ಬೆಂಗಳೂರು: ಧಾರ್ಮಿಕ ಹಬ್ಬಗಳು ಖಾಸಗಿ ಬಸ್ ಸಂಸ್ಥೆಗಳಿಗೆ ಹೆಚ್ಚು ಹಣ ಸುಲಿ ಮಾಡಲು ವರದಾನವಾಗಿವೆ. ಯಾವುದೇ ಹಬ್ಬ ಬಂತಂದ್ರೆ ಸಾಕು ಖಾಸಗಿ ಬಸ್‌ಗಳು ಟಿಕೆಟ್ ದರದಲ್ಲಿ(Private Bus Ticket Price) ಪೈಪೋಟಿಗಿಳಿಯುತ್ತವೆ. ಅದರಲ್ಲೂ ಹಬ್ಬದ ಹಿಂದೆ-ಮುಂದೆ ವೀಕೆಂಡ್ ಇದ್ರಂತೂ ಟಿಕೆಟ್ ದರ ನೋಡಿದ್ರೆ, ಒಂದು ಕ್ಷಣ ಮೈ ನಡುಗುತ್ತೆ. ಪ್ರತಿ ಬಾರಿಯಂತೆ ಈ ಬಾರಿ ದೀಪಾವಳಿ ಹಬ್ಬಕ್ಕೂ ಅದೇ ಕಥೆ. ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳು ದರ ಏರಿಕೆ ಶಾಕ್ ಕೊಟ್ಟಿವೆ. ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ತೆರಳುವ ಬಸ್ಗಳ ಟಿಕೆಟ್ ದರ ನೀರಿಕ್ಷೆ ಮೀರಿದೆ.
ಹೌದು… ಬೆಂಗಳೂರು ಟು ಹುಬ್ಬಳ್ಳಿ ಖಾಸಗಿ ಬಸ್ ದರ ಬರೋಬ್ಬರಿ 5,000 ರೂಪಾಯಿ ಇದೆ. ಇಷ್ಟೊಂದು ಹಣದಲ್ಲಿ ರಾಜನಂತೆ ವಿಮಾನದಲ್ಲಿ ಹೋಗಬಹುದು ಎನ್ನುವುದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ವಿಶೇಷ ರೈಲು ಸೇವೆ ಒದಗಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಇನ್‌ಫ್ರಾ ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಬಸ್ ದರಗಳು ವಿಮಾನಗಳಿಗೆ ಕಠಿಣ ಪೈಪೋಟಿ ನೀಡುತ್ತಿವೆ. ಇನ್ನೂ ದೀಪಾವಳಿಯ ವಿಶೇಷ ರೈಲುಗಳನ್ನು ಘೋಷಿಸಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಟ್ಯಾಗ್ ಮಾಡಲಾಗಿದೆ. ಅಲ್ಲದೇ ಬಸ್ ದರ ಮತ್ತು ವಿಮಾನ ದರಗಳ ಸ್ಕ್ರೀನ್ ಶಾಟ್ ಅನ್ನು ಸಹ ಶೇರ್ ಮಾಡಿದೆ.
Bus fares in between Bengaluru and Hubballi giving tough competition to flights?
And @SWRRLY is yet to notify special trains for Deepavali@sriramulubjp sir for your information!#Hubballi #Bengaluru #Deepavali #DeepavaliSpecial pic.twitter.com/YUnQrSJlQv
— Hubballi-Dharwad Infra (@Hubballi_Infra) October 19, 2022
ಇನ್ನು ಈ ಪೋಸ್ಟ್ಗೆ ಅನೇಕ ರಿಪ್ಲೇಗಳು ಬಂದಿದ್ದು, ಅತುಲ್ ಶರ್ಮಾ ಎಂಬುವವರು, ಕೆಎಸ್‌ಆರ್‌ಟಿಸಿ ಅಕ್ಟೋಬರ್ 21ರಂದು ಹುಬ್ಬಳ್ಳಿಗೆ 54 ಬಸ್ ಸಂಚಾರ ಮತ್ತು ಧಾರವಾಡಕ್ಕೆ 39 ಬಸ್ ಸೇವೆ ಒದಗಿಸಿದೆ. ಅವುಗಳಲ್ಲಿ ಸೀಟುಗಳು ಇನ್ನೂ ಲಭ್ಯ ಇವೆ. ಆದರೆ ಖಾಸಗಿ ಬಸ್ ಸೇವೆ ಪಡೆಯುವುದು ಕೊನೆಯ ಆಯ್ಕೆ ಆಗಿರಲಿ. ಹೌದು ದುರದೃಷ್ಟವಶಾತ್ ರೈಲ್ವೆ ಇನ್ನೂ ವಿಶೇಷ ರೈಲು ಸೇವೆಗಳನ್ನು ಘೋಷಿಸಿಲ್ಲ ಎಂದಿದ್ದಾರೆ. ಇನ್ನೊಬ್ಬರು ಕಾರ್ ಪೂಲ್ ಮಾಡಿಕೊಂಡು ಹೋಗುವುದು ಉತ್ತಮ ಆಯ್ಕೆ ಎಂದು ಸಲಹೆ ನಿಡಿದ್ದಾರೆ.
ಸರ್ಕಾರಿ ಬಸ್ ಏರಿ, ಖಾಸಗಿ ಬಸ್ಗೆ ಬುದ್ಧ ಕಲಿಸಿ
ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ನಿಮಿತ್ತ ಬೆಂಗಳೂರಿಂದ ರಾಜ್ಯದ ವಿವಿದೆಡೆಗೆ 1,500 ವಿಶೇಷ ಬಸ್ ಸೇವೆ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭದ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಸಲುವಾಗಿ ಈ ಕ್ರಮ ತೆಗೆದುಕೊಂಡಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆಬಿಎಸ್) ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹೆಚ್.ಡಿ. , ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಗಳಿಗೆ ವಿಶೇಷ ಬಸ್‌ಗಳು ಹೋಗಲಿವೆ. ಆದ್ದರಿಂದ ಪ್ರಯಾಣಿಕರು ಖಾಸಗಿ ಬಸ್ ಬಿಟ್ಟು ಸರ್ಕಾರ ಬಿಟ್ಟಿರುವ ವಿಶೇಷ ಬಸ್ಗಳನ್ನು ಹತ್ತುವ ಮೂಲಕ ವಸೂಲಿಗಿಳಿದ ಖಾಸಗಿ ಬಸ್ಗಳಿಗೆ ಬುದ್ಧಿ ಕಲಿಸಿದಂತಾಗುತ್ತದೆ.
Published On - 8:47 pm, Thu, 20 October 22