
ತಮಿಳು ನಟ ಸೂರ್ಯ, ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫೇಸ್ನಲ್ಲಿದ್ದಾರೆ. ಅವರ ನಟನೆಯ ಮೂರು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಆಗಿವೆ. ಒಂದು ವರ್ಷದ ಹಿಂದಷ್ಟೆ ಒಂದೇ ಒಂದು ಗೆಲುವಿಗಾಗಿ ಹಾತೊರೆಯುತ್ತಿದ್ದ, ಕೈತಪ್ಪಿ ಹೋದ ಸಿನಿಮಾಗಳ ಬಗ್ಗೆ ಬಹಿರಂಗವಾಗಿ ಬೇಸರ ಹೊರಹಾಕಿದ್ದ ಸೂರ್ಯ ಈಗ ಬ್ಲಾಕ್ ಬಸ್ಟರ್ ನಟ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಸೂರ್ಯ, ಬಾಲಿವುಡ್ನ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಅವರುಗಳ ಸಾಲಿಗೆ ಸೇರಿಕೊಂಡಿದ್ದಾರೆ.
ಪ್ರಸ್ತುತ ಸ್ಟಾರ್ ನಟರುಗಳು ವರ್ಷಕ್ಕೆ ಒಂದು ಸಿನಿಮಾ ಸಹ ನೀಡಲು ಹೆಣಗಾಡುತ್ತಿದ್ದಾರೆ. ಹಾಗೆ ಹೆಣಗಾಡಿ ಬಿಡುಗಡೆ ಮಾಡುವ ಸಿನಿಮಾ ಸಹ ಹಿಟ್ ಆಗುವುದು ಅನುಮಾನ. ಆದರೆ ಸೂರ್ಯ ನಟನೆಯ ಮೂರು ಸಿನಿಮಾಗಳು ಈ ವರ್ಷ ರಿಲೀಸ್ ಆಗಿವೆ ಮಾತ್ರವಲ್ಲದೆ ಮೂರಕ್ಕೆ ಮೂರು ಸಿನಿಮಾಗಳು 200 ಕೋಟಿ ಗಳಿಕೆ ದಾಟಿವೆ. ಇದು ಸಾಮಾನ್ಯ ಸಾಧನೆಯಲ್ಲ. ಈ ಹಿಂದೆ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಮಾತ್ರವೇ ಈ ಸಾಧನೆ ಮಾಡಿದ್ದ ಸೂಪರ್ ಸ್ಟಾರ್ ನಟರಾಗಿದ್ದರು. ಈಗ ಆ ಸಾಲಿಗೆ ಸೂರ್ಯ ಸಹ ಸೇರಿಕೊಂಡಿದ್ದಾರೆ.
ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾ ಇದೇ ವರ್ಷದ ಆರಂಭದಲ್ಲಿ ರಿಲೀಸ್ ಆಗಿ 350 ಕೋಟಿ ಗಳಿಕೆ ಮಾಡಿತ್ತು. ಅದಾದ ಬಳಿಕ ವಿಶ್ವನಾಥ್ ಆಂಡ್ ಸನ್ಸ್ ಸಿನಿಮಾ ರಿಲೀಸ್ ಆಗಿ ಆ ಸಿನಿಮಾ ಸಹ 210 ಕೋಟಿ ಗಳಿಕೆ ಮಾಡಿತು. ಆ ಸಿನಿಮಾನಲ್ಲಿ ಮಮಿತಾ ಬೈಜು ಸಹ ನಟಿಸಿದ್ದರು. ಇದೀಗ ಸೂರ್ಯ ನಟನೆಯ ‘ಸೀನ್’ ಸಿನಿಮಾ ರಿಲೀಸ್ ಆಗಿದ್ದು, ರಿಲೀಸ್ ಆದ ಒಂದು ವಾರದಲ್ಲೇ ಸಿನಿಮಾ 200 ಕೋಟಿ ಗಳಿಕೆಯನ್ನು ದಾಟಿದೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರು 200 ಕೋಟಿ ಗಳಿಸಿದ ಸಿನಿಮಾ ನೀಡಿದ ನಟ ಎನಿಸಿಕೊಂಡಿದ್ದಾರೆ ಸೂರ್ಯ.
ಇದನ್ನೂ ಓದಿ:ಪ್ರಕೃತಿಯ ಮಡಿಲಲ್ಲಿ ಸೂರ್ಯ ನಮಸ್ಕಾರ ಮಾಡಿದ ಸೈಫ್
2023 ರಲ್ಲಿ ಶಾರುಖ್ ಖಾನ್ ನಟನೆಯ ‘ಜವಾನ್’, ‘ಪಠಾಣ್’ ಮತ್ತು ‘ಡಂಕಿ’ ಸಿನಿಮಾಗಳು ಒಂದೇ ವರ್ಷದಲ್ಲಿ ರಿಲೀಸ್ ಆಗಿ ಮೂರೂ ಸಿನಿಮಾಗಳು ಭಾರಿ ದೊಡ್ಡ ಗಳಿಕೆ ಮಾಡಿದ್ದವು. ಇನ್ನು ಅಕ್ಷಯ್ ಕುಮಾರ್ ಅವರಿಗೆ 2019 ಅದ್ಭುತ ವರ್ಷವಾಗಿತ್ತು. ಆ ವರ್ಷ ಅವರ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಅವುಗಳಲ್ಲಿ ‘ಗುಡ್ ನ್ಯೂಜ್’, ‘ಮಿಷನ್ ಮಂಗಲ್’, ‘ಹೌಸ್ಫಲ್ 4’ ಸಿನಿಮಾಗಳು 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದವು. ಅದೇ ವರ್ಷ ರಿಲೀಸ್ ಆಗಿದ್ದ ‘ಕೇಸರಿ’ ಸಿನಿಮಾ ಸಹ ಹಿಟ್ ಆಗಿ 150 ಕೋಟಿ ಹಣ ಗಳಿಸಿತ್ತು.
ಒಂದೇ ವರ್ಷದಲ್ಲಿ ಮೂರು 200 ಕೋಟಿ ಸಿನಿಮಾ ನೀಡಿದ ಸಾಲಿನಲ್ಲಿ ಈ ಮೊದಲು ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಮಾತ್ರವೇ ಇದ್ದರು. ಈಗ ಸೂರ್ಯ ಸಹ ಸೇರಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ