‘ಅವರು ಸಕತ್ ಸ್ವೀಟ್’; ಸಂಗೀತಾಗೆ ಕಂಡ್ತು ವಿನಯ್ ಅವರ ಮತ್ತೊಂದು ಮುಖ

ಆರಂಭದ ದಿನಗಳಲ್ಲಿ ವಿನಯ್ ಅವರು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸಂಗೀತಾ ಕೂಗಾಡಿದ್ದರು. ವಿನಯ್ ಮಾತು ಥ್ರೆಟ್ ಆಗುತ್ತಿದೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತಿದ್ದು ಕಾರ್ತಿಕ್. ಈಗ ಕಾರ್ತಿಕ್​ನಿಂದ ದೂರವಾಗಿ ವಿನಯ್​ ಜೊತೆ ಆಪ್ತವಾಗಿದ್ದಾರೆ.

‘ಅವರು ಸಕತ್ ಸ್ವೀಟ್’; ಸಂಗೀತಾಗೆ ಕಂಡ್ತು ವಿನಯ್ ಅವರ ಮತ್ತೊಂದು ಮುಖ
ಸಂಗೀತಾ-ವಿನಯ್

Updated on: Nov 24, 2023 | 8:08 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಪರಿಸ್ಥಿತಿಗಳು ಯಾವಾಗ ಹೇಗೆ ಬೇಕಿದ್ದರೂ ಬದಲಾಗಬಹುದು. ಇಂದು ಆತ್ಮೀಯರು ಎನಿಸಿಕೊಂಡವರು ಮರುದಿನ ವೈರಿಗಳಾಗಬಹುದು. ಕನ್ನಡ ಬಿಗ್ ಬಾಸ್ ಮನೆಯಲ್ಲೂ ಇದೇ ಆಗುತ್ತಿದೆ. ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ಬೆಸ್ಟ್ ಫ್ರೆಂಡ್ಸ್ ಎನಿಸಿಕೊಂಡಿದ್ದರು. ಆದರೆ, ಸಂಗೀತಾ ಈ ಗ್ರೂಪ್​ನಿಂದ ಹೊರ ಹೋಗಿದ್ದಾರೆ. ಇವರುಗಳು ಬದ್ಧ ವೈರಿಗಳಾಗಿದ್ದಾರೆ. ಅದೇ ರೀತಿ ಸಂಗೀತಾ ಹಾಗೂ ವಿನಯ್ ಬದ್ಧವೈರಿಗಳಂತೆ ವರ್ತಿಸುತ್ತಿದ್ದರು. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ.

ಸಣ್ಣ ಮಿಸ್​ಅಂಡರ್​ಸ್ಟ್ಯಾಂಡಿಂಗ್​ನಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಜಗಳ ಶುರುವಾಯಿತು. ಈಗ ಇಬ್ಬರ ಮಧ್ಯೆ ಸಾಕಷ್ಟು ಅಂತರ ಶುರುವಾಗಿದೆ. ಈಗ ಅವರು ಅನಿವಾರ್ಯವಾಗಿ ವಿನಯ್ ಗುಂಪು ಸೇರಿದ್ದಾರೆ. ನಮ್ರತಾ ಜೊತೆ ಕ್ಲೋಸ್ ಆಗಿದ್ದಾರೆ. ಅಷ್ಟೇ ಅಲ್ಲ, ವಿನಯ್ ಜೊತೆ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ವಿನಯ್ ಅವರು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸಂಗೀತಾ ಕೂಗಾಡಿದ್ದರು. ವಿನಯ್ ಮಾತು ಥ್ರೆಟ್ ಆಗುತ್ತಿದೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತಿದ್ದು ಕಾರ್ತಿಕ್. ಈಗ ಕಾರ್ತಿಕ್​ನಿಂದ ದೂರವಾಗಿ ವಿನಯ್​ ಜೊತೆ ಆಪ್ತವಾಗಿದ್ದಾರೆ. ಈಗ ವಿನಯ್ ಅವರ ಮತ್ತೊಂದು ಮುಖ ಕಂಡಿದೆಯಂತೆ.

ಇದನ್ನೂ ಓದಿ: ‘ಇವರಿಗೆ ಮನುಷ್ಯತ್ವ ಇಲ್ವ?’; ಅಮಾನವೀಯ ಚಾಲೆಂಜ್ ನೀಡಿದ ವಿನಯ್-ಸಂಗೀತಾ ಟೀಂಗೆ ಛೀಮಾರಿ

ವಿನಯ್ ಅವರು ಸಂಗೀತಾಗೆ ಊಟ ಮಾಡಿಸಿದ್ದಾರೆ. ಅವರು ದುಃಖ ತೋಡಿಕೊಂಡಾಗ ಅದನ್ನು ಆಲಿಸಿದ್ದಾರೆ. ಹೀಗಾಗಿ, ವಿನಯ್ ಸ್ವೀಟ್ ಆಗಿ ಕಂಡಿದ್ದಾರೆ. ‘ವಿನಯ್ ಅವರಿಗೆ ಈ ಮುಖ ಇದೆ ಎಂದು ಗೊತ್ತೇ ಇರಲಿಲ್ಲ. ಇಷ್ಟು ಸ್ವೀಟ್ ಆಗಿರುವ ವ್ಯಕ್ತಿಯನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿರಲೇ ಇಲ್ಲ’ ಎಂದು ಸಂಗೀತಾ ನಮ್ರತಾ ಬಳಿ ಹೇಳಿದರು. ‘ನಾನು ಮೊದಲಿನಿಂದಲೂ ಅವರ ಈ ಮುಖವನ್ನು ಮಾತ್ರ ನೋಡುತ್ತಿರುವುದು’ ಎಂದರು ನಮ್ರತಾ.

‘ಸಂಗೀತಾ ತಮಗೆ ತಾವೇ ಅಂತ್ಯ ಹಾಡಿಕೊಳ್ಳುತ್ತಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us