AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?

'ರಾಮಾಯಣ' ಸಿನಿಮಾದಲ್ಲಿ ಯಶ್ ರಾವಣ, ರಣಬೀರ್ ಕಪೂರ್ ರಾಮನಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ. ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಇತ್ತೀಚೆಗೆ ಯಶ್ ನೀಡಿದ ಸಂದರ್ಶನದಲ್ಲಿ, 'ರಣಬೀರ್ ಮತ್ತು ನಾನು ಇದುವರೆಗೆ ರಾಮಾಯಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ' ಎಂದಿದ್ದರು. ಇದನ್ನು ಕೆಲವರು ಸ್ಪಾಯ್ಲರ್ ಎಂದು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ.

‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?
ಯಶ್-ರಣಬೀರ್
ರಾಜೇಶ್ ದುಗ್ಗುಮನೆ
|

Updated on:Apr 16, 2026 | 8:28 AM

Share

‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣನ ಪಾತ್ರ ಮಾಡುತ್ತಿದ್ದು, ರಣಬೀರ್ ಕಪೂರ್ ಅವರು ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರದ್ದು ಸೀತೆಯ ಪಾತ್ರ. ಈ ಚಿತ್ರ ಎರಡು ಭಾಗದಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮೊದಲೇ ಯಶ್ ಅವರು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ರೀತಿ ಸಂದರ್ಶನ ನೀಡುವಾಗ ಅವರು ಒಂದು ಪ್ರಮುಖ ವಿಷಯ ರಿವೀಲ್ ಮಾಡಿದರೇ ಎನ್ನುವ ವಿಷಯ ಚರ್ಚೆಗೆ ಕಾರಣ ಆಗಿದೆ. ಆದರೆ, ಅದರ ಅಸಲಿಯತ್ತು ಬೇರೆಯೇ ಇದೆ.

ಯಶ್ ಅವರು ‘ಸಿನಿಮಾಕಾನ್ 2026’ರಲ್ಲಿ ಪಾಲ್ಗೊಂಡು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಯಶ್ ಅವರಿಗೆ ರಣಬೀರ್ ಕಪೂರ್ ಬಗ್ಗೆ ಕೇಳಲಾಯಿತು. ಆಗ ಯಶ್ ಅವರು ಮಾತನಾಡುತ್ತಾ, ‘ನಾನು ಹಾಗೂ ರಣಬೀರ್ ಕಪೂರ್ ರಾಮಾಯಣದಲ್ಲಿ ಈವರೆಗೆ ಒಟ್ಟಿಗೆ ಕಾಣಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ. ಅಂದರೆ, ಮೊದಲ ಭಾಗದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ಖಚಿತ ಮಾಡಿದಂತಾಯ್ತು.

ಆದರೆ, ಕೆಲವರು ಇದನ್ನು ಬೇರೆ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ‘ಯಶ್ ಹಾಗೂ ರಣಬೀರ್ ಕಪೂರ್​ ದೃಶ್ಯ ಮೊದಲ ಪಾರ್ಟ್​​​ನಲ್ಲಿ ಇರಲಿದೆ ಎಂದು ನಿರೀಕ್ಷಿಸಿದವರಿಗೆ ಇದು ನಿರಾಸೆ ಮೂಡಿಸಿದೆ. ಯಶ್ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿದ್ದಾರೆ’ ಎಂದೆಲ್ಲ ಹೇಳಿದರು.

ಇದನ್ನೂ ಓದಿ: ತಮ್ಮನ್ನು ಬೆಂಬಲಿಸದವರನ್ನು ಅಮೆರಿಕದಲ್ಲೂ ನೆನಪಿಸಿಕೊಂಡ ಯಶ್

ಆದರೆ, ಅಸಲಿಯತ್ತು ಹಾಗಿಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ, ಲಂಕಾದಲ್ಲಿ ಅಂತಿಮ ಯುದ್ಧ ನಡೆಯುವವರೆಗೂ ರಾಮ ಮತ್ತು ರಾವಣ ಮುಖಾಮುಖಿಯಾಗಲಿಲ್ಲ. ಈ ಸಿನಿಮಾ ಎರಡು ಭಾಗದಲ್ಲಿ ಬರಲಿದೆ ಎಂದು ಮೊದಲೇ ಹೇಳಲಾಗಿದೆ. ಹೀಗಿರುವಾಗ ಯಶ್ ಹೇಳಿದ್ದು ಸ್ಪಾಯ್ಲರ್ ಹೇಗಾಯಿತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ‘ಇವರು ಕ್ಲೈಮ್ಯಾಕ್ಸ್​​ನ ಮೊದಲ ಭಾಗದಲ್ಲೇ ನಿರೀಕ್ಷೆ ಮಾಡಿತ್ತಿದ್ದಾರೆ’ ಅನಿಸುತ್ತದೆ ಎಂದು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:27 am, Thu, 16 April 26

Follow Us
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ