‘ವಿನಯ್ ತುಂಬಾ ಕೆಳಗೆ ಹೋದ್ರು, ಪ್ರತಾಪ್ ಮೇಲೆ ಕಾಣಿಸಿದ್ರು’; ಅವಾಚ್ಯ ಶಬ್ದ ಬಳಕೆ ಬಗ್ಗೆ ಸಂತೋಷ್ ಮಾತು

ಪ್ರತಾಪ್ ಹಾಗೂ ಸಂಗೀತಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇದು ಒಳಗಿರುವ ಸ್ಪರ್ಧಿಗಳಿಗೆ ತಿಳಿದಿಲ್ಲ. ಪ್ರತಾಪ್ ಅವರ ಜೊತೆ ಬಾಯಿಗೆ ಬಂದಂತೆ ಮಾತನಾಡಿ ವಿನಯ್ ಈಗ ಮತ್ತಷ್ಟು ಕೆಟ್ಟವರಾಗಿದ್ದಾರೆ.

‘ವಿನಯ್ ತುಂಬಾ ಕೆಳಗೆ ಹೋದ್ರು, ಪ್ರತಾಪ್ ಮೇಲೆ ಕಾಣಿಸಿದ್ರು’; ಅವಾಚ್ಯ ಶಬ್ದ ಬಳಕೆ ಬಗ್ಗೆ ಸಂತೋಷ್ ಮಾತು
ವಿನಯ್-ವರ್ತೂರು-ಪ್ರತಾಪ್

Updated on: Jan 10, 2024 | 7:31 AM

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ (Vinay Gowda) ಹಾಗೂ ಪ್ರತಾಪ್ ಮಧ್ಯೆ ಸಾಕಷ್ಟು ಕಿತ್ತಾಟ ನಡೆದವು. ವಿನಯ್ ಗೌಡ ಅವರು ಕೆಟ್ಟ ಶಬ್ದ ಬಳಕೆ ಮಾಡಿದರು. ಇದನ್ನು ಮನೆಯವರು ವಿರೋಧಿಸಿದರು. ಈ ವಾರ ಪೂರ್ತಿ  ಕಿತ್ತಾಟ ಮುಂದುವರಿಯುವ ಸಾಧ್ಯತೆ ಇದೆ. ಈ ಮಧ್ಯೆ ವಿನಯ್ ಮಾಡಿದ್ದು ತಪ್ಪು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಅಷ್ಟೇ ಅಲ್ಲ, ಇದರಿಂದ ಪ್ರತಾಪ್ ಎಲ್ಲಿ ಕಾಣಿಸಿದರು ಹಾಗೂ ವಿನಯ್ ಮೇಲಿದ್ದ ಗೌರವ ಎಲ್ಲಿಗೆ ಹೋಯಿತು ಎಂದು ಅವರು ವಿವರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವ ಪ್ರತಿ ಸ್ಪರ್ಧಿಗೂ ಜನರು ತಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಕಾಡುತ್ತಾ ಇರುತ್ತದೆ. ಆದರೆ, ಜನರಿಗೆ ಯಾರ ಮೇಲೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ತಿಳಿಯೋದಿಲ್ಲ. ಪ್ರತಾಪ್ ಹಾಗೂ ಸಂಗೀತಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇದು ಒಳಗಿರುವ ಸ್ಪರ್ಧಿಗಳಿಗೆ ತಿಳಿದಿಲ್ಲ. ಪ್ರತಾಪ್ ಅವರ ಜೊತೆ ಬಾಯಿಗೆ ಬಂದಂತೆ ಮಾತನಾಡಿ ವಿನಯ್ ಈಗ ಮತ್ತಷ್ಟು ಕೆಟ್ಟವರಾಗಿದ್ದಾರೆ.

ಪ್ರತಾಪ್​ಗೆ ವಿನಯ್ ಅವಾಚ್ಯ ಶಬ್ದಗಳಿಂದ ಬೈದಿದ್ದನ್ನು ವರ್ತೂರು ಸಂತೋಷ್ ಅವರು ವಿರೋಧಿಸಿದ್ದಾರೆ. ‘ಪ್ರತಾಪ್ ಮೇಲೆ ಕಂಡರು. ನೀವು ಕೆಳಗೆ ಕಾಣಿಸಿದ್ರಿ. ಸಿನಿಮಾದಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾ, ಬೈಯುತ್ತಾ ಇರುವವನ್ನು ಏನೆಂದು ಕರೆಯುತ್ತಾರೆ ಹೇಳಿ’ ಎಂದರು ವರ್ತೂರು ಸಂತೋಷ್. ಇದಕ್ಕೆ ವಿನಯ್ ‘ವಿಲನ್’ ಎಂದರು. ಸಂತೋಷ್ ಅವರು ‘ಅಷ್ಟೇ. ನೀವು ಆಗಿದ್ದೂ ಅದೇ’ ಎಂದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ಮೌನಕ್ಕೆ ಶರಣಾದ ಪ್ರತಾಪ್; ಮೊದಲು ಮಾಡಿದ್ದೇನು?

‘ನಾನು ಮಾತಾಡಿದ್ದು ಕೆಟ್ಟದಾಗಿ ಇತ್ತು. ನಾನು ಮಾತಾಡೋದೆ ಹಾಗೆ. ಆದರೆ ವಿಷಯ ತಪ್ಪಿರಲಿಲ್ಲ’ ಎಂದು ಸಮರ್ಥಿಸಿಕೊಂಡರು ವಿನಯ್. ಪ್ರತಾಪ್ ಹಾಗೂ ವಿನಯ್ ಈ ವಿಚಾರದ ಬಗ್ಗೆ ಕುಳಿತು ಮಾತನಾಡಿ ಪರಿಹರಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us