‘ಸೀತಾ ರಾಮ’ ಧಾರಾವಾಹಿ ನಟಿ ವೈಷ್ಣವಿ ಗೌಡಗೆ ಬಿತ್ತು ದಂಡ; ಮಾಡಿದ ತಪ್ಪೇನು?

Vaishnavi Gowda: ಧಾರಾವಾಹಿಗಳ ಶೂಟ್ ಮಾಡುವಾಗ ಬೈಕ್ ಓಡಿಸೋ ದೃಶ್ಯಗಳಿದ್ದರೆ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಹೆಲ್ಮೆಟ್ ಹಾಕುವುದಿಲ್ಲ. ಮುಖ ಸರಿಯಾಗಿ ಕಾಣುವುದಿಲ್ಲ ಎನ್ನುವುದೇ ಇದಕ್ಕೆ ಕಾರಣ. ಆ ಬಗ್ಗೆ ಇಲ್ಲಿದೆ ವಿವರ.

‘ಸೀತಾ ರಾಮ’ ಧಾರಾವಾಹಿ ನಟಿ ವೈಷ್ಣವಿ ಗೌಡಗೆ ಬಿತ್ತು ದಂಡ; ಮಾಡಿದ ತಪ್ಪೇನು?
ವೈಷ್ಣವಿ ಗೌಡ

Updated on: May 14, 2024 | 12:42 PM

ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ವೈಯಕ್ತಿಕ ಕಾರಣಕ್ಕೆ ಸುದ್ದಿ ಆಗಿದ್ದಾರೆ. ಟ್ರಾಫಿಕ್ ಪೊಲೀಸರು ವೈಷ್ಣವಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ವರದಿ ಆಗಿದೆ. ಅಷ್ಟಕ್ಕೂ ವೈಷ್ಣವಿ ಗೌಡ ಮಾಡಿದ ತಪ್ಪೇನು? ಅವರಿಗೆ ದಂಡ ಹಾಕಿದ್ದು ಯಾರು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಧಾರಾವಾಹಿಗಳ ಶೂಟ್ ಮಾಡುವಾಗ ಬೈಕ್ ಓಡಿಸೋ ದೃಶ್ಯಗಳಿದ್ದರೆ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಹೆಲ್ಮೆಟ್ ಹಾಕುವುದಿಲ್ಲ. ಮುಖ ಸರಿಯಾಗಿ ಕಾಣುವುದಿಲ್ಲ ಎನ್ನುವುದೇ ಇದಕ್ಕೆ ಕಾರಣ. ‘ಸೀತಾ ರಾಮ’ ಧಾರಾವಾಹಿ ಶೂಟ್ ವೇಳೆ ಕಥಾ ನಾಯಕಿ ಸೀತಾ (ವೈಷ್ಣವಿ ಗೌಡ) ಹಾಗೂ ಆಕೆಯ ಗೆಳೆತಿ ಪ್ರಿಯಾ (ಶ್ವೇತಾ ಶಂಕರಪ್ಪ) ಬೈಕ್​ನಲ್ಲಿ ತೆರಳುತ್ತಾ ಇರುವ ದೃಶ್ಯವಿತ್ತು.  ಬೈಕ್ ಓಡಿಸುತ್ತಿದ್ದ ಪ್ರಿಯಾ ಹೆಲ್ಮೆಟ್ ಹಾಕಿದ್ದರೆ, ಹಿಂದೆ ಕುಳಿತಿದ್ದ ಸೀತಾ ಹೆಲ್ಮೆಟ್ ಧರಿಸಿರಲಿಲ್ಲ. ಇದಕ್ಕೆ ಸಂಬಂಧಿಸಿ ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎಂಬುವವರು ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ದಾಖಲು ಮಾಡಿದ್ದರು.

ವಾಹಿನಿ ಹಾಗೂ ನಟಿಗೆ ಪೊಲೀಸರು ನೋಟಿಸ್ ನೀಡಿದ್ದರು. ಸಿನಿಮಾದ ಶೂಟಿಂಗ್ ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ನಡೆದಿದೆ ಅನ್ನೋದು ಗೊತ್ತಾದ ಬಳಿಕ ಪ್ರಕರಣವನ್ನು ಬೆಂಗಳೂರಿನ ರಾಜಾಜಿನಗರ ಠಾಣೆಗೆ ವರ್ಗಾಯಿಸಲಾಯಿತು. ಬೈಕ್ ಮಾಲೀಕರಾದ ಸವಿತಾ ಅವರಿಗೆ 500 ರೂಪಾಯಿ ಹಾಗೂ ವೈಷ್ಣವಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ‘ಕಾವಾಲಾ..’ ಹಾಡಿಗೆ ಸಖತ್ ಆಗಿ ಕುಣಿದ ನಟಿ ವೈಷ್ಣವಿ ಗೌಡ; ಈ ಬಗ್ಗೆ ಫ್ಯಾನ್ಸ್ ಕಮೆಂಟ್ ಮಾಡೋ ಹಾಗೇ ಇಲ್ಲ

ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಸ್ಪರ್ಧಿ ಆಗಿದ್ದ ಅವರು ಆ ಬಳಿಕ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸೋಕೆ ಆರಂಭಿಸಿದರು. ಈ ಧಾರಾವಾಹಿ ಇತ್ತೀಚೆಗೆ 200 ಎಪಿಸೋಡ್ ಪೂರ್ಣಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us