COVID-19: 10 ದಿನದ ಕ್ವಾರಂಟೈನ್​ ಬಳಿಕವೂ ಹತ್ತರಲ್ಲಿ ಒಬ್ಬರಿಗೆ ಕೊರೋನಾ ಸೋಂಕಿನ ವರದಿ ಪಾಸಿಟಿವ್​ ಬರಲಿದೆ: ಅಧ್ಯಯನ

| Updated By: Pavitra Bhat Jigalemane

Updated on: Jan 16, 2022 | 11:47 AM

ಪ್ರಮಾಣೀಕೃತ ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ಧನಾತ್ಮಕ ಪರೀಕ್ಷೆ ಮಾಡಿಸಿ 10 ದಿನಗಳ ಕ್ವಾರಂಟೈನ್​ ಅವಧಿ ಮುಗಿಸಿದ 172 ಮಂದಿ ಸೋಂಕಿತರನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ 10 ದಿನಗಳ ಬಳಿಕ 13 ಪ್ರತಿಶತದಷ್ಟು ಜನರಲ್ಲಿ  ವೈರಸ್​ ಇರುವುದು ದೃಢಪಟ್ಟಿದೆ.

COVID-19: 10 ದಿನದ ಕ್ವಾರಂಟೈನ್​ ಬಳಿಕವೂ ಹತ್ತರಲ್ಲಿ ಒಬ್ಬರಿಗೆ ಕೊರೋನಾ ಸೋಂಕಿನ ವರದಿ ಪಾಸಿಟಿವ್​ ಬರಲಿದೆ: ಅಧ್ಯಯನ
ಪ್ರಾತಿನಿಧಿಕ ಚಿತ್ರ
Follow us on

ಕೊರೋನಾ (corona) ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೂರನೆ ಅಲೆ ಈಗಾಗಲೇ ಭಾರತದಲ್ಲಿ ಕಾಡಲು ಆರಂಭವಾಗಿದೆ. ಈ ನಡುವೆ ಯುಕೆ ಮೂಲದ  ಯುನಿವರ್ಸಿಟಿಯೊಂದು ನಡೆಸಿದ ಅಧ್ಯಯನದಲ್ಲಿ 10 ದಿನಗಳ ಕ್ವಾರಂಟೈನ್ (Quarantine)​ ಬಳಿಕವೂ  ಕೊರೋನಾ ಸೋಂಕು 10ರಲ್ಲಿ ಒಬ್ಬರಿಗೆ ಕಾಡುತ್ತದೆ ಎಂದು ಸಾಬೀತಾಗಿದೆ. 10 ದಿನಗಳ ಕ್ವಾರಂಟೈನ್​ ಬಳಿಕ 13 ಪ್ರತಿಶತದಷ್ಟು ಜನರು ಸೋಂಕಿನಿಂದ ಗುಣಮುಖರಾಗದೆ ಪಾಸಿಟಿವ್​ ಅಂಶಗಳನ್ನೇ ತೋರಿಸಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಅಧ್ಯಯನವನ್ನು ಇಂಟರ್​ನ್ಯಾಷನಲ್​​ ಜರ್ನಲ್​ ಆಫ್​ ಇನ್ಫೆಕ್ಷಿಯಸ್​ ಡಿಸೀಸ್​ (International Journal of Infectious Diseases)ನಲ್ಲಿ ಪ್ರಕಟಿಸಲಾಗಿದೆ. ಎಕ್ಸೆಟರ್​ ವಿಶ್ವವಿದ್ಯಾನಿಲಯ ಅಳವಡಿಸಿಕೊಂಡ ಹೊಸ ರೀತಿಯ ಅಧ್ಯಯನ ವಿಧಾನದಲ್ಲಿ ವೈರಸ್​ ಕ್ವಾರಂಟೈನ್​ ಬಳಿಕವೂ ಎಷ್ಟು ದಿನಗಳ ಕಾಲ  ಸಕ್ರಿಯವಾಗಿರುತ್ತದೆ ಎನ್ನುವುದನ್ನು ಪತ್ತೆ ಮಾಡಲಾಗಿದೆ. 

ಪ್ರಮಾಣೀಕೃತ ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ಧನಾತ್ಮಕ ಪರೀಕ್ಷೆ ಮಾಡಿಸಿ 10 ದಿನಗಳ ಕ್ವಾರಂಟೈನ್​ ಅವಧಿ ಮುಗಿಸಿದ 172 ಮಂದಿ ಸೋಂಕಿತರನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ 10 ದಿನಗಳ ಬಳಿಕ 13 ಪ್ರತಿಶತದಷ್ಟು ಜನರಲ್ಲಿ  ವೈರಸ್​ ಇರುವುದು ದೃಢಪಟ್ಟಿದೆ. ಹೀಗಾಗಿ ಸಾಂಕ್ರಾಮಿಕವಾಗಿ ಹರಡುವ ಆತಂಕ ಹೆಚ್ಚಾಗಿಯೇ ಇದೆ. ಗುಣಮುಖರಾದೆವೆಂದು ಇತರ ಜನರನ್ನು ಸಂಪರ್ಕಿಸುವ ಮೊದಲು ಎಚ್ಚರವಹಿಸಬೇಕು. ಇಲ್ಲವಾದರೆ ಅಂತಹ ವ್ಯಕ್ತಿಗಳು ರೋಗವನ್ನು ಹರಡಬಹುದು ಎಂದು ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಈ ಕುರಿತು  ಮೆಡಿಕಲ್​ ವಿಶ್ವವಿದ್ಯಾಲಯದ ಪ್ರಪೆಸರ್​ ಲೋರ್ನಾ ಹ್ಯಾರಿಸ್​ ಮಾಹಿತಿ ನೀಡಿದ್ದು, ನಾವು ನಡೆಸಿರುವುದು ಸಣ್ಣ ಅಧ್ಯಯನವೇ ಇರಬಹುದು ಆದರೆ ಇದರ ಫಲಿತಾಂಶ ಮಾತ್ರ ನಿಖರವಾಗಿದೆ. 10 ದಿನಗಳ ಬಳಿಕವೂ ವೈರಸ್​ ಸಕ್ರಿಯವಾಗಿದ್ದು, ಸೋಂಕನ್ನು ಹರಡುವ ಅಪಾಯವಿದೆ. ಈವರೆಗೆ ಸೋಂಕಿತ ವ್ಯಕ್ತಿಯಲ್ಲಿ ವೈರಸ್​ ಇತರರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿದೆಯೇ ಅಥವಾ ಇಲ್ಲವೊ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಅಧ್ಯಯನದಲ್ಲಿ ಬಳಸಲಾದ ಪರೀಕ್ಷೆಯು ವೈರಸ್​ ಸಕ್ರಿಯವಾಗಿದ್ದಾಗ ಮತ್ತು ಮುಂದೆ ಹರಡುವ ಸಾಮರ್ಥ್ಯವಿದ್ದಾಗ ಮಾತ್ರ ಧನಾತ್ಮಕತೆಯನ್ನು ತೋರಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಇನ್ನೋರ್ವ ಪ್ರೊಪೇಸರ್​ ಜನರು 10 ದಿನಗಳ ಬಳಿಕ ಆರೋಗ್ಯ ಸರಿಹೋಗಿದೆ ಎಂದು ಗುಣಮುಖರಾದ ಲಕ್ಷಣಗಳನ್ನು ಗಮನಿಸಿ ಹೊರಹೋಗುತ್ತಾರೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚು. ಹೀಗಾಗಿ 10 ದಿನಗಳ ಬಳಿಕವೂ ಸರಿಯಾಗ ಪರೀಕ್ಷೆ ನಡೆಸಿ ನೆಗೆಟಿವ್​ ವರದಿ ಬಂದರೆ ಮಾತ್ರ ಕ್ವಾರಂಟೈನ್​ನಿಂದ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

ಓಮಿಕ್ರಾನ್​ ಆತಂಕ: ಬಟ್ಟೆಯ ಮಾಸ್ಕ್​ಗಳ ಬಳಕೆ ಬೇಡ ಎಂದ ತಜ್ಞರು

Published On - 11:46 am, Sun, 16 January 22