ವಿಚ್ಛೇದನಕ್ಕೆ ಅರ್ಜಿ: ವಿಜಯ್ ಪತ್ನಿ ಇಟ್ಟಿರುವ ಬೇಡಿಕೆಗಳೇನು?

Thalapathy Vijay: ವಿಜಯ್ ಅವರು ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದೇ ಸಮಯದಲ್ಲಿ ವಿಜಯ್ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ವಿಜಯ್​​ಗೆ ರಾಜಕೀಯವಾಗಿ ಸಣ್ಣ ಹಿನ್ನಡೆ ಮೂಡಿಸಿದೆ. ವಿಚ್ಚೇದನಕ್ಕೆ ಅರ್ಜಿ ಹಾಕಿರುವ ಸಂಗೀತ, ವಿಜಯ್ ಎದುರು ಭಾರಿ ಬೇಡಿಕೆಗಳನ್ನು ಇರಿಸಿದ್ದಾರೆ. ವಿಚ್ಛೇದನಕ್ಕಾಗಿ ಭಾರಿ ಮೊತ್ತವನ್ನೇ ವಿಜಯ್ ಅವರು ಪತ್ನಿಗೆ ನೀಡಬೇಕಿದೆ.

ವಿಚ್ಛೇದನಕ್ಕೆ ಅರ್ಜಿ: ವಿಜಯ್ ಪತ್ನಿ ಇಟ್ಟಿರುವ ಬೇಡಿಕೆಗಳೇನು?
Thalapathy Vijay

Updated on: Mar 01, 2026 | 2:54 PM

ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ವಿಜಯ್ ಅವರು ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದೇ ಸಮಯದಲ್ಲಿ ವಿಜಯ್ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ವಿಜಯ್​​ಗೆ ರಾಜಕೀಯವಾಗಿ ಸಣ್ಣ ಹಿನ್ನಡೆ ಮೂಡಿಸಿದೆ. ವಿಚ್ಚೇದನಕ್ಕೆ ಅರ್ಜಿ ಹಾಕಿರುವ ಸಂಗೀತ, ವಿಜಯ್ ಎದುರು ಭಾರಿ ಬೇಡಿಕೆಗಳನ್ನು ಇರಿಸಿದ್ದಾರೆ. ವಿಚ್ಛೇದನಕ್ಕಾಗಿ ಭಾರಿ ಮೊತ್ತವನ್ನೇ ವಿಜಯ್ ಅವರು ಪತ್ನಿಗೆ ನೀಡಬೇಕಿದೆ.

ವಿಚ್ಚೇದನಕ್ಕೆ ಕಳೆದ ವರ್ಷ ಡಿಸೆಂಬರ್​​ನಲ್ಲಿಯೇ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ ಸಂಗೀತ ವಿವರಿಸಿರುವಂತೆ ತಮ್ಮ ಪತಿ ವಿಜಯ್ ಅವರಿಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇದ್ದು, ಆ ಮಾಹಿತಿ ಸಂಗೀತಾ ಅವರಿಗೆ 2021ರಲ್ಲಿ ತಿಳಿದು ಬಂತಂತೆ. ಪತಿಗೆ ವಿವಾಹೇತರ ಸಂಬಂಧ ಇರುವ ಕಾರಣವನ್ನು ಪರಿಗಣಿಸಿ ತಮಗೆ ವಿಚ್ಛೇದನ ಕೊಡಿಸುವಂತೆ ಸಂಗೀತ ಬೇಡಿಕೆ ಇರಿಸಿದ್ದು, ಜೊತೆಗೆ ಜಿವನಾಂಶ ಹಾಗೂ ಇತರೆ ಬೇಡಿಕೆಗಳನ್ನು ಸಹ ಇರಿಸಿದ್ದಾರೆ.

ವಿಜಯ್ ಪತ್ನಿ, ತಮ್ಮ ಹಾಗೂ ತಮ್ಮ ಮಕ್ಕಳ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಜೀವನಾಂಶ ಕೊಡಿಸುವಂತೆ ಬೇಡಿಕೆ ಇರಿಸಿದ್ದಾರೆ. ತಮ್ಮ ಪ್ರಸ್ತುತ ಸಾಮಾಜಿಕ ಸ್ಟೇಟಸ್​​ಗೆ ತಕ್ಕಂತೆ ಜೀವನ ನಿರ್ವಹಿಸುವುದನ್ನು ಪರಿಗಣಿಸಿ ಜೀವನಾಂಶ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ ವಿಚ್ಚೇದನ ಪ್ರಕ್ರಿಯೆ ಪೂರ್ಣ ಆಗುವವರೆಗೆ ತಮಗೆ ಈಗಿರುವ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದಾರೆ. ಜೊತೆಗೆ ಮಗ ಮತ್ತು ಮಗಳ ಭವಿಷ್ಯದ ದೃಷ್ಟಿಯಿಂದ (ಶಿಕ್ಷಣ, ಮದುವೆ ಇತ್ಯಾದಿ) ಹಣದ ಭವಿಷ್ಯ ನಿಧಿ ಮಾಡಿಸಿಕೊಡಬೇಕು ಎಂದು ಸಹ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ?

ವಿಜಯ್ ಹಾಗೂ ಸಂಗೀತ ಅವರು 1999 ರಲ್ಲಿ ವಿವಾಹವಾಗಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇವರಿಗಿದೆ. ಮಗ ಈಗಾಗಲೇ ನಿರ್ದೇಶಕನಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇದೀಗ ಬರೋಬ್ಬರಿ 27 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಪತ್ನಿ ಸಂಗೀತ ನಿರ್ಧರಿಸಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇರುವ ಬಗ್ಗೆ ಈ ಹಿಂದೆಯೂ ಸುದ್ದಿಗಳು ಹರಿದಾಡಿದ್ದವು. ವಿಜಯ್ ಅವರಿಗೆ ನಟಿ ತ್ರಿಷಾ ಜೊತೆಗೆ ಸಂಬಂಧ ಇದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us