ಸೌತೆಕಾಯಿ ಬೇಸಿಗೆ ಕಾಲಕ್ಕೆ ಅತ್ಯುತ್ತಮವಾದ ತರಕಾರಿ. ಸೌತೆಕಾಯಿಯಲ್ಲಿ ಎಳೆ ಸೌತೆ ಮತ್ತು ಮಂಗಳೂರು ಸೌತೆಕಾಯಿ ಎಂಬ 2 ವಿಧಗಳಿವೆ. ಎಳೆ ಸೌತೆಕಾಯಿಯನ್ನು ಸಲಾಡ್, ಕೋಸಂಬರಿ, ಸ್ಮೂಥಿಯಾಗಿ ಸೇವಿಸಬಹುದು. ಮಂಗಳೂರು ಸೌತೆಕಾಯಿಯನ್ನು ಸಾಂಬಾರ್, ಪಲ್ಯದ ರೂಪದಲ್ಲಿ ಸೇವಿಸಬಹುದು. ಈ ಎರಡೂ ಸೌತೆಕಾಯಿಗಳೂ ಆರೋಗ್ಯಕ್ಕೆ ಒಳ್ಳೆಯದು. ಎಳೆ ಸೌತೆಕಾಯಿ ಸೌಂದರ್ಯಕ್ಕೂ ಉತ್ತಮವಾದ ಆಯ್ಕೆ. ಸೌತೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಆಗುವ 8 ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ…
ದೇಹವನ್ನು ಹೈಡ್ರೀಕರಣಗೊಳಿಸುತ್ತದೆ:
ಉತ್ಕರ್ಷಣ ನಿರೋಧಕವಾದ ಸೌತೆಕಾಯಿ ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಸೌತೆಕಾಯಿ ಶೇ. 96ರಷ್ಟು ನೀರಿನಂಶವನ್ನು ಒಳಗೊಂಡಿರುತ್ತದೆ. ಸೌತೆಕಾಯಿಗಳನ್ನು ಸೇವಿಸುವುದರಿಂದ ದೇಹಕ್ಕೆ ನೀರಿನ ಅಂಶ ಹೆಚ್ಚು ಸಿಗುತ್ತದೆ. ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ. ಹಾಗೇ, ನೀರಿಗೆ ಸೌತೆಕಾಯಿ ಹೋಳನ್ನು ಹಾಕಿಕೊಂಡು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶ ಹೊರಹೋಗುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಸೌತೆಕಾಯಿಗಳು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಡಯೆಟರಿ ಫೈಬರ್‌ನ ಉತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ವಯಸ್ಸಾದವರು ಸೌತೆಕಾಯಿಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಸಂಶೋಧನೆ ಸಾಬೀತುಪಡಿಸಿದೆ.
ಇದನ್ನೂ ಓದಿ: ಆರೋಗ್ಯ, ಸೌಂದರ್ಯವೆರಡಕ್ಕೂ ಬಟರ್ ಫ್ರೂಟ್ನಲ್ಲಿದೆ ಪರಿಹಾರ
ಜೀರ್ಣಕ್ರಿಯೆಗೆ ಒಳ್ಳೆಯದು:
ಸೌತೆಕಾಯಿಯಲ್ಲಿರುವ ಕರಗುವ ಫೈಬರ್ ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವು ನಿಮ್ಮ ಮಲವನ್ನು ಮೃದುಗೊಳಿಸುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ:
ಸೌತೆಕಾಯಿಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮಧುಮೇಹ ಮೆಲ್ಲಿಟಸ್ ನಿರ್ವಹಣೆ ಮತ್ತು ತಡೆಗಟ್ಟುವಲ್ಲಿ ಇದು ಸಹಾಯಕವಾಗಿದೆ.
ತೂಕ ಇಳಿಸಲು ಸಹಕಾರಿ:
ಸೌತೆಕಾಯಿಗಳು ಶೇ. 96ರಷ್ಟು ನೀರನ್ನು ಹೊಂದಿರುತ್ತವೆ ಹಾಗೂ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. 100 ಗ್ರಾಂ ಸೌತೆಕಾಯಿಯಲ್ಲಿ ಕೇವಲ 15.5 ಕ್ಯಾಲೋರಿಗಳಿರುತ್ತದೆ. ಸೌತೆಕಾಯಿಯಲ್ಲಿನ ಹೆಚ್ಚಿನ ನೀರು ಮತ್ತು ಕಡಿಮೆ ಕ್ಯಾಲೋರಿ ಅಂಶವು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Skin Care: ನಿಮ್ಮ ಚರ್ಮದ ಸೌಂದರ್ಯಕ್ಕೆ ಅತ್ಯುತ್ತಮವಾದ 12 ಆಹಾರಗಳಿವು
ಉತ್ತಮ ಚರ್ಮಕ್ಕೆ ಸಹಕಾರಿ:
ಸೌತೆಕಾಯಿಗಳು ಉತ್ತಮ ಸೌಂದರ್ಯ ವರ್ಧಕಗಳಾಗಿವೆ. ಸೌತೆಕಾಯಿಯ ರಸವನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಚರ್ಮವನ್ನು ಮೃದುಗೊಳಿಸಿ, ಹೊಳಪು ನೀಡುತ್ತದೆ. ಟ್ಯಾನ್ ಆದ ಚರ್ಮಕ್ಕೂ ಸೌತೆಕಾಯಿ ಸಹಕಾರಿ.
ಕಣ್ಣಿನ ಆರೋಗ್ಯಕ್ಕೆ ಉಪಯುಕ್ತ:
ಸೌತೆಕಾಯಿಯ ತುಂಡುಗಳನ್ನು ಸುಮಾರು 10 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಡುವುದರಿಂದ ನಿಮ್ಮ ಕಣ್ಣುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಕಣ್ಣಿನ ಸುತ್ತಲಿನ ಊತ ಕಡಿಮೆಯಾಗುತ್ತದೆ. ಡಾರ್ಕ್ ಸರ್ಕಲ್ ಕೂಡ ಕಡಿಮೆಯಾಗುತ್ತದೆ.
ಕ್ಯಾನ್ಸರ್ನ ಅಪಾಯವನ್ನು ಕಡಿಮೆ ಮಾಡುತ್ತದೆ:
ಸೌತೆಕಾಯಿಯಲ್ಲಿರುವ ಫೈಬರ್ ಕೊಲೊರೆಕ್ಟಲ್ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಅಲ್ಲದೆ, ಸೌತೆಕಾಯಿಯಲ್ಲಿರುವ ಕುಕುರ್ಬಿಟಾಸಿನ್ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ