ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್​ಡೇಟ್

ದಳಪತಿ ವಿಜಯ್ ಅವರ ಕರೂರು ರ‍್ಯಾಲಿ ದುರಂತದಲ್ಲಿ 41 ಜನರು ಸಾವಿಗೀಡಾಗಿ, 100ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದು ವಿಜಯ್ ರಾಜಕೀಯ ಭವಿಷ್ಯಕ್ಕೆ ಹಿನ್ನಡೆ ತಂದಿದೆ. ಆದರೂ, ಅವರ ಕೊನೆಯ ಸಿನಿಮಾ 'ಜನ ನಾಯಗನ್' ಜನವರಿ 9ರಂದು ತೆರೆಗೆ ಬರಲಿದೆ ಎಂದು ತಂಡ ಸ್ಪಷ್ಟಪಡಿಸಿದೆ. ಈ ಚಿತ್ರದ ನಂತರ ವಿಜಯ್ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಪ್ರವೇಶಿಸಲಿದ್ದಾರೆ.

ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್​ಡೇಟ್
ಜನ ನಾಯಗನ್
Updated By: ರಾಜೇಶ್ ದುಗ್ಗುಮನೆ

Updated on: Nov 07, 2025 | 2:01 PM

ದಳಪತಿ ವಿಜಯ್ (Thalapathy Vijay) ಅವರು ಕರೂರಿನಲ್ಲಿ ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ 41 ಜನರು ನಿಧನ ಹೊಂದಿ, 100ಕ್ಕೂ ಅಧಿಕ ಜನರು ಗಾಯಗೊಂಡರು. ಈ ಘಟನೆ ವಿಜಯ್​ಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿತು ಎಂದರೂ ತಪ್ಪಾಗಲಿಕ್ಕಿಲ್ಲ. ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಜನವರಿ 9ರಂದು ತೆರೆಗೆ ಬರಬೇಕಿದೆ. ಕರೂರು ಘಟನೆಯಿಂದ ಸಿನಿಮಾ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ತಂಡದವರು ಸ್ಪಷ್ಟನೆ ಕೊಟ್ಟಿದ್ದಾರೆ.

‘ಜನ ನಾಯಗನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ಎಚ್​. ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಅಜಿತ್ ಕುಮಾರ್ ಜೊತೆ ಸತತ ಹ್ಯಾಟ್ರಿಕ್ ಸಿನಿಮಾ ನೀಡಿದ ಅವರು, ಈಗ ವಿಜಯ್ ಜೊತೆ ಕೈ ಜೋಡಿಸಿರೋದು ವಿಶೇಷ. ಈ ಸಿನಿಮಾ ಅಂದುಕೊಂಡ ದಿನಾಂಕದಂದೇ ತೆರೆಗೆ ಬರಲಿದೆ.

ರಿಲೀಸ್ ಆಗಿರೋ ಹೊಸ ಪೋಸ್ಟರ್​ನಲ್ಲಿ ಜನರ ಮಧ್ಯೆ ವಿಜಯ್ ಅವರು ನಿಂತಿದ್ದಾರೆ. ಅವರನ್ನು ಜನರು ಮುಟ್ಟುತ್ತಿದ್ದಾರೆ. ಸಿನಿಮಾ ಮೇಲೆ ಜನವರಿ 9ರಂದು ಬರುತ್ತಿದ್ದೇವೆ ಎಂದು ಬರೆಯಲಾಗಿದೆ. ಈ ಸಿನಿಮಾ ಬಳಿಕ ವಿಜಯ್ ಅವರು ರಾಜಕೀಯಕ್ಕೆ ಕಾಲಿಡಲಿದ್ದಾರೆ. ಹೀಗಾಗಿಯೇ ಸಿನಿಮಾನ ರಾಜಕೀಯ ಕಥಾ ಹಂದರದ ಹಿನ್ನೆಲೆಯಲ್ಲಿ ಮಾಡಲಾಗುತ್ತಿದೆ ಎಂದು ವರದಿ ಆಗಿದೆ. ಈ ಸಿನಿಮಾ ಥಿಯೇಟರ್​ಅಲ್ಲಿ ರಿಲೀಸ್ ಆದ ಬಳಿಕ ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ.

ಸಿನಿಮಾ ರಂಗದಲ್ಲಿ ಯಶಸ್ಸು ಕಂಡ ಬಳಿಕ ವಿಜಯ್ ಅವರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ. 2026ರ ತಮಿಳುನಾಡಿನ ವಿಧಾನಸಭಾ ಸುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅವರ ಪಕ್ಷದವರು ಸ್ಪರ್ಧೆ ಮಾಡೋದು ಖಚಿತ ಆಗಿದೆ. ಈಗ ಕರೂರು ರ‍್ಯಾಲಿಯಲ್ಲಿ ನಡೆದ ದುರಂತ ವಿಜಯ್​ಗೆ ಸಾಕಷ್ಟು ಹಿನ್ನಡೆಯನ್ನು ತಂದಿದೆ.

ಇದನ್ನೂ ಓದಿ: ‘ರ‍್ಯಾಲಿಗೆ ಬಂದವರೆಲ್ಲ ನಿಮಗೆ ವೋಟ್ ಮಾಡಲ್ಲ’; ದಳಪತಿ ವಿಜಯ್​ಗೆ ಕಮಲ್ ಹಾಸನ್ ಕಿವಿಮಾತು

ವಿಜಯ್ ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ‘ಜನ ನಾಯಗನ್’ ಸಿನಿಮಾ ಮೂಲಕ ತಮಿಳಿಗೆ ಕಾಲಿರಿಸಿದೆ. ಸಿನಿಮಾ ಅನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಮಲಯಾಳಂ ಚೆಲುವೆ ಮಮಿತಾ ಬೈಜು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.