Leo Movie: ಶೂಟಿಂಗ್​ ಮುಕ್ತಾಯಕ್ಕೂ ಮುನ್ನವೇ 400 ಕೋಟಿ ರೂ. ವ್ಯವಹಾರ ಮಾಡಿದ ‘ಲಿಯೋ’ ಸಿನಿಮಾ

Thalapathy Vijay | Lokesh Kanagaraj: ಭಾರತ ವಿವಿಧ ರಾಜ್ಯಗಳಲ್ಲಿ ‘ಲಿಯೋ’ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಮುಗಿಬಿದ್ದಿದ್ದಾರೆ. ವಿದೇಶದಲ್ಲೂ ಡಿಮ್ಯಾಂಡ್​ ಜೋರಾಗಿದೆ.

Leo Movie: ಶೂಟಿಂಗ್​ ಮುಕ್ತಾಯಕ್ಕೂ ಮುನ್ನವೇ 400 ಕೋಟಿ ರೂ. ವ್ಯವಹಾರ ಮಾಡಿದ ‘ಲಿಯೋ’ ಸಿನಿಮಾ
ದಳಪತಿ ವಿಜಯ್

Updated on: Feb 27, 2023 | 5:55 PM

2023ರ ಆರಂಭದಲ್ಲಿಯೇ ನಟ ದಳಪತಿ ವಿಜಯ್​ (Thalapathy Vijay) ಅವರು ಗೆಲುವಿನ ನಗೆ ಬೀರಿದರು. ಅವರು ನಟಿಸಿದ ‘ವಾರಿಸು’ ಸಿನಿಮಾ ಸೂಪರ್ ಹಿಟ್​ ಆಯಿತು. ಈ ಗೆಲುವಿನಿಂದಾಗಿ ಕಾಲಿವುಡ್​ನಲ್ಲಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ‘ವಾರಿಸು’ ಚಿತ್ರ ರಿಲೀ​ಸ್​ ಆಗುವುದಕ್ಕೂ ಮುನ್ನವೇ ದಳಪತಿ ವಿಜಯ್​ ಅವರು ಲೋಕೇಶ್​ ಕಗನರಾಜ್​ (Lokesh Kanagaraj) ನಿರ್ದೇಶನದ ಹೊಸ ಸಿನಿಮಾದ ಕೆಲಸಗಳಲ್ಲಿ ಭಾಗಿ ಆಗಿದ್ದರು. ಈ ಚಿತ್ರಕ್ಕೆ ‘ಲಿಯೋ’ ಎಂದು ಶೀರ್ಷಿಕೆ ಇಡಲಾಗಿದೆ. ಅಚ್ಚರಿ ಏನೆಂದರೆ, ಈ ಸಿನಿಮಾದ ಶೂಟಿಂಗ್​ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬರೋಬ್ಬರಿ 400 ಕೋಟಿ ರೂಪಾಯಿ ಬಿಸ್ನೆಸ್​ ಆಗಿದೆ ಎಂದು ವರದಿ ಆಗಿದೆ. ಆ ಕಾರಣದಿಂದ ‘ಲಿಯೋ’ (Leo Movie) ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

ತಮಿಳು ಚಿತ್ರರಂಗದಲ್ಲಿ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಸೋಲಿಲ್ಲದ ಸರದಾರನಂತೆ ಮಿಂಚುತ್ತಿದ್ದಾರೆ. ಅವರು ನಿರ್ದೇಶಿಸಿದ ‘ವಿಕ್ರಮ್​’ ಸಿನಿಮಾ ಕಳೆದ ವರ್ಷ ಸೂಪರ್​ ಹಿಟ್​ ಆಯಿತು. ಈಗ ಅವರು ‘ಲಿಯೋ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. 2023ರಲ್ಲೇ ಈ ಸಿನಿಮಾ ರಿಲೀಸ್​ ಆಗಲಿದೆ. ಲೋಕೇಶ್​ ಕನಗರಾಜ್​ ಮತ್ತು ದಳಪತಿ ವಿಜಯ್​ ಕಾಂಬಿನೇಷನ್​ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಭರವಸೆ ಇದೆ. ಹಾಗಾಗಿ ಈ ಚಿತ್ರದ ಪ್ರೀ-ರಿಲೀಸ್​ ಬಿಸ್ನೆಸ್​ ಚೆನ್ನಾಗಿ ಆಗುತ್ತಿದೆ.

ಇದನ್ನೂ ಓದಿ:  Trisha: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

ಇದನ್ನೂ ಓದಿ
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

‘ಲಿಯೋ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು 120 ಕೋಟಿ ರೂಪಾಯಿ ನೀಡಿ ನೆಟ್​ಫ್ಲಿಕ್ಸ್​ ಖರೀದಿಸಿದೆ. ಇದರ ಕಿರುತೆರೆ ಪ್ರಸಾರ ಹಕ್ಕುಗಳು ಸನ್​ ಟಿವಿ ಬಳಿ ಇವೆ. ಅದರ ಬೆಲೆ 70 ಕೋಟಿ ರೂಪಾಯಿ ಎನ್ನಲಾಗಿದೆ. ಸೋನಿ ಮ್ಯೂಸಿಕ್​ ಕಂಪನಿಯು 18 ಕೋಟಿ ರೂಪಾಯಿ ನೀಡಿ ‘ಲಿಯೋ’ ಚಿತ್ರದ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರದ ಬಿಸ್ನೆಸ್​ ಇಷ್ಟಕ್ಕೇ ಮುಗಿದಿಲ್ಲ. ಸಿನಿಮಾ ವಿತರಣೆ ಹಕ್ಕುಗಳು ಕೂಡ ಹಾಟ್​ ಕೇಕ್​ ರೀತಿ ಸೇಲ್​ ಆಗುತ್ತಿವೆ.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್​ ನಟನೆಯ 67ನೇ ಚಿತ್ರಕ್ಕೆ ‘ಲಿಯೋ’ ಎಂದು ಹೆಸರಿಟ್ಟ ನಿರ್ದೇಶಕ ಲೋಕೇಶ್​ ಕನಗರಾಜ್​​

ಭಾರತ ವಿವಿಧ ರಾಜ್ಯಗಳಲ್ಲಿ ‘ಲಿಯೋ’ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಮುಗಿಬಿದ್ದಿದ್ದಾರೆ. ವಿದೇಶದಲ್ಲೂ ಡಿಮ್ಯಾಂಡ್​ ಜೋರಾಗಿದೆ. ಆ ಪೈಕಿ ಬಹುತೇಕ ಬಿಸ್ನೆಸ್​ ಉತ್ತಮವಾಗಿಯೇ ಆಗಿದೆ. ಎಲ್ಲವನ್ನೂ ಸೇರಿಸಿದರೆ ಬರೋಬ್ಬರಿ 400 ಕೋಟಿ ರೂಪಾಯಿ ಹರಿದುಬಂದಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್​ ಮುಗಿಯುವುದಕ್ಕೂ ಮುನ್ನ ಇಷ್ಟೊಂದು ವ್ಯವಹಾರ ಮಾಡಿದ ಮೊದಲ ತಮಿಳು ಸಿನಿಮಾ ಎಂಬ ಖ್ಯಾತಿಗೂ ‘ಲಿಯೋ’ ಚಿತ್ರ ಪಾತ್ರವಾಗುತ್ತಿದೆ.

ಈ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ತ್ರಿಷಾ ಕೃಷ್ಣನ್​, ಮಿಸ್ಕಿನ್​, ಸಂಜಯ್​ ದತ್​, ಪ್ರಿಯಾ ಆನಂದ್​, ಗೌತಮ್​ ವಾಸುದೇವ ಮೆನನ್​ ಮುಂತಾದವರು ಕೂಡ ನಟಿಸುತ್ತಿದ್ದಾರೆ. ಅಕ್ಟೋಬರ್​ 19ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:55 pm, Mon, 27 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us