ಬಿಗ್ ಬಾಸ್ ಮನೆಯಲ್ಲಿ ಹಿಂದೆಂದೂ ಕೊಟ್ಟಿರದ ಆಫರ್​ ಕೊಟ್ಟ ವಿನಯ್ ಗೌಡ

ಟಾಸ್ಕ್ ಕೊಟ್ಟರೆ ವಿನಯ್ ಪೂರ್ಣಗೊಳಿಸುತ್ತಾರೆ ಎನ್ನುವ ಭರವಸೆ ಮನೆಯವರಿಗೆ ಇದೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಈಗ ಫಿನಾಲೆ ಸಮೀಪಿಸಿದ್ದು, ಅದುವೇ ಅವರಿಗೆ ಮುಳುವಾಗಿದೆ. ಇದನ್ನು ವಿನಯ್ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹಿಂದೆಂದೂ ಕೊಟ್ಟಿರದ ಆಫರ್​ ಕೊಟ್ಟ ವಿನಯ್ ಗೌಡ
ವಿನಯ್

Updated on: Jan 11, 2024 | 7:40 AM

ವಿನಯ್ ಗೌಡ (Vinay Gowda) ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ಆಟದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಒಂದು ದೊಡ್ಡ ಆಫರ್ ನೀಡಿದ್ದಾರೆ. ಆದರೆ, ಈ ಆಫರ್​ನ ಯಾರೂ ಸ್ವೀಕರಿಸಲು ಮುಂದೆ ಬಂದಿಲ್ಲ. ಇದನ್ನು ಒಂದೇ ಮಾತಲ್ಲಿ ಎಲ್ಲರೂ ರಿಜೆಕ್ಟ್ ಮಾಡಿದ್ದಾರೆ. ಇದನ್ನು ನೋಡಿ ವಿನಯ್ ಗೌಡ ಬೇಸರ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರು ನೀಡಿದ ಆಫರ್ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಬಹುತೇಕ ಟಾಸ್ಕ್​ಗಳಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ತೋರಿಸಿ ಗೆಲುವು ಕಂಡಿದ್ದಾರೆ. ಹೀಗಾಗಿ ಟಾಸ್ಕ್ ಕೊಟ್ಟರೆ ವಿನಯ್ ಪೂರ್ಣಗೊಳಿಸುತ್ತಾರೆ ಎನ್ನುವ ಭರವಸೆ ಮನೆಯವರಿಗೆ ಇದೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಈಗ ಫಿನಾಲೆ ಸಮೀಪಿಸಿದ್ದು, ಅದುವೇ ಅವರಿಗೆ ಮುಳುವಾಗಿದೆ. ಇದನ್ನು ವಿನಯ್ ಹೇಳಿಕೊಂಡಿದ್ದಾರೆ.

ಪ್ರತಿ ಸ್ಪರ್ಧಿ ತಮ್ಮ ಮೂರು ಎದುರಾಳಿಗಳನ್ನು ಆಯ್ಕೆ ಮಾಡಿಕೊಂಡು ಟಾಸ್ಕ್ ಆಡಬೇಕು ಎಂಬುದು ಬಿಗ್ ಬಾಸ್ ನಿಯಮದಲ್ಲಿ ಇತ್ತು. ಎಲ್ಲಾ ಸ್ಪರ್ಧಿಗಳು ತಮಗಿಂತ ಕಡಿಮೆ ಸ್ಟ್ರಾಂಗ್ ಯಾರು ಎಂಬುದನ್ನು ನೋಡುತ್ತಾರೆ. ವಿನಯ್ ಗೌಡ ಅವರು ಸ್ಟ್ರಾಂಗ್ ಇರುವ ಕಾರಣ ಅವರನ್ನು ಟಾಸ್ಕ್​ಗೆ ಆಯ್ಕೆ ಮಾಡಿಕೊಳ್ಳುವಷ್ಟು ಧೈರ್ಯ ತೋರಿಸುವುದಿಲ್ಲ. ಇದನ್ನು ಅರಿತ ಅವರು ಸ್ಪರ್ಧಿಗಳಿಗೆ ಆಫರ್ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ

ಬುದ್ಧಿಮತ್ಯೆ ಉಪಯೋಗಿಸಿ ಆಡುವ ಟಾಸ್ಕ್ ಬಂದಿತ್ತು. ಈರೀತಿಯ ಟಾಸ್ಕ್ ಬಂದಾಗ ತಮ್ಮನ್ನು ಆಯ್ಕೆ ಮಾಡಿಕೊಂಡರೆ ಅಂಥವರಿಗೆ 100 ಪಾಯಿಂಟ್ಸ್ ಕೊಡಿಸಲು ವಿನಯ್ ಸಹಾಯ ಮಾಡುತ್ತಾರಂತೆ. ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳುತ್ತಾರಂತೆ. ಈ ರೀತಿ ಮ್ಯಾಚ್ ಫಿಕ್ಸಿಂಗ್ ಸಹವಾಸ ಬೇಡ ಎಂದು ಎಲ್ಲರೂ ಸುಮ್ಮನಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:36 am, Thu, 11 January 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us