ಸಮಂತಾ ರಾಜಿ ಆಗಲು ಒಪ್ಪಿಕೊಂಡಿದ್ದು ಏಕೆ? ಭಾರಿ ವಿವಾದದ ಬಳಿಕ ಬಾಯ್ಬಿಟ್ಟ ನಟಿ

Samantha Akkineni: ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಅಕ್ಕಿನೇನಿ ನಟಿಸಿದ ರಾಜಿ ಎಂಬ ಪಾತ್ರದ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆ ಪಾತ್ರದ ಕುರಿತು ಈಗ ಸಮಂತಾ ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಮಂತಾ ರಾಜಿ ಆಗಲು ಒಪ್ಪಿಕೊಂಡಿದ್ದು ಏಕೆ? ಭಾರಿ ವಿವಾದದ ಬಳಿಕ ಬಾಯ್ಬಿಟ್ಟ ನಟಿ
‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ನಟಿ ಸಮಂತಾ ಅಕ್ಕಿನೇನಿ

Updated on: Jun 05, 2021 | 9:08 AM

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಈ ವೆಬ್​ ಸರಣಿ ಮೂಲಕ ಇದೇ ಮೊದಲ ಬಾರಿಗೆ ನಟಿ ಸಮಂತಾ ಅವರು ಡಿಜಿಟಲ್​ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ರಾಜಿ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ತಮಿಳು ಉಗ್ರಗಾಮಿಯ ರೀತಿಯಲ್ಲಿ ಆ ಪಾತ್ರ ಬಿಂಬಿತವಾಗಿದೆ ಎಂಬ ಅನುಮಾನದಲ್ಲಿ ಬಿಡುಗಡೆಗೂ ಮನ್ನವೇ ‘ದಿ ಫ್ಯಾಮಿಲಿ ಮ್ಯಾನ್​ 2’ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಆಗ ಮೌನ ವಹಿಸಿದ್ದ ಸಮಂತಾ ಈಗ ಬಾಯ್ಬಿಟ್ಟಿದ್ದಾರೆ. ಪ್ರಿಯಾಮಣಿ, ಮನೋಜ್​ ಬಾಜಪೇಯ್​ ಮುಂತಾದವರು ನಟಿಸಿರುವ ಈ ವೆಬ್​ ಸರಣಿಗೆ ಭಾರಿ ಯಶಸ್ಸು ಸಿಕ್ಕಿದೆ. ಆ ಖುಷಿಯಲ್ಲಿ ಸಮಂತಾ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.

‘ಎಲ್ಲ ಕಡೆಗಳಿಂದ ಒಳ್ಳೆಯ ವಿಮರ್ಶೆ ಕೇಳಿಬರುತ್ತಿರುವುದಕ್ಕೆ ತುಂಬ ಖುಷಿ ಆಗುತ್ತಿದೆ. ಈ ರಾಜಿ ಪಾತ್ರ ನನ್ನ ಪಾಲಿಗೆ ಯಾವಾಗಲೂ ಸ್ಪೆಷಲ್​ ಆಗಿರಲಿದೆ. ನಿರ್ದೇಶಕರು ಬಂದು ನನಗೆ ಈ ಅವಕಾಶ ನೀಡಿದಾಗ, ರಾಜಿ ಪಾತ್ರ ಮಾಡಲು ಬಹಳ ಸೂಕ್ಷ್ಮತೆ ಬೇಕಾಗುತ್ತದೆ ಎಂಬುದು ಗೊತ್ತಾಯಿತು. ಕ್ರಿಯೇಟಿವ್​ ಟೀಮ್​ನವರು ಕೆಲವು ಡಾಕ್ಯುಮೆಂಟರಿ ಕಳಿಸಿ, ಅದನ್ನು ನೋಡಲು ಹೇಳಿದ್ದರು. ಅದನ್ನು ನೋಡಿದಾಗ ಅಸಂಖ್ಯ ತಮಿಳು ಈಳಂ ಜನರು ಅನುಭವಿಸಿದ ಸಾವು-ನೋವಿನ ಬಗ್ಗೆ ತಿಳಿದುಬಂತು. ಆಗ ಜಗತ್ತು ಸುಮ್ಮನೇ ನೋಡುತ್ತಿತ್ತು. ಇಂದಿಗೂ ಅನೇಕರು ಕಷ್ಟಪಡುತ್ತಿದ್ದಾರೆ’ ಎನ್ನುವ ಮೂಲಕ ತಾವು ಈ ವೆಬ್​ ಸಿರೀಸ್​ ಒಪ್ಪಿಕೊಂಡಿದ್ದು ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ.

‘ರಾಜಿ ಪಾತ್ರ ಕಾಲ್ಪನಿಕವೇ ಆಗಿರಬಹುದು. ಆದರೆ ಅಸಮಾನತೆಯ ಯುದ್ಧದಲ್ಲಿ ಮಡಿದ ಹಾಗೂ ಇಂದಿಗೂ ಆ ಯುದ್ಧದ ನೆನಪಿನಲ್ಲಿ ನೋವು ಅನುಭವಿಸುತ್ತಿರುವ ಎಲ್ಲರಿಗೂ ಈ ಪಾತ್ರ ನಮನ ಸಲ್ಲಿಸುತ್ತದೆ ಎಂಬುದು ನನ್ನ ಅಭಿಪ್ರಾಯ. ರಾಜಿ ಪಾತ್ರವನ್ನು ತುಂಬ ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ಬಿಂಬಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಒಂದು ವೇಳೆ ವಿಫಲವಾಗಿದ್ದರೆ, ಅಂತಹ ಅಸಂಖ್ಯಾತ ಜನರು ತಿರಸ್ಕಾರಕ್ಕೆ ಒಳಗಾಗುತ್ತಿದ್ದರು’ ಎಂದು ಸೋಶಿಯಲ್​ ಮೀಡಿಯಾ ಮೂಲಕ ಸಮಂತಾ ತಿಳಿಸಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್​ 2’ಗೆ ರಾಜ್​ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಜೂ.3ರ ಸಂಖೆಯಿಂದಲೇ ಪ್ರಸಾರ ಆರಂಭಿಸಿರುವ ಈ ವೆಬ್​ ಸೆರಣಿಗೆ ಒಳ್ಳೆಯ ವಿಮರ್ಶೆ ಸಿಕ್ಕಿದೆ.

ಇದನ್ನೂ ಓದಿ:

ಹೇಗಿದೆ ‘ದಿ ಫ್ಯಾಮಿಲಿ ಮ್ಯಾನ್​ 2’? ಮೊದಲ ದಿನವೇ ವೆಬ್​ ಸಿರೀಸ್​ ನೋಡಿ ಫ್ಯಾನ್ಸ್​ ಹೇಳಿದ್ದು ಒಂದೇ ಮಾತು

The Family Man 2 Review: ಲೈಂಗಿಕ ದೌರ್ಜನ್ಯ ನಡೆದರೂ ಸುಮ್ಮನಿರುವ ರಾಜಿ ಹಿಂದಿದೆ ಒಂದು ಕ್ರೌರ್ಯದ ಮುಖ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us