ಬೆಕ್ಕು ಕಚ್ಚಿದರೆ ಎಂದಿಗೂ ನಿರ್ಲಕ್ಷ್ಯಿಸದಿರಿ, ಅಪಾಯಕಾರಿ ಸೋಂಕಿಗೆ ಕಾರಣವಾಗಬಹುದು

|

Updated on: Aug 09, 2023 | 6:20 PM

ಸಾಮಾನ್ಯವಾಗಿ ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚುತ್ತಾ ಹಾಗೂ ಪರಚುತ್ತಾ ಇರುತ್ತದೆ. ಆದರೆ ಇದು ಸಾಮಾನ್ಯ ಎಂದು ನಿರ್ಲಕ್ಷ್ಯಿಸದಿರಿ. ಇದು ನಿಮ್ಮ ಜೀವದ ಮೇಲೆ ಕಂಟವಾಗಿ ಪರಿಣಮಿಸುವುದರಿಂದ ಎಚ್ಚರದಿಂದಿರುವುದು ಅಗತ್ಯ ಎಂದು  ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. 

ಬೆಕ್ಕು ಕಚ್ಚಿದರೆ ಎಂದಿಗೂ ನಿರ್ಲಕ್ಷ್ಯಿಸದಿರಿ, ಅಪಾಯಕಾರಿ ಸೋಂಕಿಗೆ ಕಾರಣವಾಗಬಹುದು
Cat Bite Infection
Image Credit source: iStock
Follow us on

ಸಾಮಾನ್ಯವಾಗಿ ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚುತ್ತಾ ಹಾಗೂ ಪರಚುತ್ತಾ ಇರುತ್ತದೆ. ಆದರೆ ಇದು ಸಾಮಾನ್ಯ ಎಂದು ನಿರ್ಲಕ್ಷ್ಯಿಸದಿರಿ. ಬೆಕ್ಕು ನೀವು ಯೋಚಿಸುವುದಕ್ಕಿಂತ ಹೆಚ್ಚು ಅಪಾಯಕಾರಿ. ಇದಕ್ಕೊಂದು ಉತ್ತಮ ನಿದರ್ಶನಬವೆಂಬಂತೆ ಇಂಗ್ಲೆಂಡ್ ಒಬ್ಬ ವ್ಯಕ್ತಿಯನ್ನು ಬೆಕ್ಕೊಂದು ಕಚ್ಚಿದ್ದು, ಕೆಲವೇ ದಿನಗಳಲ್ಲಿ ಆತನಿಗೆ ಅಪಾಯಕಾರಿ ಸೋಂಕು ತಗುಲಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ವೈದ್ಯರು ಆತನ ಗಾಯದ ಮಾದರಿಗಳಿಂದ ಸೂಕ್ಷ್ಮಜೀವಿಗಳನ್ನು ಪರೀಕ್ಷಿಸಿ ಸ್ಟ್ರೆಪ್ಟೋಕೊಕಸ್ ತರಹದ ಬ್ಯಾಕ್ಟೀರಿಯಾ ಕಂಡು ಆಘಾತಕ್ಕೊಳಗಾಗಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ. ವ್ಯಕ್ತಿಯ ಕೈ ತುಂಬಾ ಭಯಂಕರವಾಗಿ ಊದಿಕೊಂಡಿತ್ತು. ಆದರೆ, ಮರುದಿನ ಆ ವ್ಯಕ್ತಿ ತನ್ನ ಎಡಗೈಯಲ್ಲಿನ ನಸುಗೆಂಪು ಮತ್ತು ಮಧ್ಯದ ಬೆರಳುಗಳು ಊದಿಕೊಂಡು ತೀವ್ರ ನೋವಿನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ವೈದ್ಯರು ಅವರ ಗಾಯಗಳ ಸುತ್ತಲಿನ ಹಾನಿಗೊಳಗಾದ ಅಂಗಾಂಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ್ದಾರೆ. ವೈದ್ಯರು ಗಾಯದ ಮಾದರಿಗಳಿಂದ ಸೂಕ್ಷ್ಮಜೀವಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ ಗುರುತಿಸಲಾಗದ ಸ್ಟ್ರೆಪ್ಟೋಕೊಕಸ್ ತರಹದ ಬ್ಯಾಕ್ಟೀರಿಯಾ ಕಂಡು ಆಘಾತಕ್ಕೊಳಗಾದರು. ತಜ್ಞರ ಪ್ರಕಾರ, ಟ್ರೆಪ್ಟೋಕೊಕಸ್ ಮೆನಿಂಜೈಟಿಸ್, ಸ್ಟ್ರೆಪ್ ಥ್ರೋಟ್, ಬ್ಯಾಕ್ಟೀರಿಯಾದ ನ್ಯುಮೋನಿಯಾ ಮತ್ತು ಗುಲಾಬಿ ಕಣ್ಣು ಇತರ ಅನೇಕ ಕಾಯಿಲೆಗಳಿಗೆ ಸಂಬಂಧಿಸಿದೆ.

ಇದನ್ನೂ ಓದಿ: ಎಳ್ಳು ಸೇವನೆ ಎಂಬ ಮನೆಮದ್ದು: ಪ್ರತಿದಿನ ಒಂದು ಚಮಚ ಎಳ್ಳು ಸೇವಿಸಿದರೆ ನಿಮ್ಮ ಆರೋಗ್ಯ ಹೀಗೆ ಕಾಪಾಡಿಕೊಳ್ಳಬಹುದು

ಆದ್ದರಿಂದ ನಿಮ್ಮ ಮನೆಯಲ್ಲಿ ಸಾಕಿದ ಅಥವಾ ಬೀದಿಯಲ್ಲಿನ ಬೆಕ್ಕು ಕಚ್ಚಿದರೆ ಎಂದಿಗೂ ನಿರ್ಲಕ್ಷ್ಯಿಸದಿರಿ. ಇದು ನಿಮ್ಮ ಜೀವದ ಮೇಲೆ ಕಂಟವಾಗಿ ಪರಿಣಮಿಸುವುದರಿಂದ ಎಚ್ಚರದಿಂದಿರುವುದು ಅಗತ್ಯ ಎಂದು  ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: