SSMB28: ಪ್ರಭಾಸ್, ರಾಮ್ ಚರಣ್ ಜೊತೆ ಮಹೇಶ್ ಬಾಬು ಕ್ಲ್ಯಾಶ್​; ಮತ್ತೆ ಸ್ಟಾರ್​ ವಾರ್?

ಮೂರು ಸ್ಟಾರ್ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರುತ್ತಿವೆ. ಯಾವುದಾದರೂ ಸಿನಿಮಾ ರೇಸ್​ನಿಂದ ಹಿಂದೆ ಸರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

SSMB28: ಪ್ರಭಾಸ್, ರಾಮ್ ಚರಣ್ ಜೊತೆ ಮಹೇಶ್ ಬಾಬು ಕ್ಲ್ಯಾಶ್​; ಮತ್ತೆ ಸ್ಟಾರ್​ ವಾರ್?
ಪ್ರಾಜೆಕ್ಟ್ ಕೆ-ಮಹೇಶ್ ಬಾಬು-ರಾಮ್ ಚರಣ್
Follow us
ರಾಜೇಶ್ ದುಗ್ಗುಮನೆ
|

Updated on: Mar 27, 2023 | 7:10 AM

ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದ ಕ್ಲ್ಯಾಶ್ ಏರ್ಪಡೋದು ಸರ್ವೇ ಸಾಮಾನ್ಯ. ಅದರಲ್ಲೂ ದಕ್ಷಿಣ ಭಾರತದ ಮಂದಿ ಸಂಕ್ರಾಂತಿ (Sankranti Festival) ಹಬ್ಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ದೊಡ್ಡ ಬಜೆಟ್ ಚಿತ್ರಗಳನ್ನು ಈ ಸಂದರ್ಭದಲ್ಲಿ ರಿಲೀಸ್ ಮಾಡೋಕೆ ನಿರ್ಮಾಪಕರು ಆಸಕ್ತಿ ತೋರಿಸುತ್ತಾರೆ. ಪ್ರತಿ ವರ್ಷ ಅನೇಕ ಸ್ಟಾರ್​ ನಟರ ಚಿತ್ರಗಳು ಈ ಹಬ್ಬದಂದು ರಿಲೀಸ್ ಆಗಿವೆ. 2024ರ ಸಂಕ್ರಾಂತಿಗೂ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡುವ ಸೂಚನೆ ಸಿಕ್ಕಿದೆ. ಮೂರು ಸ್ಟಾರ್ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರುತ್ತಿವೆ ಅನ್ನೋದು ವಿಶೇಷ. ಯಾವುದಾದರೂ ಸಿನಿಮಾ ರೇಸ್​ನಿಂದ ಹಿಂದೆ ಸರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮಹೇಶ್ ಬಾಬು ನಟನೆಯ 28ನೇ ಸಿನಿಮಾಗೆ ತಾತ್ಕಾಲಿಕವಾಗಿ ‘SSMB28’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಈ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ, ಮಹೇಶ್ ಬಾಬು ಅವರಿಗೆ ಅನೇಕ ತೊಂದರೆಗಳು ಎದುರಾದವು. ತಂದೆ-ತಾಯಿ ಇಬ್ಬರನ್ನೂ ಕೆಲವೇ ತಿಂಗಳ ಅಂತರದಲ್ಲಿ ಕಳೆದುಕೊಂಡರು. ಇದರ ಜೊತೆಗೆ ಅವರು ಅನೇಕ ಬಾರಿ ವಿದೇಶಿ ಪ್ರಯಾಣ ಮಾಡಿದರು. ಈ ಎಲ್ಲಾ ಕಾರಣದಿಂದ ಸಿನಿಮಾ ಸೆಟ್ಟೇರುವುದು ವಿಳಂಬ ಆಗಿದೆ. ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಕೂಡ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಇದ್ದರು. ಸಿನಿಮಾ ತಡವಾಗಲು ಇದು ಕೂಡ ಒಂದು ಕಾರಣ. ಹೀಗಾಗಿ, ಸಿನಿಮಾ ರಿಲೀಸ್ ದಿನಾಂಕ 2024ಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ‘ಪ್ರಾಜೆಕ್ಟ್​ ಕೆ’ ಕಥೆ ರಿವೀಲ್ ಮಾಡಿದ ನಿರ್ಮಾಪಕ; ವಿಷ್ಣುವಿನ ಆಧುನಿಕ ಅವತಾರದಲ್ಲಿ ಬರಲಿದ್ದಾರೆ ಪ್ರಭಾಸ್

SSMB28 ಚಿತ್ರತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿಕೊಂಡಿದೆ. ಹೊಸ ಪೋಸ್ಟರ್​ನಲ್ಲಿ ಮಹೇಶ್ ಬಾಬು ಅವರು ಸಿಗರೇಟ್ ಸೇದುತ್ತಾ ಮಾಸ್ ಆಗಿ ಬಂದಿದ್ದಾರೆ. ‘ಜನವರಿ 13, 2024ರಂದು ಚಿತ್ರಮಂದಿರದಲ್ಲಿ’ ಎನ್ನುವ ಕ್ಯಾಪ್ಶನ್ ನೀಡಲಾಗಿದೆ. ಈ ಮೂಲಕ ಸಿನಿಮಾ ಸಂಕ್ರಾಂತಿ ರೇಸ್​​ ಸೇರಿಕೊಂಡಿದೆ.

ಇದನ್ನೂ ಓದಿ: ಪ್ರಭಾಸ್, ಅಲ್ಲು ಅರ್ಜುನ್ ಬಳಿಕ ಜೂ ಎನ್​ಟಿಆರ್ ಮೇಲೆ ಕಣ್ಣಿಟ್ಟ ಟಿ-ಸೀರೀಸ್

ಪ್ರಭಾಸ್ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾಗೆ ನಾಗ್ ಅಶ್ವಿನ್ ನಿರ್ದೇಶನವಿದೆ. ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಇತ್ತೀಚೆಗೆ ಪೋಸ್ಟರ್ ಮೂಲಕ ಈ ವಿಚಾರ ತಿಳಿಸಲಾಗಿತ್ತು. ಇನ್ನು, ರಾಮ್ ಚರಣ್ ನಟನೆಯ 15ನೇ ಸಿನಿಮಾ ಕೂಡ ಇದೇ ದಿನಾಂಕದಂದು ರಿಲೀಸ್ ಆಗುತ್ತಿದೆ. ಹೀಗಾಗಿ, ಮೂರು ದೊಡ್ಡ ಸ್ಟಾರ್ಸ್ ಸಿನಿಮಾ ಒಟ್ಟೊಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಭರ್ಜರಿ ಸ್ಪರ್ಧೆ ಏರ್ಪಡಲಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ವಾರ್ ಏರ್ಪಡುವ ಸಾಧ್ಯತೆಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ