ನನಗೆ ಉದ್ಯಮಿ ಜೊತೆ ಮದುವೆ, ಮಕ್ಕಳು ಆಗಿದೆ: ಗರಂ ಆಗಿ ಹೇಳಿದ ನಟಿ ತ್ರಿಶಾ ಕೃಷ್ಣನ್

ನಟಿ ತ್ರಿಶಾ ಕೃಷ್ಣನ್ ಅವರ ಚಲನವಲನದ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಅವರು ಏನೇ ಮಾಡಿದರೂ ದೊಡ್ಡದಾಗಿ ಸುದ್ದಿ ಆಗುತ್ತಿದೆ. ಜೊತೆಗೆ ಸಾಕಷ್ಟು ಗಾಸಿಪ್​ಗಳು ಕೂಡ ಹಬ್ಬಿವೆ. ತಮ್ಮ ಮದುವೆ ಬಗ್ಗೆ ಕೇಳಿಬಂದ ವದಂತಿಗೆ ಈಗ ತ್ರಿಶಾ ಕೃಷ್ಣನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಉದ್ಯಮಿ ಜೊತೆ ಮದುವೆ, ಮಕ್ಕಳು ಆಗಿದೆ: ಗರಂ ಆಗಿ ಹೇಳಿದ ನಟಿ ತ್ರಿಶಾ ಕೃಷ್ಣನ್
Trisha Krishnan

Updated on: Apr 07, 2026 | 3:33 PM

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಜೊತೆಗಿನ ರಿಲೇಷನ್​ಶಿಪ್ ಕಾರಣದಿಂದ ಅವರು ಚರ್ಚೆಗೆ ಆಹಾರ ಆಗಿದ್ದಾರೆ. ಈ ನಡುವೆ ಚಿತ್ರರಂಗದಿಂದ ಅವರು ಹೊರಬರುತ್ತಾರೆ ಎನ್ನುವ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಇದೀಗ ಈ ಎಲ್ಲಾ ಗಾಸಿಪ್​ಗಳಿಗೆ ತ್ರಿಶಾ ಅವರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಖ್ಯಾತ ಪತ್ರಕರ್ತ ಮತ್ತು ನಟ ಚಿತ್ರಾ ಲಕ್ಷ್ಮಣನ್ ಅವರು ತಮ್ಮ ‘ಟೂರಿಂಗ್ ಟಾಕೀಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ‘ತ್ರಿಶಾ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸದಿರಲು ತೀರ್ಮಾನಿಸಿದ್ದಾರೆ ಎಂದು ಹಲವು ನಿರ್ಮಾಪಕರು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದರು. ತ್ರಿಶಾ ಇತ್ತೀಚೆಗೆ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಮಾಡದಿರುವುದು ಈ ಅನುಮಾನಕ್ಕೆ ತುಪ್ಪ ಸುರಿದಂತಾಗಿತ್ತು.

ತಮ್ಮ ನಿವೃತ್ತಿ ಹಾಗೂ ಮದುವೆಯ ಬಗ್ಗೆ ಹಬ್ಬಿರುವ ಸುದ್ದಿಯನ್ನು ಕಂಡು ಕೆಂಡಾಮಂಡಲವಾದ ತ್ರಿಶಾ, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ನಾನು ಸಿನಿಮಾಗಳನ್ನು ಬಿಟ್ಟಿದ್ದೇನಂತೆ. ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನಂತೆ. ಅಷ್ಟೇ ಅಲ್ಲದೇ, ನನಗೆ ನಾಲ್ಕು ಜನ ಮಕ್ಕಳಿದ್ದು ಅವರಿಗೆ ನಿನ್ನೆ ಎರಡನೇ ವರ್ಷದ ಹುಟ್ಟುಹಬ್ಬವೂ ಮುಗಿದಿದೆಯಂತೆ. ಇಂದಿನ ಕಲ್ಪಿತ ಕಥೆಯ ಕೋಟಾ ಮುಗಿಯಿತೇ ಅಥವಾ ನಾನು ಇನ್ನೂ ಏನಾದರೂ ಸೇರಿಸಬೇಕೇ’ ಎಂದು ಬರೆದುಕೊಳ್ಳುವ ಮೂಲಕ ವದಂತಿಗಳನ್ನು ತಳ್ಳಿಹಾಕಿದ್ದಾರೆ.

Trisha Krishnan Instagram Story

ಕಳೆದ ಅಕ್ಟೋಬರ್‌ನಲ್ಲಿ ತ್ರಿಶಾ ಅವರು ಚಂಡೀಗಢ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ‘ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ’ ಎಂಬ ಅರ್ಥದ ಪೋಸ್ಟ್ ಹಂಚಿಕೊಂಡಿದ್ದು ಕೂಡ ಚರ್ಚೆಗೆ ಕಾರಣವಾಗಿತ್ತು. ಇನ್ನು, ನಟ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ವಿಜಯ್ ಮತ್ತು ತ್ರಿಶಾ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದುವೆಯೊಂದಕ್ಕೆ ಒಂದೇ ರೀತಿಯ ಉಡುಪು ಧರಿಸಿ ಬಂದಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ: ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ತ್ರಿಶಾ ಚಿತ್ರರಂಗ ಬಿಡುತ್ತಾರೆ ಎಂಬುದು ಕೇವಲ ವದಂತಿ ಎಂಬುದು ಅವರ ಮುಂಬರುವ ಚಿತ್ರಗಳ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ. 2025ರಲ್ಲಿ ‘ವಿದಾಮುಯರ್ಚಿ’, ‘ಗುಡ್ ಬ್ಯಾಡ್ ಅಗ್ಲಿ’, ‘ಥಗ್ ಲೈಫ್’ ಚಿತ್ರಗಳಲ್ಲಿ ತ್ರಿಶಾ ಅವರು ಕಾಣಿಸಿಕೊಂಡಿದ್ದರು. ‘ಕರುಪ್ಪು’, ‘ವಿಶ್ವಂಭರ’ ಮುಂತಾದ ಸಿನಿಮಾಗಳು ಈಗ ಅವರ ಕೈಯಲ್ಲಿವೆ. ಆ ಸಿನಿಮಾಗಳ ಬಿಡುಗಡೆಗೆ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us