Akshaya Tritiya 2024
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಈ ವರ್ಷ ಮೇ.10 ಶುಕ್ರವಾರದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ. ಅಕ್ಷಯ ತೃತೀಯವು ಸಮೃದ್ಧಿ ಮತ್ತು ಸಂಪತ್ತಿನ ಭರವಸೆಯನ್ನು ತರುತ್ತದೆ. ಈ ಶುಭ ದಿನದಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಿದರೆ, ಅದು ಸಂಪತ್ತನ್ನು ಸೇರಿಸುತ್ತದೆ ಎಂದು ನಂಬಲಾಗಿದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮತ್ತು ಹೊಸ ವ್ಯವಹಾರವನ್ನು ಪ್ರಾರಂಭಿಸುವುದು ಮುಂತಾದ ಮಂಗಳಕರ ಆಚರಣೆಗಳನ್ನು ಈ ದಿನ ಮಾಡಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯವನ್ನು ಆಚರಿಸುವುದರ ಜೊತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಹಂಚಿಕೊಳ್ಳಬಹುದಾದ ಕೆಲವು ಶುಭಾಶಯಗಳು ಇಲ್ಲಿವೆ.
ಅಕ್ಷಯ ತೃತೀಯದ ಶುಭಾಶಯಗಳು:
- ಅಕ್ಷಯ ತೃತೀಯದಂದು ನೀವು ಕೈಗೊಂಡ ಎಲ್ಲಾ ಕಾರ್ಯಗಳು ನಿಮಗೆ ಅಕ್ಷಯ ಫಲವನ್ನು ನೀಡಲಿ, ಅದೃಷ್ಟ ಲಕ್ಷ್ಮಿ ನಿಮಗೆ ಒಲಿಯುವಂತಾಗಲಿ ಎಂದು ಹಾರೈಸುತ್ತೇನೆ. ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು.
- ಅಕ್ಷಯ ತೃತೀಯ ಶುಭಾಶಯಗಳು. ಭಗವಂತ ನಿಮ್ಮ ಸಮೃದ್ಧಿ ಮತ್ತು ಸಂತೋಷವನ್ನು ಕಾಪಾಡಲಿ.
- ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ ಎಂದು ಹಾರೈಸುವೆ. ಅಕ್ಷಯ ತೃತೀಯ ಶುಭಾಶಯಗಳು
- ಯಜ್ಞ, ಪೂಜೆ ಮತ್ತು ಆಚರಣೆಗಳೊಂದಿಗೆ, ಈ ಮಂಗಳಕರ ದಿನದಂದು ನಮ್ಮ ಮನೆಗಳಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಸ್ವಾಗತಿಸೋಣ. ಅಕ್ಷಯ ತೃತೀಯ ಶುಭಾಶಯಗಳು.
- ಅಕ್ಷಯ ತೃತೀಯವು ಬೇಡಿದ್ದನ್ನು ನೀಡುವ ನಿಮ್ಮ ಕೈಗಳನ್ನು ಎಂದಿಗೂ ಅಕ್ಷಯವಾಗಿರಿಸಲಿ. ನಿಮ್ಮಿಂದ ಮತ್ತಷ್ಟು ಉಪಕಾರಗಳು ಈ ಸಮಾಜಕ್ಕೆ ಆಗುವಂತಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಅಕ್ಷಯ ತೃತೀಯದ ಶುಭಾಶಯಗಳು.
- ಕ್ಷಯವಾಗಲಿ ನಿಮ್ಮೆಲ್ಲಾ ಸಂಕಷ್ಟಗಳು, ಕ್ಷಯವಾಗಲಿ ನಿಮ್ಮೆಲ್ಲಾ ನೋವುಗಳು, ಕ್ಷಯವಾಗಲಿ ನಿಮ್ಮೆಲ್ಲಾ ಅಜ್ಞಾನಗಳು.. ಎಂದು ಹಾರೈಸುತ್ತಾ ಅಕ್ಷಯ ತೃತೀಯದ ಶುಭಾಶಯಗಳು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ