ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ 176 ತಾಲ್ಲೂಕು ಕೇಂದ್ರಗಳಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬ ನಾಗರಿಕರು ಈ ಮೇಳಗಳಿಗೆ ಭೇಟಿ ನೀಡಲು ತಿಳಿಸಲಾಗಿದೆ. ಸರ್ಕಾರ ಒದಗಿಸುತ್ತಿರುವ ಎಲ್ಲಾ ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳಲು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಆಯುಕ್ತರು ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ. ಈ ಕಾರ್ಯಕ್ರಮದ ವಿವರನ್ನು ಸಹ ನೀಡಲಾಗಿದೆ. ಅದರಂತೆ, ಅರ್ಹರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ, ಡಿಜಿಟಲ್ ಆರೋಗ್ಯ ಗುರುತಿನ ಐಡಿ ಕಾರ್ಡ್, ಸೂಪರ್ ಸ್ಪೆಷಾಲಿಟಿ ಸೇವೆಗೆ ಉಚಿತ ವಿಶೇಷ ಆರೈಕೆ ಮತ್ತು ಟೆಲಿ ಮೆಡಿಸಿನ್ ಸಮಾಲೋಚನೆ, ಅಸಂಕ್ರಾಮಿಕ ರೋಗಗಳ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ, ಅಸಾಂಕ್ರಾಮಿಕ ರೋಗಗಳು ಮತ್ತು ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ, ಆಯುಷ್ಯ ಆರೈಕೆ ಮತ್ತು ಯೋಗ ಶಿಬಿರ ಇರಲಿದೆ ಎಂದು ತಿಳಿಸಲಾಗಿದೆ.
ಆರೋಗ್ಯ ಮೇಳದಲ್ಲಿ ಏನೇನು ಇರಲಿದೆ?
@DHFWKA ಕರ್ನಾಟಕದಾದ್ಯಂತ 176 ತಾಲ್ಲೂಕುಗಳಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬ ನಾಗರಿಕರು ಈ ಮೇಳಗಳಿಗೆ ಭೇಟಿ ನೀಡಿ ಮತ್ತು ಎಲ್ಲಾ ಸರ್ಕಾರ ಒದಗಿಸುತ್ತಿರುವ ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳಲು ಕೋರುತ್ತೆನೆ@CMofKarnataka @mla_sudhakar @MDNHM_Kar @Vijaykarnataka @KannadaPrabha @prajavani pic.twitter.com/cQX2blgVY5
— Commissioner, Health, GoK (@Comm_dhfwka) April 18, 2022
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಆಯುಷ್ಮಾನ್ ಭಾರತ ನಾಲ್ಕನೆ ವರ್ಷಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಆರೋಗ್ಯ ಮೇಳವನ್ನು ಆಯೋಜಿಸಿದೆ. ಮೇಳದಲ್ಲಿ ಸಾರ್ವಜನಿಕರು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ, ಚಿಕಿತ್ಸೆ ಮಾರ್ಗದರ್ಶನವನ್ನು ಉಚಿತವಾಗಿ ಪಡೆಯಬಹುದು ಎಂದು ತಿಳಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ತಾಲೂಕು ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಉಚಿತ ಆರೋಗ್ಯ ಮೇಳ ಆಯೋಜಿಸಿದೆ.
ಇದನ್ನೂ ಓದಿ: Health Tips: ಕಡಲೆಕಾಯಿಯ ದುಷ್ಪರಿಣಾಮಗಳು; ಈ ಸಮಸ್ಯೆ ಇರುವವರು ಹೆಚ್ಚು ಶೇಂಗಾ ತಿನ್ನುವುದು ಅಪಾಯಕಾರಿ
ಇದನ್ನೂ ಓದಿ: Health Tips: ಬಾಯಿ ತೆರೆದು ಮಲಗುವ ಅಭ್ಯಾಸ ಇದೆಯೇ? ಅದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಿರಿ
Published On - 1:24 pm, Mon, 18 April 22