‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಸಿನಿಮಾಕ್ಕೆ ಹೋಲಿಸಿದ ಯಶ್

Toxic movie release: ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ರಿಲೀಸ್ ಆಗಲಿದ್ದು, ಸಿನಿಮಾದ ಪ್ರಚಾರವನ್ನು ಯಶ್ ಆರಂಭಿಸಿದಂತಿದ್ದಾರೆ. ಯಶ್ ನಟಿಸಿರುವ ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026ನಲ್ಲಿ ಯಶ್ ಭಾಗಿ ಆಗಿದ್ದರು. ಈ ವೇಳೆ ಅವರು ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಮಾತನಾಡಿದ್ದು, ‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಹಾಲಿವುಡ್ ಸಿನಿಮಾಕ್ಕೆ ಹೋಲಿಕೆ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಸಿನಿಮಾಕ್ಕೆ ಹೋಲಿಸಿದ ಯಶ್
Toxic Sinners

Updated on: Apr 16, 2026 | 6:22 PM

ಯಶ್ (Yash) ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರವಾಗಿದೆ. ಮಾರ್ಚ್ 19ರಂದೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ, ಅಮೆರಿಕ-ಇರಾನ್ ಯುದ್ಧದ ಕಾರಣದಿಂದಾಗಿ ರಿಲೀಸ್ ಮುಂದೂಡಲ್ಪಟ್ಟಿದೆ. ಇದೀಗ ಸಿನಿಮಾ ಜೂನ್ 4 ರಂದು ರಿಲೀಸ್ ಆಗಲಿದ್ದು, ಸಿನಿಮಾದ ಪ್ರಚಾರವನ್ನು ಯಶ್ ಆರಂಭಿಸಿದಂತಿದ್ದಾರೆ. ಯಶ್ ನಟಿಸಿರುವ ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026ನಲ್ಲಿ ಯಶ್ ಭಾಗಿ ಆಗಿದ್ದರು. ಈ ವೇಳೆ ಅವರು ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಮಾತನಾಡಿದ್ದು, ‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಹಾಲಿವುಡ್ ಸಿನಿಮಾಕ್ಕೆ ಹೋಲಿಕೆ ಮಾಡಿದ್ದಾರೆ.

ಯಶ್ ಅವರು ತಮ್ಮ ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್​​ನ ಹಿಟ್ ಸಿನಿಮಾ ‘ಸಿನ್ನರ್ಸ್’ಗೆ ಹೋಲಿಸಿದ್ದಾರೆ. ಮೈಕಲ್ ಬಿ ಜೋರ್ಡನ್ ದ್ವಿಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಬಹಳ ಭಿನ್ನ ಕತೆಯುಳ್ಳ ಹಾರರ್ ಸಿನಿಮಾ ಆಗಿದೆ. ಹೆಸರಿಗೆ ಇದು ಝಾಂಬಿ ಸಿನಿಮಾ ಆಗಿದ್ದರೂ ಸಹ ಸಿನಿಮಾದ ಒಳ ಅರ್ಥವೇ ಬೇರೆಯದ್ದಾಗಿದೆ. ಸಿನಿಮಾ, ಕಪ್ಪುವರ್ಣೀಯರ ಚರಿತ್ರೆ, ಅವರ ಮೇಲಾದ ದಬ್ಬಾಳಿಕೆಗಳ ಬಗ್ಗೆ ಮಾತನಾಡುತ್ತಾರೆ. ಬಹಳ ಒರಿಜಿನಲ್, ಪ್ರತ್ಯೇಕ ಕತೆಯನ್ನು ಈ ಸಿನಿಮಾ ಹೊಂದಿದ್ದು, ಇದೇ ಕಾರಣಕ್ಕೆ ಬಹಳ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಆಸ್ಕರ್​​ ಪ್ರಶಸ್ತಿಗಳನ್ನು ಸಹ ಗೆದ್ದಿದೆ.

‘ಸಿನರ್ಸ್’ ಸಿನಿಮಾ ಯಾವ ರೀತಿ ತನ್ನ ಶೈಲಿ ಮತ್ತು ನಿರೂಪಣೆಯಲ್ಲಿ ವಿಶಿಷ್ಟವಾಗಿದೆಯೋ, ಅದೇ ರೀತಿ ‘ಟಾಕ್ಸಿಕ್’ ಕೂಡ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಮಾದರಿಯ ಅನುಭವ ನೀಡಲಿದೆ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಯಾವುದೇ ಸಿನಿಮಾದ ಪ್ರೇರಣೆಯಲ್ಲ ಅಥವಾ ರಿಮೇಕ್ ಅಲ್ಲ. ಬದಲಿಗೆ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಸಿದ್ಧಪಡಿಸಿರುವ ಸಂಪೂರ್ಣ ವಿಶಿಷ್ಟವಾದ ಸ್ಕ್ರಿಪ್ಟ್ ಇದಾಗಿದೆ. “ನಾವು ಹೊಸದನ್ನು ಮತ್ತು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಹದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ:ತಮ್ಮನ್ನು ಬೆಂಬಲಿಸದವರನ್ನು ಅಮೆರಿಕದಲ್ಲೂ ನೆನಪಿಸಿಕೊಂಡ ಯಶ್

‘ಈ ಚಿತ್ರವು ಅಂತರಾಷ್ಟ್ರೀಯ ಗುಣಮಟ್ಟದ ಮೇಕಿಂಗ್ ಮತ್ತು ತಾಂತ್ರಿಕತೆಯನ್ನು ಹೊಂದಿರಲಿದ್ದು, ಕೇವಲ ಭಾರತೀಯ ಪ್ರೇಕ್ಷಕರಿಗಷ್ಟೇ ಅಲ್ಲದೆ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುವಂತೆ ಸಿದ್ಧವಾಗುತ್ತಿದೆ. ನಮ್ಮದು ಮೇಲ್ನೋಟಕ್ಕೆ ಗ್ಯಾಂಗ್​​ಸ್ಟರ್ ಸಿನಿಮಾ ಆಗಿದ್ದರೂ ಸಹ ಆಳದಲ್ಲಿ ಅದು ಮಾನವೀಯತೆ ಪ್ರತಿಪಾದಿಸುವ ಸಿನಿಮಾ ಆಗಿದೆ. ಗೀತು ಮೋಹನ್​​ದಾಸ್ ಅವರು ವಿಶಿಷ್ಟವಾದ ಸಿನಿಮಾ ಮಾಡಿದ್ದಾರೆ’ ಎಂದಿದ್ದಾರೆ ಯಶ್.

‘ಟಾಕ್ಸಿಕ್’ ಸಿನಿಮಾದ ಟೀಸರ್​ಗಳಲ್ಲಿ ಸಖತ್ ಹಿಂಸಾತ್ಮಕವಾಗಿ ಯಶ್ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಆದಾಗ ಸಿನಿಮಾದಲ್ಲಿರುವ ಹಿಂಸೆಯ ಬಗ್ಗೆ ಕೆಲವರು ತಕರಾರು ಎತ್ತಿದ್ದರು. ಆದರೆ ತಮ್ಮ ಸಿನಿಮಾದ ಆಶಯ ಮಾನವೀಯತೆ ಎಂದು ಯಶ್ ಹೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us