‘ಪುಷ್ಪ 2’ ನಾಳೆ (ಡಿಸೆಂಬರ್ 05) ಬಿಡುಗಡೆ ಆಗುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಇಂದು (ಡಿಸೆಂಬರ್ 04) ರ ರಾತ್ರಿಯೇ ಮೊದಲ ಶೋ ಪ್ರದರ್ಶನಗೊಳ್ಳಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ಬಿಹಾರದ ಪಟ್ನಾನಲ್ಲಿ ಬಲು ಜೋರಾಗಿ ಪ್ರೀ ರಿಲೀಸ್ ಇವೆಂಟ್ ಮಾಡಿದ್ದರು. ಆ ನಂತರ ಚೆನ್ನೈ, ಕೇರಳದ ಕೊಚ್ಚಿ, ಮುಂಬೈ ಕೊನೆಗೆ ಹೈದರಾಬಾದ್ನಲ್ಲಿಯೂ ಭಾರಿ ದೊಡ್ಡ ಪ್ರಚಾರದ ಇವೆಂಟ್ಗಳನ್ನು ಚಿತ್ರತಂಡ ಮಾಡಿತ್ತು. ಮೊದಲು ಇವೆಂಟ್ ಘೋಷಣೆಯಾದಾಗ ಬೆಂಗಳೂರಿನಲ್ಲಿಯೂ ಕಾರ್ಯಕ್ರಮ ಮಾಡುವುದಾಗಿ ಹೇಳಲಾಗಿತ್ತು. ಆದರೆ ಬೆಂಗಳೂರಿಗೆ ಬರಲೇ ಇಲ್ಲ ಅಲ್ಲು ಅರ್ಜುನ್.
‘ಪುಷ್ಪ 2’ ಚಿತ್ರತಂಡ ಬೆಂಗಳೂರಿಗೆ ಬರದೇ ಇರುವುದು ಇಲ್ಲಿನ ಅಲ್ಲು ಅರ್ಜುನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಉದ್ದೇಶಪೂರ್ವಕವಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಬೆಂಗಳೂರಿಗೆ ಬಂದಿಲ್ಲ ಎಂಬ ಆರೋಪಗಳೂ ಸಹ ಕೇಳಿ ಬಂದಿತ್ತು. ‘ಪುಷ್ಪ 2’ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಖರೀದಿ ಮಾಡಿರುವ ವಿತರಕ ಲಕ್ಷ್ಮಿಕಾಂತ್ ಮಾತನಾಡಿದ್ದು, ಅಲ್ಲು ಅರ್ಜುನ್ ಕರ್ನಾಟಕಕ್ಕೆ ಏಕೆ ಬರಲಿಲ್ಲ ಎಂದು ವಿವರಣೆ ನೀಡಿದ್ದಾರೆ.
ಅಲ್ಲು ಅರ್ಜುನ್ ಬೆಂಗಳೂರಿಗೆ ಬರುವ ಯೋಜನೆ ಇತ್ತಂತೆ ಆದರೆ ಇಲ್ಲಿ ವಿಪರೀತ ಮಳೆ ಇದ್ದ ಕಾರಣ ಅವರು ಬರಲಿಲ್ಲವಂತೆ. ಆದರೆ ‘ಪುಷ್ಪ 2’ ಸಿನಿಮಾದ ಸಕ್ಸಸ್ ಮೀಟ್ ಬೆಂಗಳೂರಿನಲ್ಲಿಯೇ ಆಯೋಜಿಸಿ ಆ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸುಕುಮಾರ್ ಚಿತ್ರತಂಡದ ಇತರೆ ಸದಸ್ಯರು ಬರುವಂತೆ ಮಾಡುವುದಾಗಿ ಲಕ್ಷ್ಮಿಕಾಂತ್ ಹೇಳಿದ್ದಾರೆ.
ಇದನ್ನೂ ಓದಿ:‘ಪುಷ್ಪ 2’ ಯಾವ ನಗರದಲ್ಲಿ ಟಿಕೆಟ್ ದರ ಎಷ್ಟಿದೆ? ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?
ಬೆಂಗಳೂರಿನಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳ ಆಗಿರುವ ಬಗ್ಗೆ ಮಾತನಾಡಿರುವ ಲಕ್ಷ್ಮಿಕಾಂತ್, ‘ಟಿಕೆಟ್ ರೇಟ್ ಹೆಚ್ಚಳಕ್ಕೆ ನಮಗೆ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಫಿಲಂ ಚೇಂಬರ್ ಏನು ನಿರ್ಣಯ ತೆಗೆದುಕೊಳ್ಳುವುದೋ ಅದಕ್ಕೆ ನಾವು ಬದ್ಧವಾಗಿರುತ್ತೇವೆ’ ಎಂದಿದ್ದಾರೆ.
‘ಪುಷ್ಪ 2’ ಸಿನಿಮಾ ಬೆಂಗಳೂರಿನಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಭಾರತದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಟಿಕೆಟ್ ದರ ಹೆಚ್ಚಾಗಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾದ ಟಿಕೆಟ್ ದರ 1200 ರ ವರೆಗೂ ಮಾರಾಟ ಆಗುತ್ತಿವೆ. ಐಮ್ಯಾಕ್ಸ್ ಟಿಕೆಟ್ಗಳು 1500 ರೂಪಾಯಿಗೆ ಮಾರಾಟವಾಗುತ್ತಿವೆ. ಒಟ್ಟಾರೆ ‘ಪುಷ್ಪ 2’ ಸಿನಿಮಾ ಬೆಂಗಳೂರಿನಲ್ಲಿ ಭಾರಿ ಕಮಾಯಿಯನ್ನೇ ಮಾಡಿಕೊಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ