷಾ ಕಳಪೆ ಪಟ್ಟ ಪಡೆದಿದ್ದಾರೆ.

ತುಕಾಲಿ ಸಂತೋಷ್ ಅವರು ಇಷ್ಟು ದಿನ ವಿನಯ್ ಅವರ ಜೊತೆ ಕಾಣಿಸಿಕೊಳ್ಳುತ್ತಾ ಬಂದಿದ್ದರು. ಈ ಕಾರಣಕ್ಕೆ ಅವರು ಟೀಕೆಗೆ ಒಳಗಾಗಿದ್ದರು. ಈ ಮೊದಲು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಎದುರಾಳಿಯಾಗಿ ವಿನಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. ವಿನಯ್ ವಿರುದ್ಧ ತೊಡೆ ತಟ್ಟಿದ್ದಾರೆ. ಎಲ್ಲ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ. ಇನ್ನು, ಟಾಸ್ಕ್​ನಲ್ಲಿ ಅವರು ನೀಡಿದ ಪರ್ಫಾರ್ಮೆನ್ಸ್ ಮೆಚ್ಚುಗೆ ಪಡೆದಿದೆ. ಹೀಗಾಗಿ, ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಇನ್ನು, ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತನಿಷಾ ಅವರು ಕಳಪೆ ಪಟ್ಟ ಪಡೆದಿದ್ದಾರೆ. ಅವರು ಈ ವಾರದ ಒಂದು ಟಾಸ್ಕ್​ನಲ್ಲಿ ಉತ್ತಮವಾಗಿ ಆಟ ಆಡಿರಲಿಲ್ಲ. ಇದನ್ನೇ ಎಲ್ಲರೂ ಟಾರ್ಗೆಟ್ ಮಾಡಿದ್ದಾರೆ. ಈ ಕಾರಣದಿಂದಲೇ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಅವರು ಜೈಲಿನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ ಗಾದೆ ಮಾತು ಕೇಳಿ ಕಾರ್ತಿಕ್​ ಮಹೇಶ್​ ಕಕ್ಕಾಬಿಕ್ಕಿ

ಕಾರ್ತಿಕ್ ಮಹೇಶ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಪ್ರತಿ ವಾರವೂ ಅವರು ನಾಮಿನೇಟ್ ಆಗುತ್ತಾ ಬಂದಿದ್ದಾರೆ. ಕ್ಯಾಪ್ಟನ್ ಆಗಿರುವುದರಿಂದ ಮುಂದಿನ ವಾರ ಅವರು ನಾಮಿನೇಷನ್​ನಿಂದ ಬಚಾವ್ ಆಗಲಿದ್ದಾರೆ. ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವೂ ಅವರಿಗೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us