AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪರಿಣಾಮ ನೆಟ್ಟಗಿರಲ್ಲ’; ಕಾಲ್ಕೆರೆದು ಜಗಳಕ್ಕೆ ಬಂದ ವಿನಯ್​ಗೆ ಪ್ರತಾಪ್ ಖಡಕ್ ಎಚ್ಚರಿಕೆ

‘ಪರಿಣಾಮ ನೆಟ್ಟಗಿರಲ್ಲ’; ಕಾಲ್ಕೆರೆದು ಜಗಳಕ್ಕೆ ಬಂದ ವಿನಯ್​ಗೆ ಪ್ರತಾಪ್ ಖಡಕ್ ಎಚ್ಚರಿಕೆ

ರಾಜೇಶ್ ದುಗ್ಗುಮನೆ
|

Updated on: Jan 08, 2024 | 8:34 AM

ಪ್ರತಾಪ್ ಅವರು ಬದಲಾಗುವುದಾಗಿ ಸುದೀಪ್ ಎದುರು ಪ್ರಾಮಿಸ್ ಮಾಡಿದ್ದರು. ಈ ಮಾತನ್ನು ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.

ಯಾರಾದರೂ ಏನಾದರೂ ಹೇಳಿದರೆ, ಆರೋಪ ಮಾಡಿದರೆ ಡ್ರೋನ್ ಪ್ರತಾಪ್ ಅವರು ಅಷ್ಟಾಗಿ ರಿಯಾಕ್ಟ್ ಮಾಡೋಕೆ ಹೋಗುತ್ತಿರಲಿಲ್ಲ. ಆದರೆ, ಅವರು ಬದಲಾಗುವುದಾಗಿ ಸುದೀಪ್ (Sudeep) ಎದುರು ಪ್ರಾಮಿಸ್ ಮಾಡಿದ್ದರು. ಈ ಮಾತನ್ನು ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ‘ಡ್ರೋನ್ ಪ್ರತಾಪ್ ನಾಟಕ ಮಾಡಿಕೊಂಡು, ಎಲ್ಲರಿಗೆ ಬೂದಿ ಎರಚಿಕೊಂಡು ಇದ್ದಾನೆ’ ಎಂದರು ವಿನಯ್. ಅಲ್ಲದೆ ಏಕವಚನದಲ್ಲಿ ಪ್ರತಾಪ್​ನ ಸಂಬೋಧಿಸಿದರು. ಇದು ಪ್ರತಾಪ್​ಗೆ ಕೋಪ ತರಿಸಿದೆ. ‘ನೀವು ಹೇಳಿದ್ದೆಲ್ಲ ಹೇಳಿಸಿಕೊಂಡು ಇರೋಕೆ ಆಗಲ್ಲ. ಪರಿಣಾಮ ನೆಟ್ಟಗೆ ಇರಲ್ಲ’ ಎಂದಿದ್ದಾರೆ ಪ್ರತಾಪ್. ಇಂದು (ಜನವರಿ 8) ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ