AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajowan: ಓಮು ಕಾಳು -ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ, ಪುರುಷತ್ವ ವೃದ್ಧಿಗೆ ಊರುಗೋಲು!

ಬಹು ಮೂತ್ರ ರೋಗವನ್ನು ಹತೋಟಿಯಲ್ಲಿ ಇಡಲು ಅಜವಾನ ಹಾಗೂ ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕುರಿ ಹಿಕ್ಕೆ ಗಾತ್ರದ ಗುಳಿಗೆಗಳನ್ನು ತಯಾರಿಸಿ ದಿನದಲ್ಲಿ ಮೂರ್ನಾಲ್ಕು ಬಾರಿ ಸೇವಿಸಬೇಕು.

Ajowan: ಓಮು ಕಾಳು -ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ, ಪುರುಷತ್ವ ವೃದ್ಧಿಗೆ ಊರುಗೋಲು!
ಓಮು ಕಾಳು: ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ, ಪುರುಷತ್ವ ವೃದ್ಧಿಗೆ ಊರುಗೋಲು!
TV9 Web
| Updated By: ಸಾಧು ಶ್ರೀನಾಥ್​|

Updated on: Aug 28, 2022 | 6:06 AM

Share

ನೆಲದ ಮೇಲೆ ಚೆಲ್ಲಿದರೆ ತಕ್ಷಣ ಕಣ್ಣಿಗೆ ಕಾಣದಷ್ಟು ಚಿಕ್ಕ ಗಾತ್ರದ ಆದರೆ ದೈತ್ಯಾಕಾರದ್ದಷ್ಟು ಅಪಾರವಾದ ಔಷಧೀಯ ಗುಣಗಳನ್ನು ಹೊಂದಿರುವ ಈ ಮಸಾಲೆ ಕಾಳುಗಳಿಗೆ ಕನ್ನಡ ಭಾಷೆಯಲ್ಲಿ ಓಮು ಕಾಳು, ಅಜಮೋದ, ಅಜಮೂಲ, ಅಜವಾನ ಎಂದು ಕರೆಯುತ್ತಾರೆ. ಇನ್ನು, ಸಂಸ್ಕೃತ ಭಾಷೆಯಲ್ಲಿ ಯವನಿ, ಅಜಮೋದಿಕಾ ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಅಜವಾಯಿನ್ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ Ajowan, Ajwain ಎನ್ನುತ್ತಾರೆ. ವಿಶಿಷ್ಟವಾದ ಪರಿಮಳ, ಅಲ್ಪ ಖಾರದ ರುಚಿ ಇರುವ ಈ ಓಮು ಕಾಳು ಎಲ್ಲರಿಗೂ ಪರಿಚಿತ. ಪ್ರಾಚೀನ ಕಾಲದಿಂದಲೂ ಮನೆ ಮದ್ದಾಗಿ ಬಳಕೆಯಲ್ಲಿರುವ ಅಜವಾನ ಅನುಪಮ ಔಷಧೀಯ ಗುಣಗಳನ್ನು ಹೊಂದಿದೆ. ಇದಲ್ಲದೇ ಪುರುಷತ್ವ ವೃದ್ಧಿಗೆ, ಮದ್ಯಪಾನ ತ್ಯಜಿಸಲು, ಕಿಡ್ನಿ ಸ್ಟೋನ್ ಕರಗಿಸಲು ಹಾಗೂ ಜ್ವರ ನಿವಾರಣೆಗೆ ಈ ಅನುಪಮ ಗುಣದ ಅಜವಾನ ಬಳಕೆ ಯಾಗುತ್ತದೆ.  ಓಮು ಕಾಳಿನ ಪ್ರಯೋಜನಗಳು ಹೀಗಿವೆ:

  1. * ಪ್ರಸವದ ನಂತರ ಬಾಣಂತಿಯರಿಗೆ ಅಜವಾನ ತಿನ್ನಲು ಕೊಡುತ್ತಾರೆ.ಅಥವಾ ಕಷಾಯ ಮಾಡಿ ಕೊಡು ತ್ತಾರೆ.ಇದರಿಂದ ಹಸಿವು ಹೆಚ್ಚಾಗುತ್ತದೆ. ಉಂಡ ಆಹಾರ ಜೀರ್ಣವಾಗುತ್ತದೆ.ಇದು ಕ್ರಿಮಿನಾಶಕ ಗುಣ ಹೊಂದಿದ್ದು ಗರ್ಭಾಶಯ ಕೂಡ ಸ್ವಚ್ಛವಾಗುತ್ತದೆ.
  2. * ನವಜಾತ ಶಿಶು ಹೆಚ್ಚು ಅಳುತ್ತಿದ್ದರೆ ಮನೆಯ ಹಿರಿಯರು ಅಜವಾನ ತಿಂದು ಮಗುವಿನ ಮುಖಕ್ಕೆ ಊದಲು ಹೇಳುತ್ತಾರೆ.ಏಕೆಂದರೆ ತಾಯಿಯಾದವಳು ಅಜವಾನ ತಿಂದು ಮಗುವಿನ ಮುಖಕ್ಕೆ ಊದುವ ಮಾತ್ರದಿಂದ ಇದರ ವಿಶಿಷ್ಟ ಪರಿಮಳ ಮಗುವಿನ ಶ್ವಾಸದೊಂದಿಗೆ ಹೊಟ್ಟೆಗೆ ಸೇರಿ, ಮಗುವಿನ ಹೊಟ್ಟೆ ಯುಬ್ಬರ ಕಡಿಮೆಯಾಗಿ ಮಗುವಿಗೆ ಆರಾಮ ವೆನಿ ಸುತ್ತದೆ.
  3. * ಸ್ವಚ್ಛವಾದ ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಜವಾನ ಹಾಕಿ ತಾಯಿಯಾದವಳು ತಾನು ಬಾಯಿಯಲ್ಲಿ ಅಗಿದು ಮಗುವಿಗೆ ಚೀಪಿಸುವುದರಿಂದ ಮಗುವಿನ ಹೊಟ್ಟೆಯುಬ್ಬರ ಕಡಿಮೆಯಾಗಿ, ಜೀರ್ಣ ಶಕ್ತಿ ಹೆಚ್ಚುತ್ತದೆ.
  4. * ಅರ್ಧ ಟೀ ಚಮಚ ಓಮು ಕಾಳಿನ ಚೂರ್ಣವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಉದರ ಕ್ರಿಮಿಗಳು ನಾಶವಾಗುತ್ತವೆ.
  5. * ಊಟದ ನಂತರ ಅಜವಾನ ಜೀರಿಗೆ ಸೇರಿಸಿ ತಿನ್ನುವುದರಿಂದ ಹೊಟ್ಟೆಯುಬ್ಬರ, ಎದೆಯುರಿ ಶಮನವಾಗುತ್ತದೆ.ಆಹಾರವೂ ಜೀರ್ಣವಾಗುತ್ತದೆ.
  6. *ಚಿಕ್ಕ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದರೆ ಅಜವಾನ ಹಾಗೂ ಕರಿ ಎಳ್ಳು ಬೆಲ್ಲ ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ( ದಿನದಲ್ಲಿ ಎರಡು) ತಿನ್ನಿಸ ಬೇಕು.
  7. * ಬಹು ಮೂತ್ರ ರೋಗವನ್ನು ಹತೋಟಿಯಲ್ಲಿ ಇಡಲು ಅಜವಾನ ಹಾಗೂ ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕುರಿ ಹಿಕ್ಕೆ ಗಾತ್ರದ ಗುಳಿಗೆಗಳನ್ನು ತಯಾರಿಸಿ ದಿನದಲ್ಲಿ ಮೂರ್ನಾಲ್ಕು ಬಾರಿ ಸೇವಿಸಬೇಕು.
  8. * ಸ್ತ್ರೀಯರ ಮಾಸಿಕ ಧರ್ಮ ಏರು ಪೇರಾದಾಗ ಅಜವಾನ ಹಾಗೂ ಬೆಲ್ಲವನ್ನು ಸೇರಿಸಿದ ಕಷಾಯ ಸೇವನೆ ಒಳ್ಳೆಯದು.
  9. * ಇದರ ಕಷಾಯ ಸೇವನೆಯಿಂದ ಕೆಮ್ಮು ದಮ್ಮು ನಿವಾರಣೆಯಾಗುತ್ತದೆ.
  10. * ಕಫ ಕೆಮ್ಮುಗಳಿಗೆ ಎದೆಯ ಮೇಲೆ ಸಾಸಿವೆ ಎಣ್ಣೆ ಯನ್ನು ಸವರಿ, ಒಂದು ಬಟ್ಟೆಯಲ್ಲಿ ಓಮು ಕಾಳು ಸ್ವಲ್ಪ ಪಚ್ಚ ಕರ್ಪುರ ಹಾಕಿ ಚೂರು ಬಿಸಿ ಮಾಡಿ ಎದೆಯ ಮೇಲೆ ಸವರಬೇಕು. ಇದರ ವಾಸನೆಯನ್ನು ಕೂಡ ತೆಗೆದುಕೊಳ್ಳಬಹುದು. (ಮಾಹಿತಿ ಸಂಗ್ರಹ ಎಸ್​ ಹೆಚ್​ ನದಾಫ್​)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ