‘ಅಮೃತಧಾರೆ’ ಧಾರಾವಾಹಿ ನಿರ್ಮಿಸಿರೋದು ಯಶ್​​ಗೆ ಆ್ಯಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್

|

Updated on: May 22, 2023 | 8:20 AM

ಮಹೇಶ್ ರಾವ್ ಅವರು ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಮುರುಳಿ ಮೀಟ್ಸ್ ಮೀರಾ’, ‘ಕ್ವಾಟ್ಲೆ ಸತೀಶ’ ಮೊದಲಾದ ಸಿನಿಮಾಗಳು ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ.

‘ಅಮೃತಧಾರೆ’ ಧಾರಾವಾಹಿ ನಿರ್ಮಿಸಿರೋದು ಯಶ್​​ಗೆ ಆ್ಯಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್
ರಾಜೇಶ್ ನಟರಂಗ-ಯಶ್-ಛಾಯಾ ಸಿಂಗ್
Follow us on

ಜೀ ಕನ್ನಡ ವಾಹಿನಿಯಲ್ಲಿ ಮೇ 29ರಿಂದ ‘ಅಮೃತಧಾರೆ’ ಧಾರಾವಾಹಿ (Amruthadhare Serial) ಆರಂಭ ಆಗಲಿದೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಶ್ರೀಮಂತ ಮನೆಯ ಹೀರೋ ಜೊತೆ ಮಧ್ಯಮ ವರ್ಗದ ಹುಡುಗಿಗೆ ಪ್ರೀತಿ ಹುಟ್ಟೋ ಕಥೆ ‘ಅಮೃತಧಾರೆ’ಯಲ್ಲಿ ಇರಲಿದೆ ಅನ್ನೋದು ಪ್ರೋಮೋ ಮೂಲಕ ಗೊತ್ತಾಗಿದೆ. ಈ ಧಾರಾವಾಹಿಯನ್ನು ನಿರ್ಮಾಣ ಮಾಡ್ತಿರೋದು ಯಶ್​​ ನಟನೆಯ ‘ಸಂತು ಸ್ಟ್ರೇಟ್ ಫಾರ್ವಡ್​’ ಸಿನಿಮಾ ನಿರ್ದೇಶಕ ಮಹೇಶ್ ರಾವ್ ಅನ್ನೋದು ವಿಶೇಷ.

ಮಹೇಶ್ ರಾವ್ ಅವರು ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಮುರುಳಿ ಮೀಟ್ಸ್ ಮೀರಾ’, ‘ಕ್ವಾಟ್ಲೆ ಸತೀಶ’ ಮೊದಲಾದ ಸಿನಿಮಾಗಳು ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಕಿರುತೆರೆ ಧಾರಾವಾಹಿಯನ್ನೂ ಅವರು ನಿರ್ದೇಶಿಸಿದ್ದಾರೆ. ಈಗ ಅವರು ‘ಅಮೃತಧಾರೆ’ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಅವರು ‘ನಾಗಿಣಿ 2’ ಧಾರಾವಾಹಿಗೆ ಸ್ಕ್ರೀನ್​ಪ್ಲೇ ರೈಟರ್ ಆಗಿ ಕೆಲಸ ಮಾಡಿದ್ದರು. ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಅವರಿಗೆ ಪ್ರಶಸ್ತಿಯೂ ಸಿಕ್ಕಿತ್ತು.

ರಾಜೇಶ್ ನಟರಂಗ ಅವರು ಉದ್ಯಮಿ ಆಗಿ ಕಾಣಿಸಿಕೊಂಡರೆ, ಛಾಯಾ ಸಿಂಗ್ ಮಧ್ಯಮ ವರ್ಗದ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ‘ಬಡೇ ಅಚ್ಚೆ ಲಗ್ತೇ ಹೈ’ ಹೆಸರಿನ ಹಿಂದಿ ಧಾರಾವಾಹಿಯ ರಿಮೇಕ್ ಇದಾಗಿದೆ. ‘ಅಮೃತಧಾರೆ’ ಪ್ರೋಮೋ ನೋಡಿದವರಿಗೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗಿದೆ. ವಯಸ್ಸಿನ ಅಂತರ ಹೆಚ್ಚಿರುವ ಹುಡುಗ-ಹುಡುಗಿಯ ಪ್ರೇಮ್ ಕಹಾನಿ ಈ ಧಾರಾವಾಹಿಯಲ್ಲಿತ್ತು. ‘ಅಮೃತಧಾರೆ’ ಕೂಡ ಇದೇ ರೀತಿ ಇರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: Divya Suresh: ‘ತ್ರಿಪುರ ಸುಂದರಿ’ ಧಾರಾವಾಹಿ ಮೂಲಕ ಗಮನ ಸೆಳೆದ ನಟಿ ದಿವ್ಯಾ ಸುರೇಶ್

ಛಾಯಾ ಸಿಂಗ್ ಅವರು 2000ನೇ ಇಸವಿಯಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ‘ಮುನ್ನುಡಿ’ ಅವರ ಮೊದಲ ಸಿನಿಮಾ. ಹಲವು ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸದ್ಯ ಅವರು ‘ಅನು ಅನೆ ನೇನು’ ಹೆಸರಿನ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ರಾಜೇಶ್ ನಟರಂಗ ಕೂಡ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಛಾಯಾ ಸಿಂಗ್ ಹಾಗೂ ರಾಜೇಶ್ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ