‘ಟಾಕ್ಸಿಕ್’ ಅಪ್​​ಡೇಟ್ ಬರ್ತಿದೆ ನಾಳೆ ಸ್ವಲ್ಪ ಬಿಡುವು ಮಾಡ್ಕೊಳಿ

Toxic Movie: ಯಶ್ ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ‘ಟಾಕ್ಸಿಕ್’ ಸಿನಿಮಾದ ಟೀಸರ್ ಈಗಾಗಲೇ ದೊಡ್ಡ ಹವಾ ಎಬ್ಬಿಸಿದ್ದು, ಹಲವು ರೀತಿಯ ಚರ್ಚೆಗಳನ್ನು ಸಹ ಹುಟ್ಟುಹಾಕಿದೆ. ಸಿನಿಮಾದ ಬಿಡುಗಡೆಯನ್ನು ಎರಡು ಬಾರಿ ಮುಂದೂಡಲಾಗಿದ್ದು, ಹೊಸ ಬಿಡುಗಡೆ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು ನೀಡಲು ಮುಂದಾಗಿದೆ.

‘ಟಾಕ್ಸಿಕ್’ ಅಪ್​​ಡೇಟ್ ಬರ್ತಿದೆ ನಾಳೆ ಸ್ವಲ್ಪ ಬಿಡುವು ಮಾಡ್ಕೊಳಿ
Toxic Movue

Updated on: Jun 20, 2026 | 8:31 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ‘ಟಾಕ್ಸಿಕ್’ ಸಿನಿಮಾದ ಟೀಸರ್ ಈಗಾಗಲೇ ದೊಡ್ಡ ಹವಾ ಎಬ್ಬಿಸಿದ್ದು, ಹಲವು ರೀತಿಯ ಚರ್ಚೆಗಳನ್ನು ಸಹ ಹುಟ್ಟುಹಾಕಿದೆ. ಆದರೆ ಆ ಟೀಸರ್ ಬಿಡುಗಡೆ ಬಳಿಕ ಸಿನಿಮಾದ ಕತೆಯ ಬಗ್ಗೆ ಆ ಸಿನಿಮಾದ ಕೆಲ ನಟಿಯರು ಮಾತನಾಡಿರುವ ರೀತಿ ನೋಡಿದರೆ ಟೀಸರ್ ಮೂಲಕ ಪ್ರೇಕ್ಷಕರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನವೂ ಮೂಡುತ್ತಿದೆ. ಈಗಾಗಲೇ ಸಿನಿಮಾದ ಬಿಡುಗಡೆಯನ್ನು ಎರಡು ಬಾರಿ ಮುಂದೂಡಲಾಗಿದ್ದು, ಹೊಸ ಬಿಡುಗಡೆ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು ನೀಡಲು ಮುಂದಾಗಿದೆ.

‘ಟಾಕ್ಸಿಕ್’ ಸಿನಿಮಾದ ಅಪ್​​ಡೇಟ್ ಒಂದು ನಾಳೆ ಹೊರಬೀಳಲಿದೆ. ಆದರೆ ಅದೇನಾಗಿರಲಿದೆ ಎಂಬುದನ್ನು ಚಿತ್ರತಂಡ ಹೇಳಿಲ್ಲ. ಬದಲಿಗೆ ‘ನಾಳೆ ಏನಾದ್ರೂ ಪ್ಲ್ಯಾನ್ಸ್ ಇವೆಯೇ?’ ಎಂದಷ್ಟೆ ಕೇಳಲಾಗಿದೆ. ‘ಟಾಕ್ಸಿಕ್’ ಸಿನಿಮಾದ ಅಧಿಕೃತ ಟ್ವಿಟ್ಟರ್ ಪೇಜಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್​​ನಲ್ಲಿ ‘ನಾಳೆ ಫ್ರೀ ತಾನೆ?’ ಎಂಬರ್ಥ ಧ್ವನಿಸುವ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಆ ಮೂಲಕ ನಾಳೆ (ಜೂನ್ 21) ಪ್ರಮುಖವಾದ ಅಪ್​​ಡೇಟ್ ಒಂದನ್ನು ಬಿಡುಗಡೆ ಮಾಡುವ ಮುನ್ಸೂಚನೆಯನ್ನು ಚಿತ್ರತಂಡ ನೀಡಿದೆ.

ಸಿನಿಮಾದ ನಾಯಕಿಯರ ಕ್ಯಾರೆಕ್ಟರ್ ಪೋಸ್ಟರ್​​ಗಳ ಜೊತೆಗೆ ಸಿನಿಮಾದ ಮುಖ್ಯ ಪಾತ್ರಧಾರಿ ‘ರಾಯ’ನ ಪಾತ್ರ ಪರಿಚಯದ ಟೀಸರ್ ಹಾಗೂ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರ ಟಿಕೆಟ್​​ನ ಪಾತ್ರ ಪರಿಚಯಕ್ಕಾಗಿ ಮತ್ತೊಂದು ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಾಳೆ ಯಾವ ಅಪ್​​ಡೇಟ್ ಚಿತ್ರತಂಡದಿಂದ ಹೊರ ಬೀಳಲಿದೆ ಎಂಬ ಕುತೂಹಲ ಇದೆ. ಸಿನಿಮಾದ ಬಿಡುಗಡೆ ದಿನಾಂಕ ನಾಳೆ ಘೋಷಣೆಯಾಗುವ ಸಾಧ್ಯತೆಯೂ ಇದೆ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು. ಆ ಸಮಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ಸಂಘರ್ಷದಲ್ಲಿ ತೊಡಗಿಕೊಂಡಿದ್ದ ಕಾರಣಕ್ಕಾಗಿ ಸಿನಿಮಾದ ಬಿಡುಗಡೆಯನ್ನು ಜುಲೈ ತಿಂಗಳೀಗೆ ಮುಂದೂಡಲಾಯ್ತು. ಜೂನ್ 4 ರಂದು ಸಿನಿಮಾ ಬಿಡುಗಡೆ ಆಗಿಲಿದೆ ಎಂದು ಘೋಷಿಸಲಾಗಿತ್ತು. ಆದರೆ ಅದು ಸಹ ಸುಳ್ಳಾಯ್ತು. ಸಿನಿಮಾದ ಗ್ಲೋಬಲ್ ರಿಲೀಸ್​​ಗಾಗಿ ಇನ್ನಷ್ಟು ಸಮಯ ಬೇಕಿರುವ ಕಾರಣ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ನಾಳೆ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಐವರು ನಾಯಕಿಯರಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕನ್ನಡತಿ ರುಕ್ಮಿಣಿ ವಸಂತ್. ಸಿನಿಮಾವನ್ನು ಗೀತು ಮೋಹನ್​​ಸಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us