ಅಂದುಕೊಂಡಿದ್ದೆ ಒಂದು, ಆಗಿದ್ದೆ ಒಂದು: ಆರಂಭದ ದಿನಗಳ ನೆನೆದ ವಿಜಯ್ ದೇವರಕೊಂಡ

|

Updated on: Sep 20, 2024 | 11:48 AM

Vijay Deverakonda: ವಿಜಯ್ ದೇವರಕೊಂಡ ಈಗ ಸ್ಟಾರ್ ನಟ, ಅತ್ಯಂತ ಕಡಿಮೆ ಅವಧಿಯಲ್ಲೇ ಸ್ಟಾರ್ ಆಗಿ ಬೆಳೆದರು. ಆದರೆ ಅವರು ನಟನೆ ಆರಂಭಿಸಿದ ಕೆಲವು ವರ್ಷಗಳ ಬಹಳ ಕಷ್ಟಪಟ್ಟಿದ್ದರು. ಆ ದಿನಗಳನ್ನು ಸ್ವತಃ ವಿಜಯ್ ದೇವರಕೊಂಡ ನೆನಪು ಮಾಡಿಕೊಂಡಿದ್ದಾರೆ.

ಅಂದುಕೊಂಡಿದ್ದೆ ಒಂದು, ಆಗಿದ್ದೆ ಒಂದು: ಆರಂಭದ ದಿನಗಳ ನೆನೆದ ವಿಜಯ್ ದೇವರಕೊಂಡ
Follow us on

ವಿಜಯ್ ದೇವರಕೊಂಡ ಈಗ ಪ್ಯಾನ್ ಇಂಡಿಯಾ ನಟ. ತೆಲುಗು ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಸ್ಟಾರ್ ನಟನಾಗಿ ಬೆಳೆದ ಕಲಾವಿದ. ‘ಅರ್ಜುನ್ ರೆಡ್ಡಿ’ ಸಿನಿಮಾ, ವಿಜಯ್ ದೇವರಕೊಂಡ ಅನ್ನು ಸ್ಟಾರ್ ಅನ್ನಾಗಿಸಿತು. ಈಗ ಸಾಲು-ಸಾಲು ಸಿನಿಮಾಗಳು ವಿಜಯ್ ದೇವರಕೊಂಡ ಕೈಯಲ್ಲಿವೆ. ಆದರೆ ವಿಜಯ್ ದೇವರಕೊಂಡ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಚಿತ್ರರಂಗಕ್ಕೆ ಬಂದ ವಿಜಯ್ ದೇವರಕೊಂಡ ಆರಂಭದ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಆರಂಭದ ದಿನಗಳನ್ನು ವಿಜಯ್ ನೆನಪು ಮಾಡಿಕೊಂಡಿದ್ದಾರೆ.

ವಿಜಯ್ ಮೊದಲು‌ ನಟನೆ ಆರಂಭಿಸಿದ್ದು ನಾಟಕಗಳಲ್ಲಿ. ನಾಟಕಗಳಿಂದ ಸಿನಿಮಾಕ್ಕೆ ಬರುವ ಯೋಜನೆ ಹಾಕಿಕೊಂಡು ನಟನೆ ಆರಂಭಿಸಿದರಂತೆ ವಿಜಯ್, ನಾಟಕಗಳಲ್ಲಿ ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ವಿಜಯ್ ನಾಟಕ ಮಾಡುವಾಗ, ಪ್ರತಿ ಬಾರಿಯೂ ಇತರೆ ನಾಟಕ ನಿರ್ದೇಶಕರುಗಳು ತಮ್ಮ ಮುಂದಿನ ನಾಟಕದಲ್ಲಿ ನಟಿಸುವಂತೆ ವಿಜಯ್ ಬಳಿ ಕೇಳಿಕೊಳ್ಳುತ್ತಿದ್ದರಂತೆ. ಅದನ್ನು ಗಮನಿಸಿದ ವಿಜಯ್ ಗೆ ಸಿನಿಮಾಗಳಿಗೆ ಕಾಲಿಟ್ಟಾಗಲೂ ಇದೇ ಪರಿಸ್ಥಿತಿ ಇರುತ್ತದೆ ಎಂದುಕೊಂಡಿದ್ದರಂತೆ. ಆದರೆ ಎಲ್ಲ ಉಲ್ಟಾ ಆಗಿದೆ.

ಸಿನಿಮಾಗಳಲ್ಲಿ ನಟಿಸಲು ನಿರ್ಧರಿಸಿದಾಗ ಯಾರೂ ಅವಕಾಶ ನೀಡಲಿಲ್ಲವಂತೆ. ಆಡಿಷನ್ ಗಳ ಮೇಲೆ ಆಡಿಷನ್ ಅಟೆಂಡ್ ಮಾಡಿದರು ಸಹ ಯಾರು ಅವಕಾಶ ಕೊಡಲಿಲ್ಲವಂತೆ. ಪ್ರತಿದಿನ ಬೆಳಿಗ್ಗೆ ಏಳುವುದು ಎಲ್ಲಿ ಆಡಿಷನ್ ಇದೆ ಎಂದು ನೋಡಿ ಹೋಗಿ ಆಡಿಷನ್ ಕೊಡುವುದು ಇದೇ ವಿಜಯ್ ಕೆಲಸವಾಗಿತ್ತಂತೆ. ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ಪೋಷಕ ಪಾತ್ರದಲ್ಲಿ ನಟಿಸಿದರಾದರೂ ಆ ನಂತರ ಒಂದು ವರ್ಷ ಯಾವ ಸಿನಿಮಾದಲ್ಲಿಯೂ ಅವಕಾಶವೇ ಸಿಗಲಿಲ್ಲವಂತೆ ವಿಜಯ್ ಗೆ.

ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ದಿಗಂತ್, ಆದರೆ ಸಿನಿಮಾ ನಿಂತು ಹೋಗಿದ್ದೇಕೆ?

ಕೊನೆಗೆ ವಿಜಯ್ ಹಾಗೂ ಇತರ ಗೆಳೆಯರೆಲ್ಲ ಸೇರಿ, ಇನ್ನಷ್ಟು ಜನ ಹೂಡಿಕೆದಾರರನ್ನು ಸೇರಿಸಿಕೊಂಡು 60 ಲಕ್ಷ ರೂಪಾಯಿ ಹಣ ಹೊಂದಿಸಿ ‘ಪೆಳ್ಳಿ ಚೂಪುಲು’ ಸಿನಿಮಾ ಮಾಡಿದ್ದಾರೆ. ಸಿನಿಮಾ ಸಾಧಾರಣ ಯಶಸ್ಸು ಕಂಡಿದ್ದು ಮಾತ್ರವೇ ಅಲ್ಲದೆ ಸಿನಿಮಾದ ನಟನೆಗೆ ವಿಜಯ್’ಗೆ ರಾಷ್ಟ್ರಪ್ರಶಸ್ತಿ ಸಹ ದೊರೆಯಿತು. ಹಾಗಿದ್ದರೂ ಸಹ ವಿಜಯ್ ಅನ್ನು ಯಾರೂ ಸಿನಿಮಾಕ್ಕೆ ಹಾಕಿಕೊಳ್ಳಲಿಲ್ಲವಂತೆ. ಅದಾದ ಬಳಿಕ ‘ಅರ್ಜುನ್ ರೆಡ್ಡಿ’ ಅವಕಾಶ ಸಿಕ್ಕಿತು. ಅದಾದ ಮೇಲಷ್ಟೆ ವಿಜಯ್ ಅದೃಷ್ಟದ ಬಾಗಿಲು ತೆರೆದಿದ್ದು.

‘ಅರ್ಜುನ್ ರೆಡ್ಡಿ’ ಸಿನಿಮಾದ ಬಳಿಕ ವಿಜಯ್ ಗೆ ಸಾಲು ಸಾಲಯ ಅವಕಾಶಗಳು‌ ದೊರೆತವು. ‘ಗೀತ ಗೋವಿಂದಂ’ ದೊಡ್ಡ ಹಿಟ್ ಆಯ್ತು. ‘ಡಿಯರ್ ಕಾಮ್ರೆಡ್’ ಇನ್ನೂ ಹಲವು ಸಿನಿಮಾಗಳು ವಿಜಯ್ ಗೆ ಸಿಕ್ಕು ಸ್ಟಾರ್ ನಟ ಎನಿಸಿಕೊಂಡರು. ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ ಸೋತಿತಾದರೂ ಜನಪ್ರಿಯತೆಗೆ ಕುತ್ತು ಬರಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:46 am, Fri, 20 September 24