Akshaya Tritiya 2024: ಅಕ್ಷಯ ತೃತೀಯದಂದು ಲಕ್ಷ್ಮೀ ದೇವಿಗೆ ಈ ವಸ್ತುಗಳನ್ನು ಅರ್ಪಿಸಿ

ಅಕ್ಷಯ ತೃತೀಯದಂದು ವಿಶೇಷ ಭಕ್ಷ್ಯಗಳನ್ನು ತಯಾರಿಸಿ ದೇವರ ಆಶೀರ್ವಾದ ಪಡೆಯಲು ಅದನ್ನು ಭಕ್ತಿಯಿಂದ ಅರ್ಪಿಸುತ್ತಾರೆ. ಪೂಜೆಯ ಸಮಯದಲ್ಲಿ ದೇವರಿಗೆ ಆಹಾರವನ್ನು ಅರ್ಪಿಸುವುದು ತುಂಬಾ ಒಳ್ಳೆಯದು ಎಂದು ಶಾಸ್ತ್ರಗಳಲ್ಲಿಯೂ ಹೇಳಲಾಗಿದ. ಏಕೆಂದರೆ ನೈವೇದ್ಯವನ್ನು ಅರ್ಪಣೆ ಮಾಡದಿದ್ದಲ್ಲಿ ಆ ಪೂಜೆ ಅಪೂರ್ಣ ಎನಿಸಿಕೊಳ್ಳುತ್ತದೆ. ಆದ್ದರಿಂದ ಅಕ್ಷಯ ತೃತೀಯದ ದಿನ ಈ ವಿಶೇಷ ವಸ್ತುಗಳನ್ನು ದೇವರಿಗೆ ಅರ್ಪಿಸಿ ಆಶೀರ್ವಾದ ಪಡೆದುಕೊಳ್ಳಿ.

Akshaya Tritiya 2024: ಅಕ್ಷಯ ತೃತೀಯದಂದು ಲಕ್ಷ್ಮೀ ದೇವಿಗೆ ಈ ವಸ್ತುಗಳನ್ನು ಅರ್ಪಿಸಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:May 08, 2024 | 12:03 PM

ಹಿಂದೂ ಧರ್ಮದಲ್ಲಿ, ಅಕ್ಷಯ ತೃತೀಯವನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ, ವಿಷ್ಣು, ತಾಯಿ ಲಕ್ಷ್ಮೀ ದೇವಿ ಮತ್ತು ಸಂಪತ್ತಿನ ದೇವರಾದ ಕುಬೇರನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇದಲ್ಲದೆ, ಈ ದಿನ ಜನರು ವಿಶೇಷ ಭಕ್ಷ್ಯಗಳನ್ನು ತಯಾರಿಸಿ ದೇವರ ಆಶೀರ್ವಾದ ಪಡೆಯಲು ಅದನ್ನು ಭಕ್ತಿಯಿಂದ ಅರ್ಪಿಸುತ್ತಾರೆ. ಪೂಜೆಯ ಸಮಯದಲ್ಲಿ ದೇವರಿಗೆ ಆಹಾರವನ್ನು ಅರ್ಪಿಸುವುದು ತುಂಬಾ ಒಳ್ಳೆಯದು ಎಂದು ಶಾಸ್ತ್ರಗಳಲ್ಲಿಯೂ ಹೇಳಲಾಗಿದ. ಏಕೆಂದರೆ ನೈವೇದ್ಯವನ್ನು ಅರ್ಪಣೆ ಮಾಡದಿದ್ದಲ್ಲಿ ಆ ಪೂಜೆ ಅಪೂರ್ಣ ಎನಿಸಿಕೊಳ್ಳುತ್ತದೆ. ಆದ್ದರಿಂದ ಅಕ್ಷಯ ತೃತೀಯದ ದಿನ ಈ ವಿಶೇಷ ವಸ್ತುಗಳನ್ನು ದೇವರಿಗೆ ಅರ್ಪಿಸಿ ಆಶೀರ್ವಾದ ಪಡೆದುಕೊಳ್ಳಿ.

ಅಕ್ಷಯ ತೃತೀಯದಂದು ಲಕ್ಷ್ಮೀಯೊಂದಿಗೆ ವಿಷ್ಣುವನ್ನು ಪೂಜಿಸಿದರೆ, ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಬಿಕ್ಕಟ್ಟು ದೂರವಾಗುತ್ತದೆ. ಲಕ್ಷ್ಮೀ ದೇವಿಯು ಶ್ರೀಫಲವನ್ನು ಅಂದರೆ ತೆಂಗಿನಕಾಯಿಯನ್ನು ತುಂಬಾ ಪ್ರೀತಿಸುತ್ತಾಳೆ, ಆದ್ದರಿಂದ ಅಕ್ಷಯ ತೃತೀಯದಂದು ದೇವಿಯನ್ನು ಪೂಜಿಸುವ ಮೊದಲು, ತೆಂಗಿನಕಾಯಿಯನ್ನು ನೀರಿನಿಂದ ತುಂಬಿದ ಮಡಕೆಯಲ್ಲಿ ಇಟ್ಟು ಅವಳಿಗೆ ಅರ್ಪಿಸಿ. ಇದರಿಂದ ತಾಯಿಗೆ ತುಂಬಾ ಸಂತೋಷವಾಗುತ್ತದೆ ಜೊತೆಗೆ ಇದರಿಂದ ಮಾಡಿದ ಆಹಾರವೂ ಆಕೆಗೆ ಬಲು ಪ್ರೀತಿ. ಆದಷ್ಟು ತೆಂಗಿನಕಾಯಿ ಉಪಯೋಗಿಸಿದಂತಹ ಆಹಾರವನ್ನು ದೇವಿಗೆ ಅರ್ಪಿಸಿ.

ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಅರ್ಪಿಸಿ;

-ಈ ದಿನ ಪೂಜೆಯ ಸಮಯದಲ್ಲಿ, ಲಕ್ಷ್ಮೀ ದೇವಿಗೆ ಕಲ್ಲು ಸಕ್ಕರೆಗಳನ್ನು ಅಥವಾ ಬಾದುಷಾವನ್ನು ಅರ್ಪಿಸಿ. ಇದರಿಂದ ದೇವಿ ಸಂತೋಷ ಪಡುತ್ತಾಳೆ.

-ತಾವರೆ ಬೀಜವೂ ಕೂಡ ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾದದ್ದು, ಇದನ್ನು ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ಪೂಜೆಗೆ ಬಳಸಬಹುದು. ಅಕ್ಷಯ ತೃತೀಯದಂದು ಇದನ್ನು ದೇವಿಗೆ ಅರ್ಪಣೆ ಮಾಡಿದಲ್ಲಿ ಆಕೆ ತನ್ನ ಭಕ್ತರ ಬಯಕೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ. ಜೊತೆಗೆ ಇದರಿಂದ ತಯಾರಿಸಿದ ಪಾಯಸವನ್ನು ಕೂಡ ದೇವಿಗೆ ಅರ್ಪಿಸಬಹುದು.

-ಸಂಪತ್ತಿನ ದೇವತೆಯಾದ ಲಕ್ಷ್ಮೀಗೆ ವೀಳ್ಯದೆಲೆ ಎಂದರೆ ತುಂಬಾ ಪ್ರೀತಿ. ಕೆಲವೆಡೆ ಅಕ್ಷಯ ತೃತೀಯದಂದು ಪೂಜೆ ಮುಗಿದ ನಂತರ, ಲಕ್ಷ್ಮೀ ದೇವಿಗೆ ಪಾನ್ ಅರ್ಪಿಸಲಾಗುತ್ತದೆ. ಇದರಿಂದ ತಾಯಿಯ ಆಶೀರ್ವಾದ ಸಿಗುತ್ತದೆ ಮತ್ತು ಅವಳು ತನ್ನ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ; ಮನೆಯ ಬಾಗಿಲಿನ ಮೇಲೆ ದೇವರ ಫೋಟೋ ಇಟ್ಟಿದ್ದೀರಾ? ಈ ನಿಯಮ ಕಡ್ಡಾಯ ಪಾಲಿಸಿ

ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಅರ್ಪಿಸಿದರೆ , ಲಕ್ಷ್ಮಿ ದೇವಿಯು ಬೇಗನೆ ಸಂತೋಷಗೊಳ್ಳುತ್ತಾಳೆ ಜೊತೆಗೆ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ. ಇದಲ್ಲದೆ, ತಾಯಿ ಲಕ್ಷ್ಮೀಯೊಂದಿಗೆ ವಿಷ್ಣು ಮತ್ತು ಕುಬೇರನ ಆಶೀರ್ವಾದವು ಸಿಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾಕಾಲ ಇರುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:30 pm, Tue, 7 May 24

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್