
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದ (Liger Movie) ಟ್ರೇಲರ್ ಇಂದು (ಜುಲೈ 21) ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ (Vijay Devarakonda) ಅವರು ಸಖತ್ ಮಾಸ್ ಅವತಾರ ತಾಳಿದ್ದಾರೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬ ಝಲಕ್ ಸಿಕ್ಕಿದೆ. ವಿಜಯ್ ದೇವರಕೊಂಡ ಅವರ ಮೇಕೋವರ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ, ರಿಲೀಸ್ ಆಗಿರುವ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಾಣುತ್ತಿದೆ. ಆಗಸ್ಟ್ 25ರಂದು ‘ಲೈಗರ್’ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ವಿಜಯ್ ದೇವರಕೊಂಡ ಅವರು ರೊಮ್ಯಾಂಟಿಕ್ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಆದರೆ, ‘ಲೈಗರ್’ ಚಿತ್ರದಲ್ಲಿ ಅವರು ಬೇರೆಯದೇ ಅವತಾರ ತಾಳಿದ್ದಾರೆ. ಅವರ ಮಾಸ್ ಅವತಾರ, ಸಿಕ್ಸ್ ಪ್ಯಾಕ್ ಬಾಡಿ, ಆ್ಯಕ್ಷನ್ ದೃಶ್ಯಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಈ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ತಮಿಳು ಟ್ರೇಲರ್ ಬೆಳಗ್ಗೆ 9.30ಕ್ಕೆ ರಿಲೀಸ್ ಆಗಿದ್ದು, ಸಂಜೆ ಮುಂಬೈನಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅನನ್ಯಾ ಪಾಂಡೆ ಅವರು ‘ಲೈಗರ್’ ಚಿತ್ರಕ್ಕೆ ನಾಯಕಿ. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ಅವರು ಟ್ರೇಲರ್ನ ಅಂತ್ಯದಲ್ಲಿ ಬರುತ್ತಾರೆ. ಅವರ ಪಾತ್ರ ಏನು ಎಂಬುದು ಪೂರ್ತಿಯಾಗಿ ರಿವೀಲ್ ಆಗಿಲ್ಲ. ರಮ್ಯಾ ಕೃಷ್ಣ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
– Taran Adarsh (@taran_adarsh) 21 July 2022
ಇದನ್ನೂ ಓದಿ: ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಟ್ರೇಲರ್ ಲಾಂಚ್ಗೆ ಪ್ರಭಾಸ್ ಅತಿಥಿ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇಡೀ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಚಿತ್ರಕ್ಕೆ ಪುರಿ ಜಗನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಅಜೀಮ್ ದಯಾನಿ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ‘ಅಕ್ಡಿ ಪಕ್ಡಿ..’ ಹಾಡು ಗಮನ ಸೆಳೆದಿದೆ. ಈಗ ಟ್ರೇಲರ್ ಮೂಲಕ ಚಿತ್ರದ ಮೈಲೇಜ್ ಹೆಚ್ಚಿಸಲಾಗಿದೆ. ಕರಣ್ ಜೋಹರ್, ಪುರಿ ಜಗನಾಥ್ ಮೊದಲಾದವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
Published On - 9:58 am, Thu, 21 July 22