‘ಎಚ್​​2ಓ’ ಜೋಡಿ: ಮತ್ತೆ ಪ್ರಭುದೇವ ಜೊತೆಗೆ ಉಪೇಂದ್ರ ಸಿನಿಮಾ

ಉಪೇಂದ್ರ ಮತ್ತು ಪ್ರಭುದೇವ 22 ವರ್ಷಗಳ ಹಿಂದೆ ಒಟ್ಟಿಗೆ ‘ಎಚ್​​2ಓ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಸಾಕಷ್ಟು ವಿವಾದಗಳನ್ನು ಎಬ್ಬಿಸಿತ್ತು. ಈಗಲೂ ಸಹ ಆ ಸಿನಿಮಾದ ಬಗ್ಗೆ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ 22 ವರ್ಷಗಳ ಬಳಿಕ ‘ಎಚ್​​2ಓ’ ಜೋಡಿ ಮತ್ತೆ ಒಂದಾಗಿದೆ. ತಮಿಳಿನ ಪ್ರತಿಭಾವಂತ ನಿರ್ದೇಶಕನ ಸಿನಿಮಾನಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಉಪ್ಪಿ ಮತ್ತು ಪ್ರಭು.

‘ಎಚ್​​2ಓ’ ಜೋಡಿ: ಮತ್ತೆ ಪ್ರಭುದೇವ ಜೊತೆಗೆ ಉಪೇಂದ್ರ ಸಿನಿಮಾ
Upendra Prabhu Deva

Updated on: Sep 30, 2026 | 1:02 PM

ಮುಖ್ಯಾಂಶಗಳು

  • 22 ವರ್ಷಗಳ ಬಳಿಕ ಒಂದಾಗುತ್ತಿರುವ ಉಪೇಂದ್ರ, ಪ್ರಭುದೇವ
  • ತಮಿಳು ಸಿನಿಮಾನಲ್ಲಿ ಒಟ್ಟಿಗೆ ನಟಿಸಲಿರುವ ಉಪ್ಪಿ-ಪ್ರಭು
  • ತಮಿಳಿನ ಸ್ಟಾರ್ ನಿರ್ದೇಶಕನ ಸಿನಿಮಾ

‘ಎಚ್​​2ಓ’ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಉಪೇಂದ್ರ ಹಾಗೂ ಪ್ರಭುದೇವ ಒಟ್ಟಿಗೆ ನಟಿಸಿದ್ದ ಈ ಸಿನಿಮಾ 2002 ರಲ್ಲಿ ರಿಲೀಸ್ ಆಗಿತ್ತು. ಹಲವಾರು ಕಾರಣಕ್ಕೆ ಆಗ ಈ ಸಿನಿಮಾ ಭಾರಿ ಸುದ್ದಿ ಆಗಿತ್ತು. ಪ್ರತಿಭಟನೆಗಳು ನಡೆದಿದ್ದವು, ಟೀಕೆ, ವಿಮರ್ಶೆಗಳ ಜೊತೆಗೆ ಪ್ರಶಂಸೆಗೂ ಸಹ ಕಾರಣವಾಗಿತ್ತು. ಸಿನಿಮಾನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇದ್ದ ಕಾವೇರಿ ವಿವಾದವನ್ನೇ ವಸ್ತುವನ್ನಾಗಿ ಮಾಡಿಕೊಳ್ಳಲಾಗಿತ್ತು. ಸಿನಿಮಾನಲ್ಲಿ ಉಪೇಂದ್ರ ಮತ್ತು ಪ್ರಭುದೇವ ಒಟ್ಟಿಗೆ ನಟಿಸಿದ್ದರು. ‘ಎಚ್​​2ಓ’ ಬಳಿಕ ಈ ಜೋಡಿ ಒಟ್ಟಿಗೆ ನಟಿಸಿದ್ದಿಲ್ಲ. ಇದೀಗ 24 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ಈ ಬಾರಿ ತಮಿಳು ಸಿನಿಮಾನಲ್ಲಿ.

ಉಪೇಂದ್ರ ಕನ್ನಡ ಮಾತ್ರವಲ್ಲದೆ ಹಲವಾರು ಪರ ಭಾಷೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪರ ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ವರ್ಗವನ್ನೇ ಹೊಂದಿದ್ದಾರೆ. ಕಳೆದ ವರ್ಷವಷ್ಟೆ ಉಪೇಂದ್ರ ನಟಿಸಿದ್ದ ತಮಿಳು ಸಿನಿಮಾ ‘ಕೂಲಿ’ ರಿಲೀಸ್ ಆಗಿ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಉಪ್ಪಿ, ತಮಿಳು ಸಿನಿಮಾನಲ್ಲಿ ನಟನೆ ಮಾಡುತ್ತಿದ್ದು, ಈ ಬಾರಿ ಅವರಿಗೆ ಪ್ರಭುದೇವ ಸಹ ನಟ.

‘ಜಿಗರ್​ಥಂಡಾ’, ‘ಪೆಟ್ಟ’, ‘ಜಗಮೇ ಥಂದಿರಮ್’ ಇನ್ನೂ ಕೆಲವು ಸೂಪರ್ ಹಿಟ್ ತಮಿಳು ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಅವರೊಟ್ಟಿಗೆ ಪ್ರಭುದೇವ ಹಾಗೂ ಯುವ ನಟ ಅಥರ್ವ ಸಹ ಇರಲಿದ್ದಾರೆ. ಈ ಬಗ್ಗೆ ಖುದ್ದು ಕಾರ್ತಿಕ್ ಸುಬ್ಬರಾಜು ಮಾತನಾಡಿದ್ದು, ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದಿಲ್ಲ, ಬದಲಿಗೆ ನೇರವಾಗಿ ನೆಟ್​​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಲಿದೆ.

ಇದನ್ನೂ ಓದಿ:‘ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ

ಈ ಸಿನಿಮಾವು ‘ಹುಲಿ ಕುಣಿತ’ದ ಕುರಿತು ಕತೆಯನ್ನು ಒಳಗೊಂಡಿರಲಿದೆ. ಕಾರ್ತಿಕ್ ಸುಬ್ಬರಾಜು ಹೇಳಿರುವಂತೆ ಸಿನಿಮಾವು ಕಾದಂಬರಿ ಒಂದನ್ನು ಆಧರಿಸಿದ್ದಾಗಿದ್ದು, ಗ್ರಾಮೀಣ ಭಾಗದ ಕತೆಯನ್ನು ಒಳಗೊಂಡಿರುವ ಈ ಸಿನಿಮಾನಲ್ಲಿ ಸಾಕಷ್ಟು ಆಕ್ಷನ್ ಮತ್ತು ಡ್ರಾಮಾ ಇರಲಿದೆ. ಉಪೇಂದ್ರ ಅವರ ಕೈಯಲ್ಲಿ ಪ್ರಸ್ತುತ ಹಲವು ಸಿನಿಮಾಗಳಿವೆ. ‘ಬುದ್ಧಿವಂತ 2’ ಸಿನಿಮಾ ಬಹುತೇಕ ಮುಗಿದಿದೆ ಎನ್ನಲಾಗುತ್ತಿದೆ. ‘ತ್ರಿಶೂಲಂ’ ಸಹ ಮುಗಿಸಿದ್ದಾರೆ. ‘ಗೊರಿಲ್ಲಾ ವಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ಜಾಂಬಿ ರೆಡ್ಡಿ ನೆಕ್ಸ್ಟ ಲೆವೆಲ್’ ಸಿನಿಮಾನಲ್ಲೂ ಉಪೇಂದ್ರ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us