ಡ್ರೋನ್ ಪ್ರತಾಪ್ ಆರೋಪಕ್ಕೆ ಹೊರಗಿನಿಂದಲೇ ಉತ್ತರ ಕೊಟ್ಟ ರಕ್ಷಕ್
ವಿನಯ್ ಗುಂಪುಗಾರಿಕೆ ಮಾಡುತ್ತಿದ್ದಾರೆ ಹಾಗೂ ರಕ್ಷಕ್ ಈ ಗುಂಪಿನ ಸದಸ್ಯ ಆಗಿದ್ದರು ಎಂದು ಪರೋಕ್ಷವಾಗಿ ಹೇಳಿದ್ದರು. ಈ ಆರೋಪಕ್ಕೆ ಉತ್ತರ ನೀಡಿದ್ದಾರೆ ರಕ್ಷಕ್. ಅವರ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದೆ.
ಬುಲೆಟ್ ಪ್ರಕಾಶ್ ಮಗ ರಕ್ಷಕ್ (Rakshak) ಅವರು ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿದ್ದರು. ತಮಗೆ ಸಾಕಷ್ಟು ಜನಪ್ರಿಯತೆ ಇದೆ, ದೊಡ್ಡ ಅಭಿಮಾನಿ ಬಳಗ ಇದೆ ಎಂದು ಯಾವಾಗಲೂ ಹೇಳುತ್ತಾ ಇರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಒಂದು ಆರೋಪ ಮಾಡಿದ್ದರು. ವಿನಯ್ ಗುಂಪುಗಾರಿಕೆ ಮಾಡುತ್ತಿದ್ದಾರೆ ಹಾಗೂ ರಕ್ಷಕ್ ಈ ಗುಂಪಿನ ಸದಸ್ಯ ಆಗಿದ್ದರು ಎಂದು ಪರೋಕ್ಷವಾಗಿ ಹೇಳಿದ್ದರು. ಈ ಆರೋಪಕ್ಕೆ ಉತ್ತರ ನೀಡಿದ್ದಾರೆ ರಕ್ಷಕ್. ಅವರ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದೆ.
ಪ್ರತಾಪ್ ಆರೋಪ ಏನು?
ಶನಿವಾರ (ಜನವರಿ 6) ಎಪಿಸೋಡ್ನಲ್ಲಿ ಪುಸ್ತಕಗಳನ್ನು ನೀಡುವ ಟಾಸ್ಕ್ ನೀಡಲಾಗಿತ್ತು. ‘ಒಬ್ಬರನ್ನು ತುಳಿದು ಮೇಲೆ ಬರೋದು ಹೇಗೆ’ ಎನ್ನುವ ಪುಸ್ತಕವನ್ನು ಡ್ರೋನ್ ಪ್ರತಾಪ್ ಅವರು ವಿನಯ್ಗೆ ನೀಡಿದರು. ಅಲ್ಲದೆ, ಇದರ ಬಗ್ಗೆ ಅವರು ವಿವರಣೆ ನೀಡಿದರು. ‘ವಿನಯ್ ಅವರು ಗುಂಪುಗಾರಿಕೆ ಮಾಡಿದ್ದಾರೆ. ಆದರೆ, ಜೊತೆಗೆ ಇದ್ದವರ ತಪ್ಪನ್ನು ಅವರು ಹೇಳಲೇ ಇಲ್ಲ. ಹೀಗಾಗಿ ಒಬ್ಬೊಬ್ಬರೇ ಮನೆಯಿಂದ ಹೋದರು. ಆ ಬೆಡ್ಶೀಟ್ ವಿನಯ್ ಅವರ ಬೆಡ್ ಸೇರುತ್ತಿದೆ’ ಎಂದಿದ್ದರು ಪ್ರತಾಪ್.
ರಕ್ಷಕ್ ಉತ್ತರ
ಬಿಗ್ ಬಾಸ್ನಿಂದ ಕೇವಲ ಒಂದೇ ತಿಂಗಳಿಗೆ ರಕ್ಷಕ್ ಔಟ್ ಆದರು. ಅವರು ವಿನಯ್ ಗ್ರೂಪ್ ಸೇರಿದ್ದ ವಾರವೇ ಎಲಿಮಿನೇಟ್ ಆಗಿದ್ದರು. ಆದರೆ, ತಾವು ತಂಡ ಕಟ್ಟೋಕೆ ಹೋಗಿಲ್ಲ ಎಂದಿದ್ದಾರೆ ರಕ್ಷಕ್. ‘ಎಲ್ಲರಿಗೂ ನಮಸ್ಕಾರ. ಯಾವುದೇ ಗುಂಪುಗಾರಿಕೆ ಮಾಡೋಕೆ ಅಥವಾ ತಂಡ ಕಟ್ಟೋಕೆ ಬಿಗ್ ಬಾಸ್ ಮನೆ ಒಳಗೆ ಹೋದವನು ನಾನಲ್ಲ. ಜನರ ಪ್ರೀತಿ ಮತ್ತು ಜನರ ವಿಶ್ವಾಸ ಗಳಿಸಲು ಹೊಗಿದ್ದೆ. ನನ್ನ ಬೆಡ್ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ. ನಿಮ್ಮ ಬೆಡ್ಶೀಟ್ ಜೋಪಾನ ಮಾಡಿಕೊಳ್ಳಿ ಎಚ್ಚರ’ ಎಂದು ರಕ್ಷಕ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಡ್ರೋನ್ ಪ್ರತಾಪ್ ಮೇಲೆ ಮತ್ತೆ ವಿನಯ್ ಜಗಳ, ಸುದೀಪ್ ಮುಂದೆ ಕಣ್ಣೀರು
ವಿನಯ್ ಅಸಮಾಧಾನ
ಪ್ರತಾಪ್ ನೀಡಿದ ಹೇಳಿಕೆಗೆ ವಿನಯ್ ಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ. ತಾವು ಯಾರನ್ನು ತುಳಿದು ಮೇಲೆ ಬಂದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಾಪ್ ಹೇಳಿಕೆಯಿಂದ ವಿನಯ್ ಅವರ ಕೋಪ ಹೆಚ್ಚಿದೆ. ‘ಅನಾವಶ್ಯಕವಾಗಿ ಆರೋಪ ಹೊರಿಸುತ್ತಿದ್ದಾರೆ’ ಎಂದು ವಿನಯ್ ಹೇಳಿದ್ದಾರೆ.
ಹೆಚ್ಚಿದ ಸ್ಪರ್ಧೆ
ಬಿಗ್ ಬಾಸ್ ಮನೆಯಲ್ಲಿ ಈಗ ಸ್ಪರ್ಧೆ ಹೆಚ್ಚಿದೆ. ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆ ಆಗಿದೆ. ಮೈಕಲ್ ಅಜಯ್ ಅವರು ಜನವರಿ 7ರ ಎಪಿಸೋಡ್ನಲ್ಲಿ ಎಲಿಮಿನೇಟ್ ಆಗಿದ್ದಾರೆ. ಸದ್ಯ ಸಂಗೀತಾ ಶೃಂಗೇರಿ, ತನಿಷಾ, ನಮ್ರತಾ, ವಿನಯ್ ಗೌಡ, ಕಾರ್ತಿಕ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಆಟ ಮುಂದುವರಿಸಿದ್ದಾರೆ. ರಾತ್ರಿ 9:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ