ನಿಮ್ಮ ಡಿಜಿಟಲ್ ಪರದೆಗಳನ್ನು ಹೆಚ್ಚು ಸಮಯ ನೋಡುವುದರಿಂದ ಆಯಾಸ, ತುರಿಕೆ, ಒಣಗಿದ ಕಣ್ಣುಗಳು ಮತ್ತು ಮಸುಕಾದ ದೃಷ್ಟಿ ಮತ್ತು ತಲೆನೋವಿಗೆ ಕಾರಣವಾಗಬಹುದು. ಇದು ನಿಮಗೂ ತಿಳಿದಿರಬಹುದು. ಆದರೆ ಇದು ಇಂದಿನ ದಿನಗಳಲ್ಲಿ ಅಗತ್ಯವಾಗಿರುವುದರಿಂದ ನೀವು ಡಿಜಿಟಲ್ ಪರದೆಗಳನ್ನು ನೋಡುವ ಸಮಯವನ್ನು ಕಡಿಮೆ ಮಾಡಬಹುದು. ಯಾವ ರೀತಿಯಲ್ಲಿ? ಇದರ ಲಕ್ಷಣಗಳೇನು? ಈ ಬಗ್ಗೆ ದಿ ವೀಕ್ ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳಲಾಗಿದ್ದು,ತಜ್ಞರು ಸಲಹೆಗಳನ್ನು ನೀಡಿದ್ದಾರೆ. ಇಲ್ಲಿದೆ ಮಾಹಿತಿ.
30 ವರ್ಷದ ಮಂಜು ಅವಳ ಕಣ್ಣಿನ ಸುತ್ತ ಕಪ್ಪು ಕಲೆಗಳು ಮತ್ತು ಗೆರೆಗಳು ಮೂಡಲು ಪ್ರಾರಂಭಿಸಿದಾಗ, ಅವಳು ಅದನ್ನು ದಣಿವು ಎಂದುಕೊಂಡು ನಿರ್ಲಕ್ಷಿಸಿದಳು. ಕೆಲವು ತಿಂಗಳುಗಳ ನಂತರ ಇದು ಅವಳಿಗೆ ಸಾಮಾನ್ಯ ಎನಿಸಿತು. ಆಗಲೂ ಅವಳು ಅದನ್ನು ನಿರ್ಲಕ್ಷಿಸಿದಳು. ಆದರೆ, ಒಂದು ವರ್ಷದ ನಂತರ ಆಗಾಗ ಅವಳಿಗೆ ಕಣ್ಣು ಮಂಜಾಗುವ ಘಟನೆ ನಡೆಯಲು ಆರಂಭವಾಯಿತು. ಕೆಲವೊಮ್ಮೆ, ಅವಳು ಯಾವುದಾದರೂ ವಸ್ತುಗಳನ್ನು ನೋಡಲು ಅಥವಾ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಮಂಜು (ಹೆಸರು ಬದಲಾಯಿಸಲಾಗಿದೆ) ನೇತ್ರ ತಜ್ಞರನ್ನು ಸಂಪರ್ಕಿಸಲು ನಿರ್ಧರಿಸಿದಳು ಮತ್ತು ನರವಿಜ್ಞಾನಿಗಳಿಗೆ ಈ ಬಗ್ಗೆ ಶಿಫಾರಸು ಮಾಡಿದಳು.
ಆಗ ಹೈದರಾಬಾದ್ನ ಅಪೋಲೊ ಆಸ್ಪತ್ರೆಯ ಹಿರಿಯ ಸಲಹೆಗಾರ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಅವರು ಮಂಜು ಅವರಿಗೆ ಸ್ಮಾರ್ಟ್ಫೋನ್ ವಿಷನ್ ಸಿಂಡ್ರೋಮ್ ಇರುವುದನ್ನು ಪತ್ತೆಮಾಡಿದ್ದಾರೆ. ಕಾರ್ಖಾನೆಯ ಉದ್ಯೋಗಿಯಾಗಿದ್ದ ಮಂಜು ಅವರು, ತನ್ನ ಮಗುವಿಗೆ ಜನ್ಮ ನೀಡಿದ ನಂತರ ತನ್ನ ಕೆಲಸವನ್ನು ತೊರೆದಳು. ಆಕೆಯ ಪತಿ ಕೆಲಸದಿಂದ ತಡವಾಗಿ ಹಿಂತಿರುಗುತ್ತಿದ್ದ ಪರಿಣಾಮ ಮತ್ತು ಮಂಜು ಅವರು ತಮ್ಮ ಗಂಡ ಹಿಂತಿರುಗುವವರೆಗೂ ಎಚ್ಚರವಾಗಿರುತ್ತಿದ್ದಳು. ಅವರಿಗಾಗಿ ಕಾಯುತ್ತಿರುವಾಗ, ಮಂಜು ದೀಪಗಳನ್ನು ಆಫ್ ಮಾಡಿ, ತನ್ನ ಮಗುವಿನ ಪಕ್ಕದಲ್ಲಿ ಮಲಗಿ ಸ್ಮಾರ್ಟ್ ಫೋನ್ ನಲ್ಲಿ ಗಂಟೆಗಳ ಕಾಲ ವೀಡಿಯೊಗಳನ್ನು ನೋಡುತ್ತಿದ್ದಳು. ಪರದೆಯ ಬೆಳಕು, ಬಣ್ಣಗಳನ್ನು ಬದಲಾವಣೆ ಮತ್ತು ಕೋಣೆಯಲ್ಲಿನ ಕತ್ತಲು ಅವಳಿಗೆ ಹಾನಿ ಮಾಡುತ್ತದೆ ಎಂದು ಅವಳು ಎಂದಿಗೂ ಭಾವಿಸಿರಲಿಲ್ಲ.
ಡ್ರೈ- ಐ ಸಿಂಡ್ರೋಮ್ ಅಥವಾ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್) ನಿಂದ ಬಳಲುತ್ತಿರುವ ಭಾರತದ 1.8 ಕೋಟಿ ಜನರಲ್ಲಿ ಮಂಜು ಕೂಡ ಒಬ್ಬರು. ಒಂದು ವರ್ಷದಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕನಿಷ್ಠ 30,000 ಮಕ್ಕಳು ಮಸುಕಾದ ದೃಷ್ಟಿಯ ಬಗ್ಗೆ ದೂರು ನೀಡುತ್ತಾರೆ. ಅಪೌಷ್ಟಿಕತೆ, ಮಸುಕಾದ ದೃಷ್ಟಿಯ ಪ್ರಕರಣಗಳು ಹೆಚ್ಚಾಗಲು ಮೊದಲ ಕಾರಣವಾಗಿದ್ದರೆ, ಮತ್ತೊಂದು ಪ್ರಮುಖ ಕಾರಣವೆಂದರೆ ದೀರ್ಘಕಾಲದ ಸ್ಮಾರ್ಟ್ಫೋನ್ ನೋಡುವುದರಿಂದ ಈ ಸಿಂಡ್ರೋಮ್ ಪ್ರಕರಣಗಳು ಹೆಚ್ಚಾಗುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳು ಮತ್ತು ಗೆರೆಗಳು, ಕಣ್ಣಿನ ಸುತ್ತಲೂ ಸುಟ್ಟಗಾಯಗಳು, ನಿರಂತರ ಕಣ್ಣೀರು, ಕ್ಷಣಿಕ ಕುರುಡುತನವು ರೋಗಲಕ್ಷಣಗಳಲ್ಲಿ ಸೇರಿವೆ. ಹೆಚ್ಚುವರಿ ರೋಗಲಕ್ಷಣಗಳೆಂದರೆ ತಲೆ ಮತ್ತು ಕುತ್ತಿಗೆಯಲ್ಲಿ ನೋವು. ನೇತ್ರತಜ್ಞರು ಮತ್ತು ನರವಿಜ್ಞಾನಿಗಳ ಪ್ರಕಾರ, ಸಿವಿಎಸ್ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗುವುದಿಲ್ಲ ಆದರೆ ದೃಷ್ಟಿ ತೊಂದರೆಗೆ ಕಾರಣವಾಗುತ್ತದೆ. ಕಣ್ಣುಗಳಲ್ಲಿ ಕೆಂಪಾಗುವಿಕೆ, ನೋವು ಅಥವಾ ನೀರು ಸಹ ಬರಬಹುದು.”ಇದಕ್ಕೆ ಏಕೈಕ ಕಾರಣವೆಂದರೆ ಹೆಚ್ಚಿನ ಪರದೆಯ ಸಮಯ ಮತ್ತು ಪರದೆಯ ಮೇಲಿನ ಬೆಳಕು” ಎಂದು ಚೆನ್ನೈನ ಶಂಕರ ನೇತ್ರಾಲಯದ ಡಾ.ನಿವೇದಿತಾ ನಾರಾಯಣ್ ಹೇಳುತ್ತಾರೆ.
ಚೆನ್ನೈನ ತ್ರಿನೇತ್ರ ಕಣ್ಣಿನ ಆರೈಕೆಯ ಡಾ. ರವೀಂದ್ರ ಮೋಹನ್, ನಾವು ಅದರೊಂದಿಗೆ ಬದುಕಲು ಕಲಿಯಬೇಕು ಏಕೆಂದರೆ ಇದು ನಮ್ಮ ಜೀವನಶೈಲಿಗೆ ಸಂಬಂಧಿಸಿದೆ. ಡಿಜಿಟಲ್ ಪರದೆ ಎಲ್ಲಾ ವಯಸ್ಸಿನ ಜನರು ಬಳಸುತ್ತಾರೆ, ಇದರಿಂದ ಕಣ್ಣುಗಳು ಮತ್ತು ನರಮಂಡಲಗಳ ಮೇಲೆ ಒತ್ತಡ ಹೇರಲು ಕಾರಣವಾಗುತ್ತವೆ ಎಂದು ರವೀಂದ್ರ ಮೋಹನ್ ಹೇಳುತ್ತಾರೆ.
“ಹೆಚ್ಚು ಬಳಕೆ, ಹೆಚ್ಚು ಒತ್ತಡ” ಎಂದು ನಾರಾಯಣ್ ಹೇಳುತ್ತಾರೆ. ಶಂಕರ ನೇತ್ರಾಲಯವು ಇದಕ್ಕಾಗಿಯೇ ಮೀಸಲಾದ ಸಿವಿಎಸ್ ಚಿಕಿತ್ಸಾಲಯವನ್ನು ಹೊಂದಿದೆ. ಚಿಕಿತ್ಸೆಗಾಗಿ ಪ್ರತಿದಿನ ರೋಗಿಗಳು ಐದು ವರ್ಷ ವಯಸ್ಸಿನವರಿಂದ ಹಿಡಿದು 80 ವರ್ಷ ವಯಸ್ಸಿನವರವರೆಗೆ ಇರುತ್ತಾರೆ. “ಕ್ಲಿನಿಕ್ಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದು ಎಚ್ಚರಿಕೆಯ ಗಂಟೆಯಾಗಿದೆ” ಎಂದು ನಾರಾಯಣ್ ಹೇಳುತ್ತಾರೆ. ಹೆಚ್ಚಿನ ರೋಗಿಗಳು ಕೆಲಸ ಮಾಡುವಾಗ ಕಣ್ಣು ಮಿಟುಕಿಸುವುದಿಲ್ಲ ಇದರಿಂದ ಈ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳುತ್ತಾರೆ. “ಅಲ್ಲದೆ ಇದು ನೈಸರ್ಗಿಕ ವಿದ್ಯಮಾನ” ಎಂದು ಅವರು ತಿಳಿಸಿದ್ದಾರೆ.
“ಯಾರಾದರೂ ಏನನ್ನಾದರೂ ಸೂಕ್ಷ್ಮವಾಗಿ ಆಲಿಸುತ್ತಿರುವಾಗ ಅಥವಾ ವೀಕ್ಷಿಸುತ್ತಿರುವಾಗ, ಅವರು ಕಣ್ಣು ಮಿಟುಕಿಸುವುದಿಲ್ಲ ಮತ್ತು ಕಣ್ಣುಗಳು ಉಬ್ಬಿಕೊಳ್ಳುತ್ತವೆ.” ಅಂತಹ ಸಂದರ್ಭಗಳಲ್ಲಿ ಕಣ್ಣು ಮಿಟುಕಿಸುವ ಪ್ರಮಾಣ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ. ಕಣ್ಣು ಮಿಟುಕಿಸುವಿಕೆ ಕಡಿಮೆಯಾಗುವುದು ಮತ್ತು ಹವಾನಿಯಂತ್ರಿತ ಕೋಣೆಗಳಲ್ಲಿನ ಗಾಳಿಯು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ, ಇದು ಕಣ್ಣುಗಳಲ್ಲಿ ಶುಷ್ಕತೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: Eye Health: ಕಣ್ಣಿನ ಆರೋಗ್ಯದ ಮೇಲೆ ಮಧುಮೇಹದ ಪ್ರಭಾವ
ಮಂಜು ಅವರ ಪ್ರಕರಣದಲ್ಲಿ, ಅವಳು ತನ್ನ ಫೋನ್ ಬಳಸುವಾಗ ಲೈಟ್ ಆಫ್ ಮಾಡಿದ ಕಾರಣ, ಕತ್ತಲೆ ಕೋಣೆಯಲ್ಲಿ ಪ್ರಕಾಶಮಾನವಾದ ಸ್ಕ್ರೀನ್ ನೋಡುವುದರಿಂದ ಅವಳ ರೆಟಿನಾ ಗರಿಷ್ಠ ಒತ್ತಡದಲ್ಲಿತ್ತು. ಹಾಗಾಗಿ “ಸ್ಕ್ರೀನ್ನ ಬ್ರೈಟ್ನೆಸ್ನ್ನು ಕಡಿಮೆ ಮಾಡಲು ನಾವು ಅವಳಿಗೆ ಸಲಹೆ ನೀಡಿದ್ದೇವೆ” ಎಂದು ಸುಧೀರ್ ಕುಮಾರ್ ಹೇಳುತ್ತಾರೆ. ಬಳಿಕ ಅವಳು ತನ್ನ ಫೋನ್ ಬಳಕೆಯನ್ನು ಕಡಿಮೆ ಮಾಡಿದಳು. ಒಂದು ತಿಂಗಳ ನಂತರ, ರೋಗಲಕ್ಷಣಗಳು ಕಡಿಮೆಯಾಗಲು ಪ್ರಾರಂಭಿಸಿದವು. ಅವಳು ಈಗ ಚೆನ್ನಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಅವರು ಇನ್ನೊಬ್ಬ ರೋಗಿಯ ಪ್ರಕರಣವನ್ನು ಇಲ್ಲಿ ಉಲ್ಲೇಖಿಸುತ್ತಾರೆ, ಆ ರೋಗಿಯು ತಮ್ಮ ಒಂದು ಕಣ್ಣಿನಿಂದ ಬೆಡ್ ಶೀಟ್ ಒಳಗೆ ಮೊಬೈಲ್ ನೋಡುತ್ತಿದ್ದಳು ಮತ್ತು ಕೇವಲ ಒಂದು ಕಣ್ಣಿನಿಂದ ಫೋನ್ ನೋಡುತ್ತಿದ್ದಳು. “ಇದು ಇನ್ನೂ ಹೆಚ್ಚು ಅಪಾಯಕಾರಿ” ಎಂದು ಅವರು ಹೇಳುತ್ತಾರೆ. “ನಾವು ರೋಗಿಗಳಿಗೆ ಕೆಲಸವನ್ನು ಭಾಗಗಳಾಗಿ ವಿಭಜಿಸಿಕೊಳ್ಳಲು ಮತ್ತು ವಿರಾಮದ ಸಮಯದಲ್ಲಿ ಡಿಜಿಟಲ್ ಪರದೆಗಳನ್ನು ಬಳಸಬೇಡಿ ಎಂದು ಹೇಳುತ್ತೇವೆ.” ಸಾಮಾನ್ಯ ಸಲಹೆಯೆಂದರೆ 20-20-20 ಈ ನಿಯಮವನ್ನು ಪಾಲಿಸಿ. ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿ ನೋಡಿ. ಆದರೆ ಡಿಜಿಟಲ್ ಪರದೆಗಳ ಬಳಕೆಯ ಹೆಚ್ಚಳದೊಂದಿಗೆ, ನೇತ್ರತಜ್ಞರು ಸಿವಿಎಸ್ ಪ್ರಕರಣವನ್ನು ತೆಗೆದುಹಾಕಲು ಸಾಧ್ಯವಿಲ್ಲ, ಕೇವಲ ನಿರ್ವಹಿಸಲಾಗುತ್ತದೆ ಎಂದು ಹೇಳುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: