Male Fertility: ಈ ಆಹಾರಗಳು ಪುರುಷರ ವೀರ್ಯಾಣುವಿನ ಸಂಖ್ಯೆ ಕಡಿಮೆಗೊಳಿಸುತ್ತವೆ!

ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆಯ ಕೊರತೆ ಲೈಂಗಿಕಾಸಕ್ತಿಯನ್ನು ಕಡಿಮೆಗೊಳಿಸಬಹುದು. ಇದಲ್ಲದೇ ಬಂಜೆತನಕ್ಕೆ ಕಾರಣವಾಗಬಹುದು. ಆದ್ದರಿಂದ ವೀರ್ಯಾಣುವಿನ ಸಂಖ್ಯೆ ಹೆಚ್ಚಿಸಬೇಕಾದರೆ ಈ ಆಹಾರಗಳಿಂದ ದೂರವಿರಿ.

Male Fertility: ಈ ಆಹಾರಗಳು ಪುರುಷರ ವೀರ್ಯಾಣುವಿನ ಸಂಖ್ಯೆ  ಕಡಿಮೆಗೊಳಿಸುತ್ತವೆ!
Male Fertility

Updated on: Sep 28, 2023 | 6:29 PM

ಸಂಶೋಧನೆಯೊಂದರ ಪ್ರಕಾರ ಪುರುಷರ ವೀರ್ಯ ಎಣಿಕೆ(Sperm count)ಗಳು ಕಳೆದ 40 ವರ್ಷಗಳಲ್ಲಿ ಜಾಗತಿಕವಾಗಿ ಶೇಕಡಾ 50 ರಿಂದ 60 ರಷ್ಟು ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿದೆ. ಇದಲ್ಲದೇ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆಯ ಕೊರತೆ ಲೈಂಗಿಕಾಸಕ್ತಿಯನ್ನು ಕಡಿಮೆಗೊಳಿಸಬಹುದು. ಇದು ಬಂಜೆತನಕ್ಕೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಶೈಲಿಯ ಜೊತೆಗೆ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನಹರಿಸುವುದು ಕೂಡ ಮುಖ್ಯವಾಗಿರುತ್ತದೆ. ಈ ಲೇಖನದಲ್ಲಿ, ಆರೋಗ್ಯಕರ ವೀರ್ಯ ಎಣಿಕೆಯನ್ನು ಕಾಪಾಡಿಕೊಳ್ಳಲು ಪುರುಷರು ತಪ್ಪಿಸಬೇಕಾದ ಕೆಲವು ಆಹಾರಗಳ ಕುರಿತು ಮಾಹಿತಿ ನೀಡಲಾಗಿದೆ.

ಕಡಿಮೆ ವೀರ್ಯಾಣು ಸಂಖ್ಯೆ ಹೊಂದಿರುವ ಪುರುಷರು ಈ ಆಹಾರ ಸೇವಿಸಬಾರದು:

1. ಸೋಯಾ ಉತ್ಪನ್ನಗಳು:

ಸೋಯಾದಲ್ಲಿರುವ ಈಸ್ಟ್ರೊಜೆನಿಕ್ ಐಸೊಫ್ಲಾವೊನ್‌ ಅಂಶ ಪುರುಷರ ವೀರ್ಯದ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟಗಳು ಇದು ಪುರುಷ ಫಲವತ್ತತೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಸೋಯಾ ಉತ್ಪನ್ನಗಳಿಂದ ದೂರವಿರಿ.

2. ಸೋಡಾಗಳು:

ಕಾರ್ಬೊನೇಟೆಡ್ ಪಾನೀಯಗಳು, ಕೋಲಾಗಳು ಪುರುಷ ಫಲವತ್ತತೆಯ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ. ಪ್ರತಿದಿನ ಸೇವಿಸುವ ಒಂದು ಕ್ವಾರ್ಟರ್ ಫಿಜ್ಜಿ ಪಾನೀಯಗಳು ವೀರ್ಯದ ಸಂಖ್ಯೆಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡುತ್ತದೆ. ಹೆಚ್ಚಿನ ಸಕ್ಕರೆ ಅಂಶವುಳ್ಳ ಪಾನೀಯ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ವೀರ್ಯದ ಡಿಎನ್ಎಗೆ ಇನ್ನಷ್ಟು ಹಾನಿ ಮಾಡುತ್ತದೆ.

3. ಸಿದ್ಧ ಆಹಾರ:

ಕ್ಯಾನ್‌ಗಳು ಮತ್ತು ಟಿನ್‌ಗಳಲ್ಲಿನ ಲಭ್ಯವಿರುವ ಆಹಾರಗಳಲ್ಲಿ ಬಿಸ್ಫೆನಾಲ್ (BPA) ಎಂಬ ರಾಸಾಯನಿಕವನ್ನು ಹಾಕಲಾಗಿರುತ್ತದೆ. ಬಿಸ್ಫೆನಾಲ್ ಮಾನವನ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟದ ಮೇಲೆ ಪರಿಣಾಮ ಬೀರಿ ಇದು ಕಡಿಮೆ ವೀರ್ಯಾಣು ಸಂಖ್ಯೆಗೆ ಕಾರಣವಾಗಬಹುದು. ಆದ್ದರಿಂದ ಪುರುಷರ ಆರೋಗ್ಯಕರ ಫಲವತ್ತತೆಗಾಗಿ ಸಿದ್ದ ಹಾಗೂ ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.

ಇದನ್ನೂ ಓದಿ: ಸುಟ್ಟ ಗಾಯದ ನೋವಿಗೆ ಮನೆಯಲ್ಲೇ ಇದೆ ಪರಿಹಾರ!

4. ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು:

ಡೈರಿ ಉತ್ಪನ್ನಗಳನ್ನು ಸಾಮಾನ್ಯವಾಗಿ ಹೆಚ್ಚು ಆರೋಗ್ಯಕರವೆಂದು ಭಾವಿಸಲಾಗಿದೆ, ಆದರೆ ಹೊಸ ಸಂಶೋಧನೆಯು ಚೀಸ್ ಮತ್ತು ಪೂರ್ಣ-ಕೆನೆ ಹಾಲಿನಂತಹ ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು ಎಂದು ಬಹಿರಂಗಪಡಿಸಿದೆ.

5. ಸಂಸ್ಕರಿಸಿದ ಮಾಂಸಗಳು:

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಸಂಸ್ಕರಿಸಿದ ಮಾಂಸವನ್ನು ವಿವಿಧ ಕಾಯಿಲೆಗಳಿಗೆ ಮೂಲ ಕಾರಣ ಎಂದು ವರದಿ ಮಾಡಿದೆ. ಸಂಸ್ಕರಿಸಿದ ಮಾಂಸಗಳನ್ನು ಹಾಟ್ ಡಾಗ್‌ಗಳಂತಹ ಆಹಾರಗಳಲ್ಲಿ ಸೇರಿಸಲಾಗುತ್ತದೆ. ಜೊತೆಗೆ ಸಂಸ್ಕರಿತ ಕೆಂಪು ಮಾಂಸಗಳ ಸೇವನೆ ವೀರ್ಯದ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಲೈಂಗಿಕಾಸಕ್ತಿಯನ್ನು ದುರ್ಬಲಗೊಳಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us