ಈ ನಟಿಗಾಗಿ ಎರಡು ಐಪಿಎಲ್ ಟಿಕೆಟ್ ಖರೀದಿಸಿದ ದಳಪತಿ ವಿಜಯ್

ವಿಜಯ್ ಅವರು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೇ. 80 ಶೂಟಿಂಗ್ ರಷ್ಯಾದಲ್ಲಿ ನಡೆಯಲಿದೆ. ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ಮೋಹನ್, ಜಯರಾಮ್ ಮೊದಲಾದವರು ನಟಿಸಿದ್ದಾರೆ. ಅವರು ನಟಿಯೊಬ್ಬರಿಗೆ ಎರಡು ಐಪಿಲ್ ಟಿಕೆಟ್ ಖರೀದಿ ಮಾಡಿದ್ದರು.

ಈ ನಟಿಗಾಗಿ ಎರಡು ಐಪಿಎಲ್ ಟಿಕೆಟ್ ಖರೀದಿಸಿದ ದಳಪತಿ ವಿಜಯ್
ದಳಪತಿ ವಿಜಯ್

Updated on: May 10, 2024 | 2:39 PM

ದಳಪತಿ ವಿಜಯ್ (Thalapathy Vijay) ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ರಾಜಕೀಯ ಸೇರುವ ಬಗ್ಗೆ ಈಗಾಗಲೇ ಘೋಷಣೆ ಮಾಡಿದ್ದಾರೆ. ಶೀಘ್ರವೇ ಅವರು ಸಿನಿಮಾ ರಂಗಕ್ಕೆ ಗುಡ್​ಬೈ ಹೇಳಲಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಅವರು ಸ್ಟಾರ್ ನಟಿಗಾಗಿ ಎರಡು ಐಪಿಎಲ್ ಟಿಕೆಟ್ ಖರೀದಿ ಮಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ಮಾಹಿತಿ.

ವಿಜಯ್ ಅವರು ಈ ವರ್ಷ ಎರಡು ದುಬಾರಿ ಐಪಿಎಲ್ ಟಿಕೆಟ್ ಖರೀದಿ ಮಾಡಿದ್ದರು. ಅದು ವರಲಕ್ಷ್ಮಿ ಶರತ್​ಕುಮಾರ್ ಅವರಿಗಾಗಿ. ವರಲಕ್ಷ್ಮೀ ಅವರೇ ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ಈ ವಿಚಾರ ರಿವೀಲ್ ಮಾಡಿದ್ದರು. ‘ನಾನು ನೋಡಿದ ಮೊದಲ ಎರಡು ಐಪಿಎಲ್ ಮ್ಯಾಚ್​ಗೆ ದಳಪತಿ ವಿಜಯ್ ಅವರು ಟಿಕೆಟ್ ಖರೀದಿ ಮಾಡಿದ್ದರು’ ಎಂದಿದ್ದಾರೆ ವರಲಕ್ಷ್ಮಿ. ಮೊದಲ ಪಂದ್ಯ ಚೆನ್ನೈನಲ್ಲಿ ನಡೆದಿತ್ತು. ಆರ್​ಸಿಬಿ vs ಸಿಎಸ್​ಕೆ ಮಧ್ಯೆ ಫೈಟ್ ನಡೆದಿತ್ತು.

ವರಲಕ್ಷ್ಮಿ ಶರತ್​ಕುಮಾರ್ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 2014ರಲ್ಲಿ ರಿಲೀಸ್ ಆದ ಮಾಣಿಕ್ಯ ಚಿತ್ರದಲ್ಲಿ ಅವರು ನಟಿಸಿದರು. ನಂತರ ‘ರನ್ನ’ ಚಿತ್ರದಲ್ಲೂ ಅಭಿನಯಿಸಿದರು. ‘ವಿಸ್ಮಯ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.  ಇತ್ತೀಚೆಗೆ ಅವರು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅವರು ‘ಹನುಮಾನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ‘ರಾಯನ್’ ಹೆಸರಿನ ಸಿನಿಮಾ ಕೂಡ ಅವರು ಮಾಡುತ್ತಿದ್ದಾರೆ. ವೈಯಕ್ತಿಕ ವಿಚಾರದ ಬಗ್ಗೆ ಹೇಳಬೇಕು ಎಂದರೆ ವರಲಕ್ಷ್ಮಿ ಶರತ್​ಕುಮಾರ್ ಅವರು ನಿಕೋಲೈ ಸಹದೇವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ವೆಟ್ರಿಮಾರನ್​ ಹೇಳಿಕೆಯಿಂದ ದಳಪತಿ ವಿಜಯ್​ ಅಭಿಮಾನಿಗಳಿಗೆ ಬೇಸರ

ವಿಜಯ್ ಅವರು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೇ. 80 ಶೂಟಿಂಗ್ ರಷ್ಯಾದಲ್ಲಿ ನಡೆಯಲಿದೆ. ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ಮೋಹನ್, ಜಯರಾಮ್ ಮೊದಲಾದವರು ನಟಿಸಿದ್ದಾರೆ. ವಿಜಯ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us