
ದಕ್ಷಿಣ ಭಾರತ ಚಿತ್ರರಂಗ ಈಗ ಬಾಲಿವುಡ್ಗೆ ಸರಿಸಾಟಿಯಾಗಿ ನಿಂತಿದೆ. ದೊಡ್ಡ ಬಜೆಟ್ಗಳ ಸಿನಿಮಾಗಳ ಜತೆಗೆ ಮೇಕಿಂಗ್ನಲ್ಲೂ ಇಡೀ ಭಾರತದ ಗಮನ ಸೆಳೆಯುವ ಪ್ರಯತ್ನವನ್ನು ಮಾಡುವಲ್ಲಿ ದಕ್ಷಿಣದ ಚಿತ್ರರಂಗ ಯಶಸ್ವಿಯಾಗಿದೆ. ‘ಬಾಹುಬಲಿ’, ‘ಕೆಜಿಎಫ್’ ಸರಣಿಯ ಚಿತ್ರಗಳು ಇದಕ್ಕೆ ಜೀವಂತ ಉದಾಹರಣೆ. ಹೀಗಾಗಿ, ದಕ್ಷಿಣ ಭಾರತದ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ. ಈಗ ಇದೇ ಮೊದಲ ಬಾರಿಗೆ ಖ್ಯಾತ ಬಾಲಿವುಡ್ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಕ್ಯಾಲೆಂಡರ್ನ ಭಾಗವಾಗೋಕೆ ದಕ್ಷಿಣ ಭಾರತದ ನಟನಿಗೆ ಅವಕಾಶ ಸಿಕ್ಕಿದೆ.
ಹೌದು, ಡಬ್ಬೂ ರತ್ನಾನಿ ಕ್ಯಾಲೆಂಡರ್ನಲ್ಲಿ ಇಲ್ಲಿವರೆಗೆ ಕೇವಲ ಬಾಲಿವುಡ್ ಸ್ಟಾರ್ಸ್ಗಳಿಗೆ ಮಾತ್ರ ಮನ್ನಣೆ ಸಿಗುತ್ತಿತ್ತು. ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಸನ್ನಿ ಲಿಯೋನ್ ಸೇರಿ ಹಿಂದಿ ಚಿತ್ರರಂಗದ ಸಾಕಷ್ಟು ಕಲಾವಿದರು ಇದರ ಭಾಗವಾಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ದಕ್ಷಿಣದ ಸ್ಟಾರ್ಗೆ ಇದರಲ್ಲಿ ಪಾಲ್ಗೊಳ್ಳೋಕೆ ಅವಕಾಶ ಸಿಕ್ಕಿದೆ. ವಿಜಯ್ ದೇವರಕೊಂಡ ಈಗ ‘ಡಬ್ಬೂ ರತ್ನಾನಿ 2021’ ಕ್ಯಾಲೆಂಡರ್ನಲ್ಲಿ ಕಾಣಿಸಿಕೊಂಡಿದ್ದಾರೆ.
ದುಬಾರಿ ಬೆಲೆಯ ಟ್ರಂಫ್ ಕಂಪೆನಿಯ ಬೈಕ್ ಮೇಲೆ ವಿಜಯ್ ಕುಳಿತಿದ್ದಾರೆ. ಬ್ಲ್ಯಾಕ್-ಆ್ಯಂಡ್ ವೈಟ್ನಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ಫೋಟೋದಲ್ಲಿ ಸಖತ್ ಹಾಟ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ವಿಜಯ್ ಅವರ ಕೈನಲ್ಲಿರುವ ಮಸಲ್ ಕೂಡ ಅದ್ಭುತವಾಗಿ ಕಾಣಿಸಿದೆ.
‘ಲೈಗರ್’ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಪುರಿ ಜಗನ್ನಾಥ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್ 9ರಂದು ಸಿನಿಮಾ ತೆರೆಗೆ ಬರುತ್ತಿದೆ. ಸಿಂಹ ಹಾಗೂ ಹುಲಿಯಿಂದ ಹುಟ್ಟಿದ ತಳಿಗೆ LIGER ಎಂದು ಕರೆಯಲಾಗುತ್ತದೆ. ಲಾಕ್ಡೌನ್ಗೂ ಮೊದಲು ‘ಲೈಗರ್’ ಚಿತ್ರದ ಶೂಟಿಂಗ್ಗಾಗಿ ವಿಜಯ್ ಸಾಕಷ್ಟು ಬಾರಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಅವರು ರಶ್ಮಿಕಾ ಜತೆ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ಈಗ ಲಾಕ್ಡೌನ್ ಪೂರ್ಣಗೊಂಡಿದ್ದರಿಂದ ವಿಜಯ್ ಮತ್ತೆ ಮುಂಬೈಗೆ ತೆರಳಿದ್ದಾರೆ.
ಇದನ್ನೂ ಓದಿ: Vijay Devarakonda: ಮನೆಯಲ್ಲೇ ಕುಳಿತು ಓಟಿಟಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿದ್ರಾ ವಿಜಯ್ ದೇವರಕೊಂಡ?
ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್ ಮಗು ಯಥರ್ವ್ ಯಶ್ ಮುದ್ದಾದ ನಗು; ಇಲ್ಲಿದೆ ವಿಡಿಯೋ