ಹೇಗಿದೆ ‘ದಿ ಫ್ಯಾಮಿಲಿ ಮ್ಯಾನ್​ 2’? ಮೊದಲ ದಿನವೇ ವೆಬ್​ ಸಿರೀಸ್​ ನೋಡಿ ಫ್ಯಾನ್ಸ್​ ಹೇಳಿದ್ದು ಒಂದೇ ಮಾತು

ಹೇಗಿದೆ ‘ದಿ ಫ್ಯಾಮಿಲಿ ಮ್ಯಾನ್​ 2’? ಮೊದಲ ದಿನವೇ ವೆಬ್​ ಸಿರೀಸ್​ ನೋಡಿ ಫ್ಯಾನ್ಸ್​ ಹೇಳಿದ್ದು ಒಂದೇ ಮಾತು
ದಿ ಫ್ಯಾಮಿಲಿ ಮ್ಯಾನ್ 2

Samantha Akkineni | Manoj Bajpayee: ಮೊದಲ ಸೀಸನ್​ ರೀತಿಯೇ ಎರಡನೇ ಸೀಸನ್​ನಲ್ಲೂ ನಟ ಮನೋಜ್​ ಬಾಜಪಾಯಿ ಮೋಡಿ ಮಾಡಿದ್ದಾರೆ. ತನಿಖಾಧಿಕಾರಿಯಾಗಿ ಮತ್ತು ಫ್ಯಾಮಿಲಿ ಮ್ಯಾನ್​ ಆಗಿ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ.

Madan Kumar

| Edited By: Apurva Kumar Balegere

Jun 04, 2021 | 1:02 PM

ಸಮಂತಾ ಅಕ್ಕಿನೇನಿ, ಮನೋಜ್​ ಬಾಜಪಾಯಿ​, ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಬಿಡುಗಡೆ ಆಗಿದೆ. ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಗುರುವಾರ (ಜೂ.3) ಸಂಜೆಯೇ ವೀಕ್ಷಣೆಗೆ ಲಭ್ಯವಾಗಿದೆ. ಬಹಳ ದಿನಗಳಿಂದ ಈ ವೆಬ್​ ಸಿರೀಸ್​ಗಾಗಿ ಕಾದಿದ್ದ ಬಹುತೇಕರು ಒಂದೇ ಬಾರಿಗೆ ಎಲ್ಲ ಎಪಿಸೋಡ್​ಗಳನ್ನು ನೋಡಿ ಮುಗಿಸುತ್ತಿದ್ದಾರೆ. ಎಲ್ಲರಿಂದಲೂ ಪಾಸಿಟಿವ್​ ಪ್ರತಿಕ್ರಿಯೆಗಳು ಬರುತ್ತಿವೆ. ಮೊದಲ ಸೀಸನ್​ಗಿಂತಲೂ ಎರಡನೇ ಸೀಸನ್​ ಚೆನ್ನಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಸೋಶಿಯಲ್​ ಮೀಡಿಯಾ ಮೂಲಕ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ‘ದಿ ಫ್ಯಾಮಿಲಿ ಮ್ಯಾನ್​ 2’ ಮೂಲಕ ಸಮಂತಾ ಅವರು ವೆಬ್​ ಸಿರೀಸ್​ ಲೋಕಕ್ಕೆ ಕಾಲಿಟ್ಟಿದ್ದು, ರಗಡ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 9 ಎಪಿಸೋಡ್​ಗಳ ಈ ಸಿರೀಸ್​ನಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳು ಕೂಡ ಇದೆ. ಒಟ್ಟಾರೆ ಈ ವೆಬ್​ ಸರಣಿ ಕಣ್ತುಂಬಿಕೊಂಡವರು ಒಂದೇ ಮಾತಿನಲ್ಲಿ ‘ಮಾಸ್ಟರ್​ಪೀಸ್​’ ಎಂದು ಹೊಗಳುತ್ತಿದ್ದಾರೆ.

ರಾಜ್​ ಮತ್ತು ಡಿಕೆ ಜೊತೆಯಾಗಿ ನಿರ್ದೇಶನ ಮಾಡಿರುವ ‘ದಿ ಫ್ಯಾಮಿಲಿ ಮ್ಯಾನ್​ 2’ ನಿರೂಪಣೆ ಬಿಗಿಯಾಗಿದೆ. ಪ್ರತಿ ಎಪಿಸೋಡ್​ ಕೂಡ ಥ್ರಿಲ್ಲಿಂಗ್​ ಆಗಿದೆ. ನೋಡುಗರನ್ನು ಸೆಳೆದುಕೊಳ್ಳುವ ಗುಣ ಇದಕ್ಕಿದೆ. ಸಾಹಸ ದೃಶ್ಯಗಳು ಮಾತ್ರವಲ್ಲದೆ ಕಾಮಿಡಿ ಸನ್ನಿವೇಶಗಳು ಕೂಡ ಇಲ್ಲಿನ ಪ್ಲಸ್​ ಪಾಯಿಂಟ್​. ಕಥೆ ಕೂಡ ಕುತೂಹಲ ಭರಿತವಾಗಿದೆ ಎಂದು ಪ್ರೇಕ್ಷಕರು ಅನಿಸಿಕೆ ಹಂಚಿಕೊಂಡಿದ್ದಾರೆ.

ಮೊದಲ ಸೀಸನ್​ ರೀತಿಯೇ ಎರಡನೇ ಸೀಸನ್​ನಲ್ಲೂ ನಟ ಮನೋಜ್​ ಬಾಜಪಾಯಿ​ ಮೋಡಿ ಮಾಡಿದ್ದಾರೆ. ತನಿಖಾಧಿಕಾರಿಯಾಗಿ ಮತ್ತು ಫ್ಯಾಮಿಲಿ ಮ್ಯಾನ್​ ಆಗಿ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ. ‘6ರಿಂದ 9ನೇ ಎಪಿಸೋಡ್​ವರೆಗೆ ವೇಗದ ನಿರೂಪಣೆ ಇದೆ. ಮನೋಜ್​ ಬಾಯಪಾಯಿ ನಿಜವಾಗಿಯೂ ಲೆಜೆಂಡ್​. ಅವರನ್ನು ನಾವು ಇನ್ನಷ್ಟು ಪ್ರೀತಿಸಬೇಕಿದೆ’ ಎಂದು ಅಭಿಮಾನಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.

ಇಷ್ಟು ದಿನಗಳ ಕಾಲ ಸಮಂತಾ ಅವರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರಿಗೆ ‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿ ಸರ್ಪ್ರೈಸ್​ ಸಿಕ್ಕಿದೆ. ಸಿಕ್ಕಾಪಟ್ಟೆ ರಫ್​ ಆ್ಯಂಡ್​ ಟಫ್​​ ಆದಂತಹ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವೆಬ್​ ಸಿರೀಸ್​ ಲೋಕಕ್ಕೆ ಕಾಲಿಡುತ್ತಲೇ ಅವರು ಸಿಕ್ಕಾಪಟ್ಟೆ ಧೂಳೆಬ್ಬಿಸಿದ್ದಾರೆ.

‘ನಿಮ್ಮನ್ನು ನಾವು ಇಂಥ ಅವತಾರದಲ್ಲಿ ನೋಡಿಯೇ ಇರಲಿಲ್ಲ. ಈ ಪಾತ್ರವನ್ನು ನಿಮಗಿಂತ ಚೆನ್ನಾಗಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ‘ಮನೋಜ್​ ಬಾಜಪೇಯ್​ ನಟನೆಯನ್ನು ವರ್ಣಿಸಲು ಪದಗಳೇ ಇಲ್ಲ’ ಎಂದು ಅವರು ಹೇಳಿದ್ದಾರೆ. ಇಂಥ ನೂರಾರು ಟ್ವೀಟ್​ಗಳ ಮೂಲಕ ‘ದಿ ಫ್ಯಾಮಿಲಿ ಮ್ಯಾನ್​ 2’ಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:

‘ದಿ ಫ್ಯಾಮಿಲಿ ಮ್ಯಾನ್​ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್​ ಬಾಜಪೇಯ್

ತಮಿಳರ ಕೋಪಕ್ಕೆ ಕಾರಣವಾದ ಸಮಂತಾ; ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ನಲ್ಲಿ ಅವರು ಮಾಡಿದ ತಪ್ಪೇನು?

Follow us on

Related Stories

Most Read Stories

Click on your DTH Provider to Add TV9 Kannada