ಕೋವಿಡ್, ಹೃದಯಾಘಾತಕ್ಕೆ ಸಂಬಂಧವಿದೆಯೇ; ಆರೋಗ್ಯ ಸಚಿವರು ಹೇಳಿದ್ದೇನು?

|

Updated on: Apr 04, 2023 | 12:00 PM

ಯುವಕರಲ್ಲಿ ಮತ್ತು ಆರೋಗ್ಯವಂತ ಜನರಲ್ಲಿಯೂ ಸಹ ಹೆಚ್ಚುತ್ತಿರುವ ಹೃದಯಾಘಾತದ ವರದಿಗಳ ಬಗ್ಗೆ ವ್ಯಾಪಕ ಕಾಳಜಿಯನ್ನು ತಿಳಿಸುತ್ತಾ, ಮಾಂಡವಿಯಾ ಅವರು NDTV ಗೆ ಆರೋಗ್ಯ ಸಚಿವಾಲಯವು ಕೋವಿಡ್‌ ಮತ್ತು ಹೃದಯಾಘಾತದ ನಡುವೆ ಇರುವ ಯಾವುದೇ ಸಂಭವನೀಯ ಸಂಬಂಧವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು.

ಕೋವಿಡ್, ಹೃದಯಾಘಾತಕ್ಕೆ ಸಂಬಂಧವಿದೆಯೇ; ಆರೋಗ್ಯ ಸಚಿವರು ಹೇಳಿದ್ದೇನು?
Mansukh Mandaviya
Image Credit source: Mansukh Mandaviya
Follow us on

ಕೋವಿಡ್-19 (COVID-19)ಪರಿಸ್ಥಿತಿ ಮೂಡಲು ಒಂದು ವೈರಸ್ (Virus) ಕಾರಣವಾಗಿದ್ದು, ಅದು ರೂಪಾಂತರಗೊಳ್ಳುತ್ತಲೇ (mutants) ಇರುತ್ತದೆ ಮತ್ತು ಭಾರತದಲ್ಲಿ ಇಲ್ಲಿಯವರೆಗೆ 214 ವಿಭಿನ್ನ ರೂಪಾಂತರಗಳು ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh L. Mandaviya) NDTV ಗೆ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇತ್ತೀಚಿನ ಸೋಂಕುಗಳ ಉಲ್ಬಣವನ್ನು ಎದುರಿಸಲು ಸರ್ಕಾರವು ಸಿದ್ಧವಾಗಿದೆ ಎಂದು ಭರವಸೆ ನೀಡಿದರು. ಐಸಿಯು ಹಾಸಿಗೆಗಳು, ಆಮ್ಲಜನಕ ಪೂರೈಕೆ ಮತ್ತು ಇತರ ನಿರ್ಣಾಯಕ ಆರೈಕೆ ವ್ಯವಸ್ಥೆಗಳು ಜಾರಿಯಲ್ಲಿವೆ, ಜೊತೆಗೆ ಪ್ರತಿ ವಾರ ಇರುವ ಸೌಲಭ್ಯಗಳ ಕುರಿತು ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಮಾಂಡೋವಿಯಾ ಹೇಳಿದರು. ಕೋವಿಡ್ ಹೇಗೆ ವರ್ತಿಸುತ್ತದೆ ಎಂದು ಊಹಿಸಲು ಅಸಾಧ್ಯ, ಆದರೆ ಈಗ ಉಲ್ಬಣಗೊಳ್ಳುತ್ತಿರುವ ರೂಪಾಂತರಿಗಳು ಯಾವುದೇ ದುರಂತವನ್ನು ಉಂಟುಮಾಡುವಷ್ಟು ಅಪಾಯಕಾರಿ ಅಲ್ಲ ಎಂದು ಸಚಿವರು ವಿವರಿಸಿದರು.

ಯುವಕರಲ್ಲಿ ಮತ್ತು ಆರೋಗ್ಯವಂತ ಜನರಲ್ಲಿಯೂ ಸಹ ಹೆಚ್ಚುತ್ತಿರುವ ಹೃದಯಾಘಾತದ ವರದಿಗಳ ಬಗ್ಗೆ ವ್ಯಾಪಕ ಕಾಳಜಿಯನ್ನು ತಿಳಿಸುತ್ತಾ, ಮಾಂಡೋವಿಯಾ NDTV ಗೆ ಆರೋಗ್ಯ ಸಚಿವಾಲಯವು ಕೋವಿಡ್‌ ಮತ್ತು ಆಗುತ್ತರುವ ಹೃದಯಾಘಾತಕ್ಕೆ ಇರುವ ಯಾವುದೇ ರೀತಿಯ ಸಂಭವನೀಯ ಸಂಬಂಧವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು. “ಕೋವಿಡ್ ಹೊಂದಿದ್ದ ಯುವಕರು ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ, ಇದರ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಸರ್ಕಾರವು ಸಂಶೋಧನೆಯನ್ನು ನಿಯೋಜಿಸಿದೆ ಮತ್ತು ಎರಡು-ಮೂರು ತಿಂಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ” ಎಂದು ಸಚಿವರು ಹೇಳಿದರು.

“ನಾವು ಹಲವಾರು ಯುವ ಕಲಾವಿದರು, ಓಟಗಾರದು ಹಾಗು ಕ್ರೀಡಾಪಟುಗಳನ್ನು ದರ್ಶನ ಮಾಡುವಾಗ ವೇದಿಕೆಯಲ್ಲಿಯೇ ಸಾವನ್ನಪ್ಪಿದ ಹಲವಾರು ಪ್ರಕರಣಗಳನ್ನು ನೋಡಿದ್ದೇವೆ, ಹಲವಾರು ಸ್ಥಳಗಳಿಂದ ವರದಿಗಳು ಬರಲಾರಂಭಿಸಿದವು. ಇದಕ್ಕಾಗಿ ನಾವು ತನಿಖೆ ಮಾಡಬೇಕಾಗಿದೆ” ಎಂದು ಮಾಂಡೋವಿಯಾ ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗದ ನಾಲ್ಕನೇ ತರಂಗದ ಬಗ್ಗೆ, ಆರೋಗ್ಯ ಸಚಿವರು ಎಚ್ಚರಿಕೆಯ ಅಗತ್ಯವಿದೆ ಎಂದು ಹೇಳಿದರು. ಕೊನೆಯ Covid ರೂಪಾಂತರವು Omicron ನ BF.7 ಉಪ-ವ್ಯತ್ಯಯವಾಗಿದೆ ಮತ್ತು ಈಗ XBB1.16 ಉಪ-ರೂಪಾಂತರವು ಸೋಂಕುಗಳ ಉಲ್ಬಣವನ್ನು ಉಂಟುಮಾಡುತ್ತಿದೆ, ಸಚಿವಾಲಯದ ಅನುಭವದಲ್ಲಿ, ಉಪ-ವ್ಯತ್ಯಯಗಳು ತುಂಬಾ ಅಪಾಯಕಾರಿ ಅಲ್ಲ ಎಂದು ಹೇಳಿದರು.

ಹೊಸ ರೂಪಾಂತರವು ಪತ್ತೆಯಾದಾಗ, ನಾವು ಅದನ್ನು ಲ್ಯಾಬ್‌ನಲ್ಲಿ ಗುರುತಿಸುತ್ತೇವೆ ಮತ್ತು ಪ್ರತ್ಯೇಕಿಸುತ್ತೇವೆ. ನಂತರ ನಾವು ಅವುಗಳ ಮೇಲೆ ಲಸಿಕೆಗಳ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡುತ್ತೇವೆ. ಇಲ್ಲಿಯವರೆಗೆ, ನಮ್ಮ ಲಸಿಕೆಗಳು ಪ್ರಸ್ತುತ ಎಲ್ಲಾ ರೂಪಾಂತರಗಳ ವಿರುದ್ಧ ಕೆಲಸ ಮಾಡಿದೆ, ”ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಯುವಕರು ಆರೋಗ್ಯ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ: ಅಧ್ಯಯನ

CoWIN ಪ್ಲಾಟ್‌ಫಾರ್ಮ್ ಎಲ್ಲಾ ವ್ಯಾಕ್ಸಿನೇಷನ್ ಡೇಟಾವನ್ನು ಒದಗಿಸಿದೆ, ಇದು ನಮಗೆ ಹೆಚ್ಚು ಸಹಾಯ ಮಾಡಿದೆ ಎಂದು ಮಾಂಡೋವಿಯಾ ಹೇಳಿದರು ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಪಾರ್ಶ್ವವಾಯು ಮತ್ತು ಕೋವಿಡ್ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಿದೆ, ಈ ಅಧ್ಯಯವನ್ನು ಆದಷ್ಟು ಬೇಗ ಬಹಿರಂಗಪಡಿಸುತ್ತದೆ. ಈ ಅಧ್ಯಯನ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ.