ನಿಯಂತ್ರಣ ಕಳೆದುಕೊಂಡ ವಿನಯ್ ಬಾಯಿಂದ ಬೀಪ್ ಶಬ್ದ; ಫಿನಾಲೆ ಸಮೀಪದಲ್ಲಿ ಎಡವಿದ್ರು..

ವಿನಯ್ ಅವರು ಸೈಲೆಂಟ್ ಆಗಿ ಎಲ್ಲದಕ್ಕೂ ಉತ್ತರ ನೀಡುತ್ತಿದ್ದುದು ಇಷ್ಟ ಆಗುತ್ತಿತ್ತು. ಆದರೆ, ಮತ್ತೆ ಅವರು ಮೊದಲಿನ ರೀತಿಯೇ ಆಗಿದ್ದಾರೆ. ನಿಯಂತ್ರಣ ಕಳೆದುಕೊಂಡು ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ.

ನಿಯಂತ್ರಣ ಕಳೆದುಕೊಂಡ ವಿನಯ್ ಬಾಯಿಂದ ಬೀಪ್ ಶಬ್ದ; ಫಿನಾಲೆ ಸಮೀಪದಲ್ಲಿ ಎಡವಿದ್ರು..
ಪ್ರತಾಪ್-ವಿನಯ್

Updated on: Jan 09, 2024 | 7:36 AM

ವಿನಯ್ ಗೌಡ (Vinay Gowda) ಅವರು ಕಳೆದ ಮೂರು ವಾರಗಳಿಂದ ಕೂಲ್ ಆಗಿದ್ದರು. ‘ಈ ವಿನಯ್ ಇಷ್ಟ ಆಗುತ್ತಿದ್ದಾರೆ’ ಎಂದು ಅನೇಕರು ಹೇಳಿದ್ದರು. ವಿನಯ್ ಮೇಲೆ ಮೊದಲಿದ್ದ ಅಭಿಪ್ರಾಯ ಬದಲಾಗುವುದರಲ್ಲಿತ್ತು. ಆದರೆ, ಅವರು ಮೊದಲಿನ ರೀತಿಯೇ ಆಗಿದ್ದಾರೆ. ಅವರ ಬಾಯಿಯಿಂದ ಕೆಟ್ಟ ಶಬ್ದ ಬಂದಿದೆ. ಫಿನಾಲೆ ಹತ್ತಿರ ಬಂದಾಗ ಅವರು ಎಡವಿದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಜನವರಿ 8ರಂದು ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ.

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಆರಂಭದಲ್ಲಿ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಬದಲಾಗಿದ್ದರು. ಯಾರ ಜೊತೆಯೂ ನಾನು ಸಿಟ್ಟಿನಿಂದ ಮಾತನಾಡಲ್ಲ ಎಂದು ಹೇಳಿದ್ದರು. ಅವರು ಸೈಲೆಂಟ್ ಆಗಿ ಎಲ್ಲದಕ್ಕೂ ಉತ್ತರ ನೀಡುತ್ತಿದ್ದುದು ಇಷ್ಟ ಆಗುತ್ತಿತ್ತು. ಆದರೆ, ಮತ್ತೆ ಅವರು ಮೊದಲಿನ ರೀತಿಯೇ ಆಗಿದ್ದಾರೆ. ನಿಯಂತ್ರಣ ಕಳೆದುಕೊಂಡು ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ.

‘ವಿನಯ್​ ಒಬ್ಬರನ್ನು ತುಳಿದು ಮೇಲೆ ಬಂದಿದ್ದಾರೆ’ ಎಂದು ಸ್ಟೇಟ್​ಮೆಂಟ್ ಕೊಟ್ಟಿದ್ದರು ಪ್ರತಾಪ್. ಇದು ವಿನಯ್ ಕೋಪಕ್ಕೆ ಕಾರಣ ಆಗಿತ್ತು. ಸೋಮವಾರದ ಎಪಿಸೋಡ್​ನಲ್ಲಿ ವಿನಯ್ ಅವರು ಮಾತನಾಡುವಾಗ ಪ್ರತಾಪ್​ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದರು. ಆ ಬಳಿಕ ಪ್ರತಾಪ್​ಗೆ ಏಕವಚನ ಬಳಕೆ ಮಾಡಿದರು. ಇದರಿಂದ ಸಿಟ್ಟಾದ ಪ್ರತಾಪ್ ಎಚ್ಚರಿಕೆ ನೀಡಿದರು. ನಂತರ ವಿನಯ್ ಅವರು ನಿಯಂತ್ರಣ ಕಳೆದುಕೊಂಡರು. ಈ ವೇಳೆ ಪ್ರತಾಪ್ ಹೇಳಿದ ‘ಪರಿಣಾಮ ನೆಟ್ಟಗೆ ಇರಲ್ಲ’ ಎಂಬ ಮಾತು ವಿನಯ್ ಅವರನ್ನು ಮತ್ತಷ್ಟು ಪ್ರವೋಕ್ ಮಾಡಿತು.

ಇದನ್ನೂ ಓದಿ: ‘ಪರಿಣಾಮ ನೆಟ್ಟಗಿರಲ್ಲ’; ಕಾಲ್ಕೆರೆದು ಜಗಳಕ್ಕೆ ಬಂದ ವಿನಯ್​ಗೆ ಪ್ರತಾಪ್ ಖಡಕ್ ಎಚ್ಚರಿಕೆ

‘ತಿ* ಮುಚ್ಕೊಂಡು ಇರು..’, ‘ಏನು ಅಲ್ಲಾಡ್ಸಕ್ಕೆ ಆಗಲ್ಲ. ನನಗೆ ಏನು ಮಾತನಾಡಬೇಕು ಅಂತ ಗೊತ್ತು. ನೀನು ಹೆದರಿಲ್ಲ ಅಂದ್ರೆ ** ಹೋಯ್ತು’ ಎಂದೆಲ್ಲ ವಿನಯ್ ಮಾತನಾಡಿದ್ದಾರೆ. ಅವರು ಈ ರೀತಿ ಮಾತನಾಡಿದ್ದನ್ನು ಇಡೀ ಮನೆ ವಿರೋಧಿಸಿದೆ. ‘ವಾದ ಮಾಡಿ. ಆದರೆ, ಕೆಟ್ಟ ಶಬ್ದ ಬಳಕೆ ಮಾಡಬೇಡಿ’ ಎಂದು ವಿನಯ್​ಗೆ ಎಲ್ಲರೂ ತಿದ್ದಲು ಪ್ರಯತ್ನಿಸಿದರು. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us