ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಐದು ವರ್ಷದ ಬಾಲಕಿಯ ಮೆದುಳಿನ ಗೆಡ್ಡೆ ತೆಗೆಯಲು ಅವೇಕ್ ಕ್ರ್ಯಾನಿಯೋಟೊಮಿ ಎಂಬ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈ ಕಾರ್ಯ ವಿಧಾನಕ್ಕೆ ಒಳಗಾದ ವಿಶ್ವದ ಅತ್ಯಂತ ಕಿರಿಯ ರೋಗಿ ಎಂಬ ಹೆಗ್ಗಳಿಕೆಗೆ ಆಕೆ ಪಾತ್ರಳಾಗಿದ್ದಾಳೆ. ಅವೇಕ್ ಕ್ರ್ಯಾನಿಯೋಟೊಮಿ ಎಂಬುದು ನರ ಶಸ್ತ್ರಚಿಕಿತ್ಸೆಯಲ್ಲಿಯೇ ಅತ್ಯಾಧುನಿಕ ತಂತ್ರವಾಗಿದ್ದು, ಈ ವಿಧಾನವು ಮೆದುಳಿನ ಹಾನಿಯನ್ನು ತಪ್ಪಿಸಲು ರೋಗಿಯು ಎಚ್ಚರವಾಗಿರುವಾಗ ಮೆದುಳಿನ ಗೆಡ್ಡೆಯನ್ನು ತೆಗೆಯಲು ಶಸ್ತ್ರಚಿಕಿತ್ಸಕರಿಗೆ ಅನುವು ಮಾಡಿಕೊಡುತ್ತದೆ. ಇಂತಹ ಚಿಕಿತ್ಸೆಯನ್ನು ಮೊದಲ ಬಾರಿಗೆ ಅತ್ಯಂತ ಚಿಕ್ಕ ವಯಸ್ಸಿನ ಹುಡುಗಿಯ ಮೇಲೆ ನಡೆಸಲಾಗಿದ್ದು ಅದರಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರು ಯಶಸ್ವಿಯೂ ಆಗಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯ ಈ ಬಗ್ಗೆ ಹೇಳಿಕೆ ನೀಡಿದ್ದು “ಅವಳು ಚಿಕಿತ್ಸೆ ಮುಗಿಯುವವರೆಗೂ ಚೆನ್ನಾಗಿ ಸಹಕರಿಸಿದಳು. ಚಿಕಿತ್ಸೆಯ ಕೊನೆಯಲ್ಲಿ ಮತ್ತು ಶಸ್ತ್ರಚಿಕಿತ್ಸೆಯ ನಂತರವೂ ಚೆನ್ನಾಗಿದ್ದಳು. ಉತ್ತಮ ಗುಣಮಟ್ಟದ ಎಂ ಆರ್ ಐ ಮೆದುಳಿನ ಅಧ್ಯಯನಗಳನ್ನು ಒದಗಿಸಲು ನ್ಯೂರೋ ಅನಸ್ತೇಷಿಯಾ ಮತ್ತು ನ್ಯೂರೋರೇಡಿಯಾಲಜಿ ತಂಡಗಳಿಂದ ಅತ್ಯುತ್ತಮ ಬೆಂಬಲ ಸಿಕ್ಕಿದೆ ಎಂದು ಹೇಳಿದ್ದಾರೆ.
ಅವೇಕ್ ಕ್ರ್ಯಾನಿಯೋಟೊಮಿ ಎಂಬುದು ನರ ಶಸ್ತ್ರಚಿಕಿತ್ಸಾ ಪ್ರಕಾರವಾಗಿದ್ದು, ಇದು ಅರಿವಳಿಕೆ ಬಲದೊಂದಿಗೆ ನಡೆಸುವ ಅತ್ಯಾಧುನಿಕ ತಂತ್ರವಾಗಿದೆ. ಇಲ್ಲಿ ರೋಗಿಯು ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಎಚ್ಚರವಾಗಿರುತ್ತಾನೆ. ಮೆದುಳಿನ ಹಾನಿಯನ್ನು ತಪ್ಪಿಸಲು ರೋಗಿಯು ಎಚ್ಚರವಾಗಿರುವಾಗ ಮೆದುಳಿನ ಗೆಡ್ಡೆಯನ್ನು ತೆಗೆಯಲು ಶಸ್ತ್ರಚಿಕಿತ್ಸಕರಿಗೆ ಅನುವು ಮಾಡಿ ಕೊಡುತ್ತದೆ. ಈ ಪ್ರಕ್ರಿಯೆಯು ರೋಗಿಯ ಮಾತಿನ ಅಡಚಣೆಗಳು ಅಥವಾ ಕೈಕಾಲುಗಳಲ್ಲಿನ ದೌರ್ಬಲ್ಯದಂತಹ ಪ್ರಮುಖ ತೊಡಕುಗಳನ್ನು ತಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಒಂದಿಂಚು ಬೋಲ್ಟ್ ನುಂಗಿದ ಬಾಲಕ, ಶಸ್ತ್ರಚಿಕಿತ್ಸೆ ಮಾಡದೆ ಅದನ್ನು ಹೊರಗೆ ತೆಗೆದಿದ್ದು ಹೇಗೆ? ವಿಡಿಯೋ ನೋಡಿ!
ಅವೇಕ್ ಕ್ರ್ಯಾನಿಯೋಟೊಮಿ ಪ್ರಕ್ರಿಯೆಗೆ ಸಹಜವಾಗಿ, ರೋಗಿಯ ತಿಳುವಳಿಕೆ ಮತ್ತು ಸಹಕಾರದ ಅಗತ್ಯವಿರುತ್ತದೆ. ಅವನ ಅಥವಾ ಅವಳ ಒಪ್ಪಿಗೆಯನ್ನು ತೆಗೆದುಕೊಂಡ ನಂತರವೇ ರೋಗಿಗೆ ಕಾರ್ಯವಿಧಾನದ ಬಗ್ಗೆ ಕೂಲಂಕಷವಾಗಿ ವಿವರಿಸಲಾಗುತ್ತದೆ ಮತ್ತು ಅದರ ಪರಿಚಯ ಮಾಡಿಸಲು ಶಸ್ತ್ರಚಿಕಿತ್ಸೆಯ ಹಿಂದಿನ ದಿನದಂದು ಆಪರೇಟಿಂಗ್ ರೂಮ್ನಲ್ಲಿ ಈ ಬಗ್ಗೆ ತಿಳಿಸಲಾಗುವುದು. ಯಾವುದೇ ರೀತಿಯ ನೋವು ಅಥವಾ ಅಸ್ವಸ್ಥತೆಯನ್ನು ತಪ್ಪಿಸಲು ಸ್ಥಳೀಯ ಅರಿವಳಿಕೆ ಮತ್ತು ಸೌಮ್ಯವಾದ ನಿದ್ರಾಜನಕವನ್ನು ನೀಡಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ