Aparna Balamurali: ‘ಧೂಮಂ’ ಚಿತ್ರದಲ್ಲಿ ಫಹಾದ್ ಫಾಸಿಲ್​ಗೆ ಜೊತೆಯಾಗಿ ನಟಿಸಿದ ಈ ಅಪರ್ಣಾ ಬಾಲಮುರಳಿ ಯಾರು?

Dhoomam Movie: ‘ಧೂಮಂ’ ಸಿನಿಮಾದ ಟ್ರೇಲರ್ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದೆ. ಅಪರ್ಣಾ ಮಾಡಿದ ದಿಯಾ ಪಾತ್ರ ಗಮನ ಸೆಳೆಯುತ್ತಿದೆ.

Aparna Balamurali: ‘ಧೂಮಂ’ ಚಿತ್ರದಲ್ಲಿ ಫಹಾದ್ ಫಾಸಿಲ್​ಗೆ ಜೊತೆಯಾಗಿ ನಟಿಸಿದ ಈ ಅಪರ್ಣಾ ಬಾಲಮುರಳಿ ಯಾರು?
ಅಪರ್ಣಾ ಬಾಲಮುರಳಿ

Updated on: Jun 08, 2023 | 5:29 PM

ಫಹಾದ್ ಫಾಸಿಲ್ ನಟನೆಯ, ಪವನ್ ಕುಮಾರ್ ನಿರ್ದೇಶನದ ‘ಧೂಮಂ’ (Dhoomam) ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಫಹಾದ್​ ಫಾಸಿಲ್​ ಅವರಿಗೆ ಜೊತೆಯಾಗಿ ನಟಿ ಅಪರ್ಣಾ ಬಾಲಮುರಳಿ (Aparna Balamurali) ಕಾಣಿಸಿಕೊಂಡಿದ್ದಾರೆ. ಮಲಯಾಳಂನ ಈ ಸುಂದರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಕೇವಲ ಗ್ಲಾಮರ್ ಪಾತ್ರ ಒಪ್ಪಿಕೊಳ್ಳದೆ ನಟನೆಗೆ ತೂಕ ಇರುವ ಪಾತ್ರಗಳಲ್ಲಿ ಬಣ್ಣ ಹಚ್ಚಿ ಅವರು ಗಮನ ಸೆಳೆದಿದ್ದಾರೆ. ಅಪರ್ಣಾ ಬಾಲಮುರಳಿ ಯಾರು ಎಂಬುದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ. ಅಪರ್ಣಾ ಬಾಲಮುರಳಿ ಅವರು ಹುಟ್ಟಿದ್ದು 1997ರಲ್ಲಿ. ಅಂದರೆ ಅವರಿಗೆ ಈಗ 27 ವರ್ಷ ವಯಸ್ಸು. ಅಪರ್ಣಾ ಅವರು ಕೇರಳದವರು. 2013ರಲ್ಲಿ ಮಲಯಾಳಂ ಸಿನಿಮಾ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. 10 ವರ್ಷಗಳಲ್ಲಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ತಮಿಳು ಚಿತ್ರರಂಗದಲ್ಲೂ ಸಾಕಷ್ಟು ಬೇಡಿಕೆ ಇದೆ.

ಸೂರ್ಯ ನಟನೆಯ ತಮಿಳಿನ ‘ಸೂರರೈ ಪೋಟ್ರು’ ಚಿತ್ರ ಗಳಿಸಿದ ಜನಪ್ರಿಯತೆ ತುಂಬಾನೇ ದೊಡ್ಡದು. ಈ ಚಿತ್ರದಲ್ಲಿ ನಟಿಸಿದ ಅನೇಕ ಕಲಾವಿದರ ವೃತ್ತಿ ಬದುಕು ಬದಲಾಗಿದೆ. ನಟಿ ಅಪರ್ಣಾ ಬಾಲಮುರಳಿ ಅವರ ವೃತ್ತಿ ಜೀವನದಲ್ಲೂ ಈ ಸಿನಿಮಾ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಇದು ಅವರ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: Aparna Balamurali: ಎಲ್ಲರ ಎದುರು ನಟಿ ಅಪರ್ಣಾ ಮೇಲೆ ಬಲವಂತವಾಗಿ ಕೈ ಹಾಕಿದ ಯುವಕ; ವಿಡಿಯೋ ವೈರಲ್​

ಟೊವಿನೋ ಥಾಮಸ್ ನಟನೆಯ ‘2018’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಸೇರಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲೂ ಅಪರ್ಣಾ ಬಾಲಮುರಳಿ ನಟಿಸಿದ್ದಾರೆ. ಟಿವಿ ವಾಹಿನಿಯ ರಿಪೋರ್ಟರ್​ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ 160 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ‘2018’ ಚಿತ್ರದ ಮೂಲಕ ಅಪರ್ಣಾ ಬಾಲಮುರಳಿ ಅವರು ಗೆದ್ದು ಬೀಗಿದ್ದಾರೆ. ಸದ್ಯ ಅವರ ಕೈಯಲ್ಲಿ ಐದು ಸಿನಿಮಾಗಳಿವೆ.

ಇದನ್ನೂ ಓದಿ: Dhoomam Trailer: ‘ಧೂಮಂ’ ಚಿತ್ರದ ಟ್ರೇಲರ್ ರಿಲೀಸ್​; ನಿರೀಕ್ಷೆ ಮೂಡಿಸಿದ ಫಹಾದ್ ಫಾಸಿಲ್ ಟ್ರ್ಯಾಪ್ ಆಗೋ ಕಥೆ

‘ಧೂಮಂ’ ಸಿನಿಮಾದ ಟ್ರೇಲರ್ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದೆ. ಅಪರ್ಣಾ ಮಾಡಿದ ದಿಯಾ ಪಾತ್ರ ಗಮನ ಸೆಳೆಯುತ್ತಿದೆ. ಕಥಾ ನಾಯಕ ಅವಿ (ಫಹಾದ್ ಫಾಸಿಲ್) ಹಾಗೂ ದಿಯಾ (ಅಪರ್ಣಾ) ನಡುವೆ ಸಿನಿಮಾದ ಕಥೆ ಸುತ್ತಲಿದೆ. ಇಬ್ಬರೂ ತಮ್ಮೊಳಗಿನ ಭಯವನ್ನು ಮೆಟ್ಟಿ ನಿಲ್ಲಲು ಏನೆಲ್ಲ ತ್ಯಾಗ ಮಾಡುತ್ತಾರೆ ಅನ್ನೋದು ಸಿನಿಮಾದ ಕಥೆ. ಈ ಚಿತ್ರದ ಮೂಲಕ ಅಪರ್ಣಾ ಮತ್ತೊಂದು ಗೆಲುವು ಕಾಣೋದು ಪಕ್ಕಾ ಎಂಬುದು ಅಭಿಮಾನಿಗಳ ಅಭಿಪ್ರಾಯ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us