Trisha: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

Thalapathy Vijay | Trisha Krishnan: ‘ಲಿಯೋ’ ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ತ್ರಿಷಾ ಅವರು ಕಾಶ್ಮೀರದಿಂದ ವಾಪಸ್​ ಬಂದರು ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಅದರ ಹಿಂದಿನ ಕಾರಣ ಬೇರೆಯೇ ಇದೆ.

Trisha: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ
ದಳಪತಿ ವಿಜಯ್, ತ್ರಿಷಾ ಕೃಷ್ಣನ್

Updated on: Feb 09, 2023 | 4:49 PM

ಕಾಲಿವುಡ್​ನಲ್ಲಿ ತ್ರಿಷಾ ಕೃಷ್ಣನ್​ ಮತ್ತು ದಳಪತಿ ವಿಜಯ್​ (Thalapathy Vijay) ಅವರದ್ದು ಹಿಟ್​ ಜೋಡಿ. ಹಲವು ವರ್ಷಗಳ ಬಳಿಕ ಅವರಿಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್​ ಸಂಭ್ರಮಿಸಿದ್ದರು. ದಳಪತಿ ವಿಜಯ್​ ನಟನೆಯ 67ನೇ ಚಿತ್ರವಾದ ‘ಲಿಯೋ’ (Leo Movie) ಸಿನಿಮಾಗೆ ತ್ರಿಷಾ ನಾಯಕಿ. ಆ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ಆದರೆ ತ್ರಿಷಾ (Trisha Krishnan) ಅವರು ಈಗ ಕಾಶ್ಮೀರವನ್ನು ಬಿಟ್ಟು ವಾಪಸ್​ ಬಂದಿದ್ದಾರೆ. ಅವರು ಈ ಸಿನಿಮಾ ತಂಡದಿಂದ ಹೊರಗೆ ಬಂದಿದ್ದಾರೆ ಎಂಬ ಗಾಸಿಪ್​ ಕೂಡ ಹಬ್ಬಿದೆ. ಆದರೆ ಇದರ ಅಸಲಿ ಕಹಾನಿಯೇ ಬೇರೆ ಇದೆ.

ಹಲವು ಕಾರಣಗಳಿಂದಾಗಿ ‘ಲಿಯೋ’ ಸಿನಿಮಾ ಮೇಲೆ ನಿರೀಕ್ಷೆ ಇದೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಮುಹೂರ್ತ ನೆರವೇರಿತು. ಆಗ ತ್ರಿಷಾ ಮತ್ತು ದಳಪತಿ ವಿಜಯ್​ ಅವರನ್ನು ನೋಡಿ ಫ್ಯಾನ್ಸ್​ ಖುಷಿಪಟ್ಟರು. ಶೂಟಿಂಗ್ ಸಲುವಾಗಿ ಕಾಶ್ಮೀರಕ್ಕೆ ತೆರಳಿದಾಗಲೂ ಅವರಿಬ್ಬರು ಜೊತೆಯಲ್ಲೇ ಇದ್ದರು. ಆದರೆ ಈಗ ತ್ರಿಷಾ ಅವರು ಏಕಾಏಕಿ ವಾಪಸ್​ ಬಂದಿರುವುದೇಕೆ ಎಂದು ಫ್ಯಾನ್ಸ್​ ಪ್ರಶ್ನೆ ಎತ್ತಿದ್ದಾರೆ.

ಇದನ್ನೂ ಓದಿ: 18 ವರ್ಷಗಳ ಬಳಿಕ ಪ್ರದರ್ಶನಗೊಂಡ ‘ವರ್ಷಂ’ ಚಿತ್ರ; ಅಭಿಮಾನಿಗಳ ಪ್ರೀತಿಗೆ ಭಾವುಕರಾದ ತ್ರಿಷಾ

ಇದನ್ನೂ ಓದಿ
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ತ್ರಿಷಾ ಅವರು ಕಾಶ್ಮೀರದಿಂದ ವಾಪಸ್​ ಬಂದರು ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಅದರ ಹಿಂದಿನ ಕಾರಣ ಬೇರೆಯೇ ಇದೆ. ಕಾಶ್ಮೀರದಲ್ಲಿ ಈಗ ಸಿಕ್ಕಾಪಟ್ಟೆ ಚಳಿ ಇದೆ. ಅದು ತ್ರಿಷಾ ಅವರ ಆರೋಗ್ಯಕ್ಕೆ ಹೊಂದಿಕೆ ಆಗುತ್ತಿಲ್ಲ. ಅವರ ಪಾಲಿನ ದೃಶ್ಯಗಳ ಶೂಟಿಂಗ್​ನಲ್ಲಿ ಭಾಗವಹಿಸಿದ ನಂತರ ಕಾಶ್ಮೀರದಲ್ಲಿಯೇ ಉಳಿದುಕೊಳ್ಳುವ ಬದಲು, ಅವರು ದೆಹಲಿಗೆ ಬಂದು ತಂಗಿದ್ದಾರೆ. ಮತ್ತೆ ಅಗತ್ಯವಿದ್ದಾಗ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಇದನ್ನೂ ಓದಿ: ರಾಜಕೀಯದ ಕಡೆ ತ್ರಿಷಾ ಒಲವು; ಕಾಂಗ್ರೆಸ್ ಸೇರಲಿದ್ದಾರೆ ‘ಪವರ್​’ ನಟಿ?

ಲೋಕೇಶ್​ ಕನಗರಾಜ್​ ಅವರು ‘ಕೈದಿ’, ‘ವಿಕ್ರಮ್​’ ಮುಂತಾದ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಆ ಚಿತ್ರಗಳಿಗೆ ‘ಲಿಯೋ’ ಸಿನಿಮಾದ ಕಥೆಯಲ್ಲಿ ಲಿಂಕ್​ ನೀಡಲಾಗುವುದು ಎಂದು ಕೂಡ ಹೇಳಲಾಗುತ್ತಿದೆ. ಅದರಲ್ಲಿ ತ್ರಿಷಾ ಪಾತ್ರ ಹೇಗೆ ಕನೆಕ್ಟ್​ ಆಗಲಿದೆ ಎಂದು ತಿಳಿಯಲು ಫ್ಯಾನ್ಸ್​ ಕಾದಿ​ದ್ದಾರೆ.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್​ ನಟನೆಯ 67ನೇ ಚಿತ್ರಕ್ಕೆ ‘ಲಿಯೋ’ ಎಂದು ಹೆಸರಿಟ್ಟ ನಿರ್ದೇಶಕ ಲೋಕೇಶ್​ ಕನಗರಾಜ್​​

ಈ ವರ್ಷದ ಆರಂಭದಲ್ಲೇ ದಳಪತಿ ವಿಜಯ್​ ಅವರಿಗೆ ‘ವಾರಿಸು’ ಸಿನಿಮಾದಿಂದ ಗೆಲುವು ಸಿಕ್ಕಿದೆ. ಹಾಗಾಗಿ ಅವರು ಹೊಸ ಹುಮ್ಮಸ್ಸಿನೊಂದಿಗೆ ‘ಲಿಯೋ’ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಶೀರ್ಷಿಕೆ ತಿಳಿಸಲು ಸಲುವಾಗಿ ಬಿಡುಗಡೆ ಆಗಿರುವ ಟೀಸರ್​ ಸಖತ್​ ವೈರಲ್​ ಆಗಿದೆ. ಈಗಾಗಲೇ ಈ ಸಿನಿಮಾದ ಒಟಿಟಿ ಮತ್ತು ಕಿರುತೆರೆ ಪ್ರಸಾರ ಹಕ್ಕುಗಳು ಉತ್ತಮ ಬೆಲೆಗೆ ಮಾರಾಟ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us