ನಟಿ ‘ತ್ರಿಷಾ’ (trishA)ಅವರ ಹದಿನೆಂಟು ವರ್ಷದ ಹಿಂದಿನ ತೆಲುಗು ಸಿನಿಮಾ ‘ವರ್ಷಂ‘ ಥಿಯೇಟರ್ನಲ್ಲಿ ಇತ್ತೀಚೆಗೆ ಪ್ರದರ್ಶಿಸಲಾಯಿತು. ಪ್ರಭಾಸ್ ಅವರ 20 ವರ್ಷಗಳ ಸಿನಿ ಪಯಣವನ್ನು ಸಂಭ್ರಮಿಸಲು ಈ ಸಿನಿಮಾವನ್ನು ಪ್ರದರ್ಶಿಸಲಾಗಿದೆ. ವರ್ಷಂ ಸಿನಿಮಾದ ಬಗ್ಗೆ ಅಭಿಮಾನಿಗಳ ಪ್ರತಿಕ್ರಿಯೆಯಿಂದ ತ್ರಿಷಾ ಭಾವುಕರಾದರು. ‘ಹದಿನೆಂಟು ವರ್ಷಗಳ ಬಳಿಕ ಮತ್ತೆ ನನ್ನ ಹೃದಯ ತುಂಬಿದೆ, ಇದು ನನ್ನ ಮೊದಲ ತೆಲುಗು ಚಿತ್ರ, ನಿಮ್ಮ ಈ ಅಭಿಮಾನ, ಸಿನಿಮಾಗಳು ಎಂದೆಂದಿಗೂ ಶಾಶ್ವತ ಎಂದು ತೋರಿಸಿದೆ’ ಎಂದಿದ್ದಾರೆ.
ಇನ್ನು ಈ ಸಿನಿಮಾವನ್ನು ನಿರ್ದೇಶಕ ವೀರು ಪೋಟ್ಲ ಅವರು ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ತ್ರಿಷಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೇಮಿಗಳ ಕುರಿತದಾದ ಕಥೆ ಇದಾಗಿದ್ದು, 2004 ರಲ್ಲಿ ಬಹುದೊಡ್ಡ ಯಶಸ್ಸು ಕಂಡ ಈ ಸಿನಿಮಾ ಬರೊಬ್ಬರಿ 175 ದಿನಗಳಿಗಿಂತ ಹೆಚ್ಚು ಕಾಲ ಥಿಯೇಟರ್ನಲ್ಲಿ ಪ್ರದರ್ಶನಗೊಂಡಿತ್ತು. ಈ ಸಿನಿಮಾವನ್ನ ನಂತರ ತಮಿಳಿನಲ್ಲಿ ‘ಮಝೈ'(2005) ಹಾಗೂ ಹಿಂದಿಯಲ್ಲಿ ‘ಬಾಘಿ'(2016) ರಲ್ಲಿ ರಿಮೇಕ್ ಮಾಡಲಾಯಿತು.
ಇದನ್ನೂ ಓದಿ:Ponniyin Selvan ವೇದಿಕೆಯಲ್ಲೂ ಪುನೀತ್ ಬಗ್ಗೆ ಮಾತಾಡಿದ ಖ್ಯಾತ ನಟಿ ತ್ರಿಷಾ
ತ್ರಿಷಾ ಅವರು ‘ಪವರ್’ ಸಿನಿಮಾದ ಮೂಲಕ ಕನ್ನಡ ಚಿತ್ರಕ್ಕೆ ಎಂಟ್ರಿ ಕೊಟ್ಟರು 2014 ರಲ್ಲಿ ರಿಲೀಸ್ ಆದ ಈ ಚಿತ್ರದಲ್ಲಿ ಪುನೀತ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇನ್ನು ವಿಮರ್ಶಕರಿಂದ ಪ್ರೀತಿಸಲ್ಪಟ್ಟ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬುರುವ ಚಿತ್ರಗಳಾದ ‘ಸತುರಂಗ ವೆಟ್ಟೈ-2′, ‘ರಾಮ್’, ‘ದಿ ರೋಡ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ