ರಾಮ್ ಚರಣ್​ ಜನ್ಮದಿನ; ಸ್ಟಾರ್ ನಟನ ಈ ಸಿನಿಮಾಗಳನ್ನು ನೀವು ಮಿಸ್ ಮಾಡಲೇಬಾರದು

Ram Charan Birthday: ಒಪ್ಪಿಕೊಂಡ ಸಿನಿಮಾ ರಿಲೀಸ್ ಅದ ಬಳಿಕವೇ ರಾಮ್ ಚರಣ್ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರ ನಟನೆಯ ಈ ಐದು ಚಿತ್ರಗಳನ್ನು ನೀವು ಮಿಸ್ ಮಾಡಲೇಬಾರದು.

ರಾಮ್ ಚರಣ್​ ಜನ್ಮದಿನ; ಸ್ಟಾರ್ ನಟನ ಈ ಸಿನಿಮಾಗಳನ್ನು ನೀವು ಮಿಸ್ ಮಾಡಲೇಬಾರದು
ರಾಮ್ ಚರಣ್ ನಟನೆಯ ಐದು ಸಿನಿಮಾಗಳು
Follow us
ರಾಜೇಶ್ ದುಗ್ಗುಮನೆ
|

Updated on: Mar 27, 2023 | 7:54 AM

ಟಾಲಿವುಡ್​ನ ಸ್ಟಾರ್ ನಟ ರಾಮ್ ಚರಣ್ (Ram Charan)​​ ಅವರಿಗೆ ಇಂದು (ಮಾರ್ಚ್ 27) ಬರ್ತ್​ಡೇ ಸಂಭ್ರಮ. ಅವರಿಗೆ ಈಗ 38 ವರ್ಷ ವಯಸ್ಸು. ಎಲ್ಲರೂ ಅವರಿಗೆ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಚಿರಂಜೀವಿ (Chiranjeevi) ಅವರ ಮಗನಾಗಿ ಜನಿಸಿದ ರಾಮ್ ಚರಣ್​ಗೆ ಚಿತ್ರರಂಗಕ್ಕೆ ಸುಲಭವಾಗಿ ಎಂಟ್ರಿ ಸಿಕ್ಕಿತು. ಈಗ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷ ಕಳೆದಿದೆ. ಆದರೆ, ಅವರು ನಟಿಸಿದ್ದು ಕೇವಲ 15 ಚಿತ್ರಗಳಲ್ಲಿ ಮಾತ್ರ. ಸಿನಿಮಾ ಆಯ್ಕೆ ವಿಚಾರದಲ್ಲಿ ಅವರು ತುಂಬಾನೇ ಚ್ಯೂಸಿ. ಒಪ್ಪಿಕೊಂಡ ಸಿನಿಮಾ ರಿಲೀಸ್ ಅದ ಬಳಿಕವೇ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರ ನಟನೆಯ ಈ ಐದು ಚಿತ್ರಗಳನ್ನು ನೀವು ಮಿಸ್ ಮಾಡಲೇಬಾರದು.

ಮಗಧೀರ: ಎಸ್​ಎಸ್​​ ರಾಜಮೌಳಿ ನಿರ್ದೇಶನದ ಚಿತ್ರ ಎಂದರೆ ನಿರೀಕ್ಷೆ ಹೆಚ್ಚಿರುತ್ತದೆ. ಅವರ ಜೊತೆ ಕೆಲಸ ಮಾಡೋಕೆ ಅವಕಾಶ ಸಿಗೋದು ಅಷ್ಟು ಸುಲಭದ ಮಾತಲ್ಲ. ರಾಮ್ ಚರಣ್ ಅವರ ಎರಡನೇ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದರು. ಇವರು ಒಟ್ಟಾಗಿ ಕೆಲಸ ಮಾಡಿದ ‘ಮಗಧೀರ’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ರಾಮ್ ಚರಣ್​ಗೆ ಜೊತೆಯಾಗಿ ಕಾಜಲ್ ನಟಿಸಿದ್ದರು.

‘ಯೆವಡು’: ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಒಟ್ಟಾಗಿ ನಟಿಸಿದ ‘ಯೆವಡು’ ಸಿನಿಮಾ ಕೂಡ ಗೆದ್ದು ಬೀಗಿತು. ವಿಮರ್ಶಕರಿಂದಲೂ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿತ್ತು. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಕೆಲವೇ ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ರಾಮ್ ಚರಣ್ ಅವರು ಮಿಂಚುತ್ತಾರೆ.

ಇದನ್ನೂ ಓದಿ:  ಒಂದು ದಿನ ಮುಂಚಿತವಾಗಿ ರಾಮ್​ ಚರಣ್​ ಬರ್ತ್​ಡೇ ಆಚರಿಸಿದ ಕಿಯಾರಾ ಅಡ್ವಾಣಿ, ಶಂಕರ್​

ಧ್ರುವ: ಸುರೇಂದ್ರ ರೆಡ್ಡಿ ನಿರ್ದೇಶನದ ‘ಧ್ರುವ’ ಚಿತ್ರದ ಮೂಲಕ ರಾಮ್ ಚರಣ್ ವೃತ್ತಿಜೀವನಕ್ಕೆ ಮೈಲೇಜ್ ಸಿಕ್ಕಿತು. ಎಎಸ್​​ಪಿ ಧ್ರುವ ಐಪಿಎಸ್ ಆಗಿ ಅವರು ಮಿಂಚಿದ್ದರು. ಖಡಕ್ ಪೊಲೀಸ್ ಅಧಿಕಾರಿ ಪಾತ್ರವನ್ನು ಅವರು ನಿರ್ವಹಿಸಿದ್ದರು.

ರಂಗಸ್ಥಲಂ: ‘ರಂಗಸ್ಥಲಂ’ ಸಿನಿಮಾ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ. ಖ್ಯಾತ ನಿರ್ದೇಶಕ ಸುಕುಮಾರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ರಾಮ್ ಚರಣ್ ಹಾಗೂ ಸಮಂತಾ ಕೆಮಿಸ್ಟ್ರಿ ಕೆಲಸ ಮಾಡಿತ್ತು.

ಇದನ್ನೂ ಓದಿ: Ram Charan: ‘ನಮ್ಮನ್ನು ಆಸ್ಕರ್​ ವೇದಿಕೆಗೆ ಕರೆಯಲಿಲ್ಲ, ಆ ಬಗ್ಗೆ ಈಗ ಮಾತು ಬೇಡ’: ರಾಮ್​ ಚರಣ್​

‘ಆರ್​ಆರ್​ಆರ್​’: ರಾಜಮೌಳಿ ಜೊತೆ ರಾಮ್ ಚರಣ್ ಮಾಡಿದ ಎರಡನೇ ಸಿನಿಮಾ ಇದು. ‘ಮಗಧೀರ’ ರಿಲೀಸ್ ಆಗಿ ದಶಕಗಳ ಬಳಿಕ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ