
ಪನೀರ್, ವಿಶೇಷವಾಗಿ ಸಸ್ಯಾಹಾರಿ ಭಾರತೀಯ ಮನೆಯಲ್ಲೊಂದು ಪ್ರಮುಖ ಪ್ರೋಟೀನ್ ಆಧಾರಿತ ಆಹಾರ. ಇದರ ರುಚಿ, ಪೌಷ್ಟಿಕತೆ ಹಾಗೂ ಬಗೆಬಗೆಯ ಭಕ್ಷ್ಯಗಳಿಗೆ ಇದಕ್ಕೆ ಅಪಾರ ಬೇಡಿಕೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬೇಡಿಕೆಯ ಗಂಭೀರ ದುರಂತವೊಂದು ಕಂಡುಬರುತ್ತಿದೆ – ಅಂದರೆ ಪನೀರಿನ ಅತಿರೇಕದ ಕಲಬೆರಕೆ. ಲಾಭದಾಸೆಗಾಗಿ ಕೆಲ ತಯಾರಕರು ಹಾಗೂ ಪೂರೈಕೆದಾರರು ಪನೀರ್‌ನಲ್ಲಿ ಪ್ರೋಟೀನ್ ಅಂಶ ಕಡಿಮೆ ಮಾಡುವ ಮೂಲಕ ಕೃತಕ ದ್ರವ್ಯಗಳನ್ನು ಬೆರೆಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದೆ. ಉದಾಹರಣೆಗೆ, ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಪರಿಶೀಲನೆಯಲ್ಲಿ 450 ಕೆ.ಜಿ.ಕ್ಕೂ ಹೆಚ್ಚು ನಕಲಿ ಪನೀರ್ ವಶಪಡಿಸಿಕೊಳ್ಳಲಾಯಿತು.
ಪನೀರ್‌ನಲ್ಲಿ ಮೈದಾ ಅಥವಾ ಆರಾರೂಟ್ ಸೇರಿಸಿ ತೂಕ ಹೆಚ್ಚಿಸಲಾಗುತ್ತದೆ. ಇದು ಪೌಷ್ಟಿಕಾಂಶವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯನ್ನೂ ಉಂಟುಮಾಡಬಹುದು.
ಕೆಲವು ಮೋಸಗಾರರು ಯೂರಿಯಾ ಅಥವಾ ಡಿಟರ್ಜೆಂಟ್ ಬೆರೆಸಿದ ಹಾಲಿನಿಂದ ಪನೀರ್ ತಯಾರಿಸುತ್ತಾರೆ. ಇದರ ಸೇವನೆಯು ವಾಂತಿ, ಹೊಟ್ಟೆನೋವು, ಹಾಗೂ ಅಂಗಾಂಗ ಹಾನಿಗೂ ಕಾರಣವಾಗಬಹುದು.
shelf life ಹೆಚ್ಚಿಸಲು ಬಳಸುವ ಫಾರ್ಮಾಲಿನ್‌ನಂತಹ ರಾಸಾಯನಿಕಗಳು ಕ್ಯಾನ್ಸರ್, ಲಿವರ್ ಹಾನಿ, ತೀವ್ರ ಅಲರ್ಜಿಗಳಿಗೆ ಕಾರಣವಾಗಬಹುದು.
ತಾಜಾ ಹಾಲಿನ ಬದಲಾಗಿ ಪುಡಿ ಅಥವಾ condensed milk ಬಳಸಿ ತಯಾರಿಸಿದ ಪನೀರ್‌ನಲ್ಲಿ ಸ್ವಾಭಾವಿಕ ಗುಣಲಕ್ಷಣಗಳು ಕಡಿಮೆಯಾಗಿರುತ್ತವೆ.
ಇದನ್ನೂ ಓದಿ: ಪಾರ್ಕಿನ್ಸನ್ಸ್ ಕಾಯಿಲೆಗೆ ಆಯುರ್ವೇದ ಪರಿಹಾರ; ಪತಂಜಲಿ ಸಂಶೋಧನೆಯಲ್ಲಿ ಮಹತ್ತರ ಸಂಗತಿ ಬೆಳಕಿಗೆ
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ
ಆಯುರ್ವೇದ ವೈದ್ಯರು, ಶಿರಸಿ – 581401
ದೂರವಾಣಿ: 08384-225836
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sun, 22 June 25