Deepavali 2022: ಅಮೆರಿಕದಲ್ಲೂ ದೀಪಾವಳಿಯ ಸಂಭ್ರಮ: ಶ್ವೇತಭವನದಲ್ಲಿ ದೀಪ ಬೆಳಗಿದ ಅಧ್ಯಕ್ಷ ಜೋ ಬೈಡನ್
ಅಮೆರಿಕ(America)ದಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಶ್ವೇತಭವನವೂ ಕೂಡ ದೀಪಗಳಿಂದ ಕಂಗೊಳಿಸಿದೆ
ಅಮೆರಿಕ(America)ದಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಶ್ವೇತಭವನವೂ ಕೂಡ ದೀಪಗಳಿಂದ ಕಂಗೊಳಿಸಿದೆ. ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ದೀಪಾವಳಿ ಆಚರಣೆ ಹಮ್ಮಿಕೊಂಡಿದ್ದು, 200 ಮಂದಿ ಭಾರತೀಯರನ್ನು ಆಹ್ವಾನಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶ್ವೇತಭವನದಲ್ಲಿ ದೀಪ ಬೆಳಕಿಸಿದ ಜೋ ಬೈಡನ್ ಅವರು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ನಾವು ಅಧಿಕೃತವಾಗಿ ಶ್ವೇತಭವನದಲ್ಲಿ ದೀಪಾವಳಿ ಆಯೋಜಿಸಿದ್ದೇವೆ. ಅಮೆರಿಕದ ಇತಿಹಾಸದಲ್ಲಿ ಇದು ಅವಿಸ್ಮರಣೀಯ ಕ್ಷಣ ಹೇಳಿದ್ದಾರೆ. ಅಮೆರಿಕನ್ ಇತಿಹಾಸವು ಅಮೆರಿಕನ್ ಆದರ್ಶದ ನಡುವೆ ನಿರಂತರ ಹೋರಾಟವಾಗಿದೆ ಎಂದರು.
ನಾವೆಲ್ಲರೂ ಸಮಾನರು ಮತ್ತು ವಾಸ್ತವತೆಯನ್ನು ಸೃಷ್ಟಿಸಿದ್ದೇವೆ. ನಾವು ಅದನ್ನು ಎಂದಿಗೂ ಮೀರಿಲ್ಲ. ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಗುರುತಿಸುವ ಮೂಲಕ ದೀಪಾವಳಿಯು ನಮ್ಮಲ್ಲಿ ಪ್ರತಿಯೊಬ್ಬರಿಗೂ ಇಲ್ಲಿ ಅಮೆರಿಕಾದಲ್ಲಿ ಅಥವಾ ಪ್ರಪಂಚದಾದ್ಯಂತ ಬೆಳಕನ್ನು ತರುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ನೆನಪಿಸುತ್ತದೆ ಎಂದು ಬೈಡನ್ ಹೇಳಿದ್ದಾರೆ.
ಇದೇ ವೇಳೆ ಅಮೆರಿಕದಾದ್ಯಂತ ದಕ್ಷಿಣ ಏಷ್ಯಾದ ಸಮುದಾಯವು ಪ್ರದರ್ಶಿಸಿದ ಆಶಾವಾದ, ಧೈರ್ಯ ಮತ್ತು ಸಹಾನುಭೂತಿಗೆ ಬೈಡನ್ ಧನ್ಯವಾದ ಅರ್ಪಿಸಿದರು. ಬೈಡನ್ ಆಡಳಿತದ ಹಲವಾರು ಭಾರತೀಯ ಅಮೆರಿಕನ್ನರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ದೀಪಾವಳಿಯು ಒಂದು ಶುಭ ಹಬ್ಬವಾಗಿದ್ದು, ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಹಾಗೆಯೇ ಒಳ್ಳೆಯತನದ ವಿಜವನ್ನು ಸಂಕೇತಿಸುತ್ತದೆ.
14 ವರ್ಷಗಳ ವನವಾಸದ ನಂತರ ಭಗವಂತ ರಾಮ ಮನೆಗೆ ಬಂದ ಮತ್ತು ರಾವಣನ ಮೇಲೆ ವಿಜಯ ಸಾಧಿಸಿದ ನೆನಪಿಗಾಗಿ ಹಿಂದೂಗಳು ಈ ಹಬ್ಬವನ್ನು ಆಚರಿಸುತ್ತಾರೆ.
ನೃತ್ಯಗಳು,ಪ್ರಾರ್ಥನೆಗಳು, ಪಟಾಕಿಗಳು ಮತ್ತು ಸಿಹಿತಿಂಡಿಗಳೊಂದಿಗೆ, ದೀಪಾವಳಿಯನ್ನು ಆಚರಿಸುವ ಪ್ರತಿಯೊಬ್ಬರೂ ಹಬ್ಬ ಆಚರಿಸಲು ಮತ್ತು ಸಂಪರ್ಕಿಸಲು, ಸಮುದಾಯದ ಹೆಮ್ಮೆಯನ್ನು ಅನುಭವಿಸಲು ಇದೊಂದು ಉತ್ತಮ ಅವಕಾಶ ಎಂದು ಬೈಡನ್ ಹೇಳಿದರು.
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಶ್ವೇತಭವನದಿಂದ ಶುಭ ಕೋರಿದರು.
ಅಮೆರಿಕದಲ್ಲೂ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಶ್ವೇತಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಬಳಿಕ ಬೈಡನ್, ಜಿಲ್ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತೀಯ ಅಮೆರಿಕನ್ನರೊಂದಿಗೆ ಸಂವಾದ ನಡೆಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ