14 ವರ್ಷಗಳ ಬಳಿಕ ಶೂಟಿಂಗ್​ಗಾಗಿ ಕೇರಳಕ್ಕೆ ಬಂದ ದಳಪತಿ ವಿಜಯ್; ಸಿಕ್ತು ಭರ್ಜರಿ ಸ್ವಾಗತ

|

Updated on: Mar 19, 2024 | 7:31 AM

ವಿಜಯ್ ಹೋದಲ್ಲೆಲ್ಲ ಬಿಗಿ ಭದ್ರತೆ ಇರಲಿದೆ. ಅವರು ಈಗ ಕೇವಲ ನಟ ಮಾತ್ರ ಅಲ್ಲ. ವಿಜಯ್ ರಾಜಕೀಯಕ್ಕೂ ಕಾಲಿಡುವುದು ಖಚಿತವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಭದ್ರತೆ ಒದಗಿಸಲಾಗಿದೆ.

14 ವರ್ಷಗಳ ಬಳಿಕ ಶೂಟಿಂಗ್​ಗಾಗಿ ಕೇರಳಕ್ಕೆ ಬಂದ ದಳಪತಿ ವಿಜಯ್; ಸಿಕ್ತು ಭರ್ಜರಿ ಸ್ವಾಗತ
ವಿಜಯ್
Follow us on

ನಟ ದಳಪತಿ ವಿಜಯ್ (Thalapathy Vijay) ಅವರಿಗೆ ತಮಿಳುನಾಡು ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಕರ್ನಾಟಕ, ಕೇರಳದಲ್ಲಿ ಅವರನ್ನು ಆರಾಧಿಸೋರ ಸಂಖ್ಯೆ ದೊಡ್ಡದಿದೆ. ಈಗ ಅವರು 14 ವರ್ಷಗಳ ಬಳಿಕ ಶೂಟಿಂಗ್​ಗಾಗಿ ಕೇರಳಕ್ಕೆ ತೆರಳಿದ್ದಾರೆ. ವಿಜಯ್ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ವಿಮಾನ ನಿಲ್ದಾಣದಲ್ಲಿ ಅವರು ಆಗಮಿಸುವುದಕ್ಕೂ ಮೊದಲೇ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಿರುವನಂತಪುರ ವಿಮಾನ ನಿಲ್ದಾಣಕ್ಕೆ ವಿಜಯ್ ಆಗಮಿಸಿದ್ದಾರೆ. ಅವರ ಮುಂದಿನ ಸಿನಿಮಾ ‘GOAT’ (ಗ್ರೇಟೆಸ್ಟ್ ಆಫ್ ಆಲ್ ಟೈಮ್) ಸಿನಿಮಾ ಶೂಟ್​ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ವಿಜಯ್ ಹೋದಲ್ಲೆಲ್ಲ ಬಿಗಿ ಭದ್ರತೆ ಇರಲಿದೆ. ಅವರು ಈಗ ಕೇವಲ ನಟ ಮಾತ್ರ ಅಲ್ಲ. ವಿಜಯ್ ರಾಜಕೀಯಕ್ಕೂ ಕಾಲಿಡುವುದು ಖಚಿತವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಭದ್ರತೆ ಒದಗಿಸಲಾಗಿದೆ.

ವಿಜಯ್​ಗೆ ಸಂಬಂಧಿಸಿದ ಟ್ವೀಟ್

ಈ ಮೊದಲು 2011ರಲ್ಲಿ ರಿಲೀಸ್ ಆದ ‘ಕಾವಲನ್’ ಸಿನಿಮಾದ ಶೂಟಿಂಗ್ ಕೇರಳದಲ್ಲಿ ನಡೆದಿತ್ತು. ಆ ಬಳಿಕ ಅವರ ಯಾವ ಸಿನಿಮಾದ ಶೂಟಿಂಗ್ ಕೂಡ ಕೇರಳದಲ್ಲಿ ನಡೆದಿಲ್ಲ. ಈಗ ಮತ್ತೆ ಆಗಮಿಸಿರುವ ಅವರನ್ನು ಫ್ಯಾನ್ಸ್ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಒಂದು ಕೋಟಿ ರೂಪಾಯಿ ದಾನ ನೀಡಿದ ವಿಜಯ್: ಯಾರಿಗೆ? ಏಕೆ?

‘GOAT’ ಸಿನಿಮಾದಲ್ಲಿ ವಿಜಯ್ ಜೊತೆ ಪ್ರಭುದೇವ, ಪ್ರಶಾಂತ್, ವಿನಯ್, ಮೀನಾಕ್ಷಿ ಚೌಧರಿ ಮೊದಲಾದವರು ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಯುವಾನ್ ಶಂಕರ್ ರಾಜ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಜಿಎಸ್ ಎಂಟರ್​ಟೇನ್​ಮೆಂಟ್ ಮೂಲಕ ಸಿನಿಮಾ ಮೂಡಿ ಬರಲಿದೆ. ಈ ಚಿತ್ರದ ಶೂಟಿಂಗ್ ಚೆನ್ನೈ, ಥೈಲ್ಯಾಂಡ್, ಹೈದರಾಬಾದ್ ಹಾಗೂ ಪಾಂಡಿಚೇರಿಯಲ್ಲಿ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ