
ದಳಪತಿ ವಿಜಯ್ (Thalapathy Vijay) ಭಾರತದ ಹಾಲಿ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದ ನಾನಾ ರಾಜ್ಯಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ದಳಪತಿ ವಿಜಯ್ ಹೊಂದಿದ್ದಾರೆ. ವಿಜಯ್ ಅವರ ಸಿನಿಮಾಗಳು ನೂರಾರು ಕೋಟಿ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡುತ್ತವೆ. ಇದರ ಜೊತೆಗೆ ವಿಜಯ್, ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂದು ಸಹ ಹೇಳಲಾಗುತ್ತಿತ್ತು. ಆದರೆ ಇದೀಗ ದಳಪತಿ ವಿಜಯ್ ಚುನಾವಣೆಗೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ಸಹ ಘೋಷಣೆ ಮಾಡಿದ್ದಾರೆ. ಈ ಆಸ್ತಿ ವಿವರ ನೋಡಿದರೆ ದಳಪತಿ ವಿಜಯ್ ಬಗ್ಗೆ ಹೇಳಲಾಗಿದ್ದ ದೊಡ್ಡ ಸುಳ್ಳೊಂದು ಬಹಿರಂಗವಾಗಿದೆ.
ವಿಜಯ್ ಅವರು ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಸುದ್ದಿ ಹರಡಲಾಗಿತ್ತು, ಅವರ ಅಭಿಮಾನಿಗಳು ಇದಕ್ಕೆ ಭಾರಿ ಪ್ರಚಾರ ನೀಡಿದ್ದರು. ಆದರೆ ಈಗ ವಿಜಯ್ ಅವರ ಆಸ್ತಿ ವಿವರ ನೋಡಿದರೆ ಇದು ಸುಳ್ಳು ಎಂಬುದು ಸ್ಪಷ್ಟವಾಗುತ್ತಿದೆ. ವಿಜಯ್ ಅವರು ಪ್ರತಿ ಸಿನಿಮಾಕ್ಕೆ 200 ರಿಂದ 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಅವರ ಕೊನೆಯ ಸಿನಿಮಾ ಆಗಿರುವ, ಇನ್ನೂ ಬಿಡುಗಡೆ ಆಗದ ‘ಜನ ನಾಯಗನ್’ ಸಿನಿಮಾಕ್ಕೆ 275 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ವಿಜಯ್ ಅವರ ಆಸ್ತಿ ವಿವರ ನೋಡಿದರೆ ಇದೆಲ್ಲ ಸುಳ್ಳು ಎಂದು ತಿಳಿದು ಬರುತ್ತಿದೆ.
ದಳಪತಿ ವಿಜಯ್ ಅವರು ನಾಮಪತ್ರದಲ್ಲಿ ಐದು ವರ್ಷಗಳ ವಾರ್ಷಿಕ ಆದಾಯ, ಆಸ್ತಿಗಳ ಮಾಹಿತಿಯನ್ನು ನೀಡಿದ್ದಾರೆ. ಇದರಲ್ಲಿ 2021-22ರ ಆರ್ಥಿಕ ವರ್ಷದಲ್ಲಿ ಮಾತ್ರವೇ ವಿಜಯ್ ಅವರು 237 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದ್ದಾರೆ. ಅದರ ಹೊರತಾಗಿ ಇನ್ನುಳಿದ ಹಣಕಾಸು ವರ್ಷಗಳಲ್ಲಿ ವಿಜಯ್ ಅವರ ವಾರ್ಷಿಕ ಗಳಿಕೆ 200 ಕೋಟಿ ಸಹ ದಾಟಿಲ್ಲ. ವಿಜಯ್ ಅವರು ಕಳೆದ ಹಣಕಾಸು ವರ್ಷ ಅಂದರೆ 2024-25 ರಲ್ಲಿ 184 ಕೋಟಿ ಗಳಿಸಿದ್ದಾರೆ, 2023-24ರಲ್ಲಿ 105 ಕೋಟಿ ಗಳಿಕೆ ಮಾಡಿದ್ದಾರೆ. 2022-23 ರಲ್ಲಿ 198 ಕೋಟಿ ಗಳಿಸಿದ್ದಾರೆ. 2021-22 ರಲ್ಲಿ 237 ಕೋಟಿ ಮತ್ತು ಕೋವಿಡ್ ಸಮಯವಾದ 2020-21 ರಲ್ಲಿ ಕೇವಲ 8 ಕೋಟಿ ಗಳಿಕೆ ಮಾಡಿದ್ದಾರೆ.
ಇದನ್ನೂ ಓದಿ:ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?
ವಿಜಯ್ ಅವರು ಪ್ರತಿ ಸಿನಿಮಾಕ್ಕೆ 200 ಕೋಟಿ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ ಅವರ ಆಸ್ತಿ ವಿವರ ನೋಡಿದರೆ ಅದು ಸಳ್ಳೆಂಬುದು ಖಾತ್ರಿ ಆಗುತ್ತಿದೆ. ವಿಜಯ್ ಅವರ ಇತರೆ ಉದ್ಯಮಗಳಿಂದಲೂ ಒಟ್ಟು ಗೂಡಿಯೇ ವಾರ್ಷಿ 200 ಕೋಟಿ ಗಳಿಕೆ ದಾಟಿಲ್ಲ (2021-22ರ ಆರ್ಥಿಕ ವರ್ಷ ಹೊರತುಪಡಿಸಿ).
ವಿಜಯ್ ಅವರು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಸ್ಥಾಪಿಸಿದ್ದು, ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಹುತೇಕ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಸ್ವತಃ ವಿಜಯ್ ಅವರು ತಿರುಚಿ ಈಸ್ಟ್ ಮತ್ತು ಪೆರಂಬೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಭರ್ಜರಿಯಾಗಿ ಚುನಾವಣೆ ಪ್ರಚಾರವನ್ನೂ ಸಹ ಮಾಡುತ್ತಿದ್ದಾರೆ. ಫಲಿತಾಂಶ ಏನಾಗುತ್ತದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ