Dhoomam Trailer: ‘ಧೂಮಂ’ ಚಿತ್ರದ ಟ್ರೇಲರ್ ರಿಲೀಸ್; ನಿರೀಕ್ಷೆ ಮೂಡಿಸಿದ ಫಹಾದ್ ಫಾಸಿಲ್ ಟ್ರ್ಯಾಪ್ ಆಗೋ ಕಥೆ
‘ಲೂಸಿಯಾ’, ‘ಯು-ಟರ್ನ್’ ರೀತಿಯ ಸಿನಿಮಾಗಳ ಮೂಲಕ ಜನರಿಗೆ ತಮ್ಮ ಸಾಮರ್ಥ್ಯವನ್ನು ಪವನ್ ಕುಮಾರ್ ಸಾಬೀತುಪಡಿಸಿದ್ದಾರೆ. ಅವರ ನಿರ್ದೇಶನದ ‘ಧೂಮಂ’ ಟ್ರೇಲರ್ ಕೂಡ ಗಮನ ಸೆಳೆದಿದೆ.
ವಿಜಯ್ ಕಿರಗಂದೂರು ಒಡೆತನದ ‘ಹೊಂಬಾಳೆ ಫಿಲ್ಮ್ಸ್’ (Hombale Films ) ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಬೆಳೆದಿದೆ. ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ’ ಮುಂತಾದ ಸಿನಿಮಾಗಳನ್ನು ನೀಡಿರುವ ಈ ಬ್ಯಾನರ್ ಮೇಲೆ ಪ್ರೇಕ್ಷಕರಿಗೆ ಸಖತ್ ಭರವಸೆ ಮೂಡಿದೆ. ಈ ಪ್ರೊಡಕ್ಷನ್ ಹೌಸ್ನಿಂದ ಬರಲಿರುವ ಎಲ್ಲ ಸಿನಿಮಾಗಳ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಇದೇ ಸಂಸ್ಥೆಯು ‘ಧೂಮಂ’ ಸಿನಿಮಾ (Dhoomam Movie) ನಿರ್ಮಾಣ ಮಾಡುತ್ತಿದೆ. ಪವನ್ ಕುಮಾರ್ ನಿರ್ದೇಶನದ, ಫಹಾದ್ ಫಾಸಿಲ್ ನಟನೆಯ ಈ ಚಿತ್ರದ ಟ್ರೇಲರ್ ಇಂದು (ಜೂನ್ 8) ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಿದೆ. ಈ ಟ್ರೇಲರ್ ಕೌತುಕ ಮೂಡಿಸಿದೆ.
ಹೀರೋ (ಫಹಾದ್) ಆ್ಯಡ್ ಏಜೆನ್ಸಿಯಲ್ಲಿ ಉದ್ಯೋಗ ಮಾಡುತ್ತಿರುತ್ತಾನೆ. ತಂಬಾಕು ಜಾಹೀರಾತನ್ನು ಹೊಸ ರೀತಿಯಲ್ಲಿ ಕಟ್ಟಿಕೊಡಬೇಕು ಅನ್ನೋದು ಆತನ ಕನಸು. ಬಳಿಕ ಹಣ ಮಾಡಲು ಬೇರೆ ದಾರಿ ಹಿಡಿಯುತ್ತಾನೆ. ಆಗ ಆತ ಟ್ರ್ಯಾಪ್ ಆಗುತ್ತಾ ಹೋಗುತ್ತಾನೆ. ಇವಿಷ್ಟು ವಿಚಾರವನ್ನು ಟ್ರೇಲರ್ನಲ್ಲಿ ಹೇಳಲಾಗಿದೆ. ಜೂನ್ 23ರಂದು ಸಿನಿಮಾ ತೆರೆಗೆ ಬರುತ್ತಿದೆ. ಮೂಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ರಿಲೀಸ್ ಆಗುತ್ತಿದೆ.
ಪವನ್ ಕುಮಾರ್ ಅವರ ನಿರ್ದೇಶನದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಲೂಸಿಯಾ’, ‘ಯು-ಟರ್ನ್’ ರೀತಿಯ ಸಿನಿಮಾಗಳ ಮೂಲಕ ಜನರಿಗೆ ತಮ್ಮ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ. ಇನ್ನು, ಫಹಾದ್ ಫಾಸಿಲ್ ಅವರು ತಮ್ಮ ನಟನೆ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಯನ್ನು ಮೆಚ್ಚಿಕೊಂಡವರು ಹಲವರಿದ್ದಾರೆ. ‘ಧೂಮಂ’ ಚಿತ್ರಕ್ಕಾಗಿ ಇವರು ಒಂದಾಗಿದ್ದು ಸಹಜವಾಗಿಯೇ ಕುತೂಹಲ ಸೃಷ್ಟಿಸಿತ್ತು. ‘ಧೂಮಂ’ ಸಿನಿಮಾ ಕೂಡ ಡಿಫರೆಂಟ್ ಆಗಿದೆ ಅನ್ನೋದಕ್ಕೆ ಟ್ರೇಲರ್ ಸಾಕ್ಷಿ ಒದಗಿಸುತ್ತಿದೆ.
A few souls leave behind a trail (er) of Smoke and Mirrors.
The intriguing #DhoomamTrailer out now!
▶️ https://t.co/MYfInukSd4#ധൂമം #Dhoomam Worldwide Grand Release On June 23, 2023.#FahadhFaasil @pawanfilms #VijayKiragandur @aparnabala2 @hombalefilms @PrithvirajProd… pic.twitter.com/O2F2eMgKqi
— Hombale Films (@hombalefilms) June 8, 2023
ಇದನ್ನೂ ಓದಿ: ಶರವೇಗದಲ್ಲಿ ‘ಧೂಮಂ’ ಶೂಟಿಂಗ್ ಮುಗಿಸಿದ ಪವನ್ ಕುಮಾರ್; ರಿಲೀಸ್ ಯಾವಾಗ?
ಅಕ್ಟೋಬರ್ 9ರಂದು ‘ಧೂಮಂ’ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ‘ಧೂಮಂ’ ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಆರಂಭ ಫಲಕ ತೋರಿದ್ದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ನೀಡಿದ್ದರು. ಮೂರೇ ತಿಂಗಳಲ್ಲಿ ‘ಧೂಮಂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿತ್ತು.
‘ಧೂಮಂ’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಜೊತೆ ರೋಷನ್ ಮ್ಯಾಥೀವ್, ಅಪರ್ಣಾ ಬಾಲಮುರಳಿ ಮುಂತಾದವರು ನಟಿಸುತ್ತಿದ್ದಾರೆ. ‘ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Thu, 8 June 23