Jr NTR: ರಾಮ್​ ಚರಣ್​ ಬರ್ತ್​ಡೇ ಪಾರ್ಟಿಗೆ ಜೂನಿಯರ್​ ಎನ್​ಟಿಆರ್​ ಯಾಕೆ ಬರಲಿಲ್ಲ? ಇಲ್ಲಿದೆ ಕಾರಣ..

Ram Charan Birthday: ‘ಆರ್​ಆರ್​ಆರ್​’ ಚಿತ್ರತಂಡದವರಲ್ಲಿ ಕಿರಿಕ್​ ಆಗಿದ್ದು, ಆ ಕಾರಣದಿಂದಲೇ ಜೂನಿಯರ್​ ಎನ್​ಟಿಆರ್​ ಅವರು ರಾಮ್​ ಚರಣ್​ ಜನ್ಮದಿನದ ಪಾರ್ಟಿಗೆ ಬಂದಿರಲಿಲ್ಲ ಎಂದು ಗಾಸಿಪ್​ ಹಬ್ಬಿಸಲಾಗಿದೆ.

Jr NTR: ರಾಮ್​ ಚರಣ್​ ಬರ್ತ್​ಡೇ ಪಾರ್ಟಿಗೆ ಜೂನಿಯರ್​ ಎನ್​ಟಿಆರ್​ ಯಾಕೆ ಬರಲಿಲ್ಲ? ಇಲ್ಲಿದೆ ಕಾರಣ..
ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್

Updated on: Mar 29, 2023 | 10:43 AM

ಮುಖ್ಯಾಂಶಗಳು

  • ಮಾರ್ಚ್​ 27ರ ರಾತ್ರಿ ಬರ್ತ್​ಡೇ ಪಾರ್ಟಿ ಆಯೋಜಿಸಿದ್ದ ರಾಮ್​ ಚರಣ್​
  • ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಬರಲೇ ಇಲ್ಲ ಜೂನಿಯರ್​ ಎನ್​ಟಿಆರ್​
  • ಸ್ಟಾರ್​ ನಟರಿಬ್ಬರು ಅಂತರ ಕಾಯ್ದುಕೊಂಡಿದ್ದರ ಬಗ್ಗೆ ಹಬ್ಬಿದೆ ಹಲವು ಗಾಸಿಪ್​

ನಟ ರಾಮ್​ ಚರಣ್​ (Ram Charan) ಅವರು ಇತ್ತೀಚೆಗೆ ಅದ್ದೂರಿಯಾಗಿ ಬರ್ತ್​ಡೇ ಪಾರ್ಟಿ ಮಾಡಿಕೊಂಡರು. ತೆಲುಗು ಚಿತ್ರರಂಗದ ಅನೇಕರನ್ನು ಕರೆದು ಅವರು ಔತಣ ನೀಡಿದರು. ಮಾರ್ಚ್​ 27ರ ರಾತ್ರಿ ನಡೆದ ಈ ಪಾರ್ಟಿಯಲ್ಲಿ ಟಾಲಿವುಡ್​ನ ಅನೇಕ ಗಣ್ಯರು ಭಾಗಿ ಆಗಿದ್ದರು. ಆದರೆ ರಾಮ್ ಚರಣ್​ ಅವರ ಸ್ನೇಹಿತ ಜೂನಿಯರ್​ ಎನ್​ಟಿಆರ್​ ಹಾಜರಿ ಹಾಕಿರಲಿಲ್ಲ. ‘ಆರ್​ಆರ್​ಆರ್​’ ಸಿನಿಮಾದಲ್ಲಿ ಈ ಸ್ಟಾರ್​ ಕಲಾವಿದರು ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಹಾಗಿದ್ದರೂ ಕೂಡ ಸ್ನೇಹಿತನ ಜನ್ಮದಿನದ ಪಾರ್ಟಿಗೆ ಜೂನಿಯರ್​ ಎನ್​ಟಿಆರ್​ (Jr NTR) ಬಂದಿಲ್ಲ ಎಂಬುದು ಚರ್ಚೆಯ ವಿಷಯ ಆಗಿದೆ. ಇವರಿಬ್ಬರ ನಡುವೆ ಏನಾದರೂ ಮನಸ್ತಾಪ ಉಂಟಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ ಜೂನಿಯರ್​ ಎನ್​ಟಿಆರ್​ ಅವರು ಗೈರಾಗಿದ್ದಕ್ಕೆ ಅಸಲಿ ಕಾರಣ ಇಲ್ಲಿದೆ…

ಸಣ್ಣ ವಿಚಾರ ಸಿಕ್ಕರೂ ಸಾಕು, ಅದನ್ನೇ ದೊಡ್ಡದು ಮಾಡುತ್ತಾರೆ ಗಾಸಿಪ್​ ಮಂದಿ. ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿಸಿ ಬಂದ ‘ಆರ್​ಆರ್​ಆರ್​’ ಚಿತ್ರತಂಡದವರಲ್ಲಿ ಏನೋ ಕಿರಿಕ್​ ಆಗಿದೆ ಎಂದು ಅನೇಕರು ಮಾತಾಡಿಕೊಂಡಿದ್ದಾರೆ. ಅದೇ ಕಾರಣದಿಂದಲೇ ಜೂನಿಯರ್​ ಎನ್​ಟಿಆರ್​ ಅವರು ರಾಮ್​ ಚರಣ್​ ಜನ್ಮದಿನದ ಪಾರ್ಟಿಗೆ ಬಂದಿರಲಿಲ್ಲ ಎಂದು ಗಾಸಿಪ್​ ಹಬ್ಬಿಸಲಾಗಿದೆ. ಆದರೆ ಅಸಲಿ ವಿಷಯ ಅದು ಅಲ್ಲವೇ ಅಲ್ಲ.

ಇದನ್ನೂ ಓದಿ: ರಾಮ್ ಚರಣ್​ ಜನ್ಮದಿನ; ಸ್ಟಾರ್ ನಟನ ಈ ಸಿನಿಮಾಗಳನ್ನು ನೀವು ಮಿಸ್ ಮಾಡಲೇಬಾರದು

ಇದನ್ನೂ ಓದಿ
ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ?
NTR 30: ಜೂನಿಯರ್​ ಎನ್​ಟಿಆರ್​ 30ನೇ ಚಿತ್ರಕ್ಕೆ ಜಾನ್ವಿ ಕಪೂರ್​ ನಾಯಕಿ; ಇಲ್ಲಿದೆ ಫಸ್ಟ್​ ಲುಕ್​
ಸಿನಿಮಾ ತೊರೆದು ರಾಜಕೀಯಕ್ಕೆ ಹೊರಳಲಿದ್ದಾರೆ ಜೂ.ಎನ್​ಟಿಆರ್​? ನಟನಿಗೆ ಬಂತು ಆಹ್ವಾನ
JR NTR: ಅಮೆರಿಕದಲ್ಲಿ ಜೂ.ಎನ್​ಟಿಆರ್​​ನ​​ ಭೇಟಿ ಮಾಡಲು ಫ್ಯಾನ್ಸ್ ಮುತ್ತಿಗೆ; ವಿಡಿಯೋ ವೈರಲ್

ರಾಮ್​ ಚರಣ್​ ಜನ್ಮದಿನ ಮಾರ್ಚ್​ 27ರಂದು. ಅದಕ್ಕೂ ಒಂದು ದಿನ ಮುಂಚೆ, ಅಂದರೆ ಮಾರ್ಚ್​ 26ರಂದು ಜೂನಿಯರ್ ಎನ್​ಟಿಆರ್​ ಪತ್ನಿ ಲಕ್ಷ್ಮಿ ಪ್ರಣತಿ ಅವರ ಬರ್ತ್​ಡೇ. ಆ ಪ್ರಯುಕ್ತ ಮಾರ್ಚ್​ 26 ಸಂಜೆ ಜೂನಿಯರ್​ ಎನ್​ಟಿಆರ್​ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪತ್ನಿಯ ಹುಟ್ಟುಹಬ್ಬದ ಆಚರಣೆಯಲ್ಲಿ ತೊಡಗಿಕೊಂಡಿದ್ದ ಜೂನಿಯರ್​ ಎನ್​ಟಿಆರ್​ ಅವರು ರಾಮ್​ ಚರಣ್​ ಬರ್ತ್​ಡೇ ಪಾರ್ಟಿಗೆ ಬರಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ರಾಮ್ ಚರಣ್​ಗೆ ‘ಗ್ಲೋಬಲ್ ಸ್ಟಾರ್​’ ಪಟ್ಟ ನೀಡಿದ ಆನಂದ್ ಮಹಿಂದ್ರಾ; ಅಭಿಮಾನಿಗಳು ಒಪ್ಪಿದ್ರಾ?

‘ಆರ್​ಆರ್​ಆರ್​’ ಸಿನಿಮಾ ಬ್ಲಾಕ್​ ಬಸ್ಟರ್​ ಆಗಿರುವುದರಿಂದ ಜೂನಿಯರ್​ ಎನ್​ಟಿಆರ್​ ಅವರ ಮುಂದಿನ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಅವರ 30ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಆ ಚಿತ್ರದ ಕೆಲಸಗಳಲ್ಲಿ ಜೂನಿಯರ್​ ಎನ್​ಟಿಆರ್​ ಬ್ಯುಸಿ ಆಗಿದ್ದಾರೆ. ‘ಎನ್​ಟಿಆರ್​ 30’ ಎಂದು ಕರೆಯಲಾಗುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್​ ನಟಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಅತ್ತ ರಾಮ್​ ಚರಣ್​ ಅವರು ‘ಗೇಮ್​ ಚೇಂಜರ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:43 am, Wed, 29 March 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us