ಮುಖದ ಅಂದವನ್ನು ಹೆಚ್ಚಿಸುವುದೇ ಈ ಕೂದಲು. ಆದರೆ ಯುವಕರಲ್ಲಿ ಬೋಳು ತಲೆ ಸಮಸ್ಯೆಯೂ ಹೆಚ್ಚಾಗುತ್ತಿದೆ. ಇಂದಿನ ಜೀವನ ಶೈಲಿಯಿಂದಾಗಿ ಕೂದಲು ಉದುರುವುದು ಬಕ್ಕತಲೆಯ ಸಮಸ್ಯೆಯೂ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ತಮ್ಮ ಸೌಂದರ್ಯವನ್ನು ಕಡಿಮೆ ಮಾಡುವ ಬೋಳು ತಲೆ ಸಮಸ್ಯೆಯಿಂದ ಟೆನ್ಶನ್ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಈ ಕೆಲವು ಸಲಹೆಗಳನ್ನು ಪಾಲಿಸಿದ್ರೆ ಬೋಳು ತಲೆಯಿದ್ದರೂ ಸುಂದರವಾಗಿ ಕಾಣಿಸಿಕೊಳ್ಳಬಹುದು.
* ಬೋಳು ತಲೆಯನ್ನು ಸಂಪೂರ್ಣವಾಗಿ ಶೇವ್ ಮಾಡಿಕೊಳ್ಳಿ : ತಲೆಯಲ್ಲಿ ಅಲ್ಲಲ್ಲಿ ಕೂದಲು ಇದ್ದರೆ ನೋಡುವುದಕ್ಕೆ ಚಂದ ಕಾಣುವುದಿಲ್ಲ. ಹೀಗಾಗಿ ಅರ್ಧ ಅರ್ಧ ಕೂದಲಿಗಿಂತ ಅದನ್ನು ಪೂರ್ತಿಯಾಗಿ ಶೇವ್ ಮಾಡುವುದು ಒಳ್ಳೆಯದು. ಒಳ್ಳೆಯ ಶೇವಿಂಗ್ ಕಿಟ್ ಬಳಸಿ ಒಂದು ಕೂದಲು ಇರದಂತೆ ಶೇವ್ ಮಾಡಿಕೊಳ್ಳಬೇಕು. ಅದಲ್ಲದೇ, ಕೂದಲಿಲ್ಲದ ತಲೆ ಕೂಡ ಹೊಳೆಯುವಂತೆ ನೋಡಿಕೊಳ್ಳಬೇಕು. ಇದು ಈಗಿನ ಫ್ಯಾಷನ್ ಆಗಿದ್ದು, ತಲೆ ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು.
* ದಿನನಿತ್ಯ ಶೇವ್ ಮಾಡುವ ಅಭ್ಯಾಸವಿರಲಿ : ಬೋಳು ತಲೆ ಸಮಸ್ಯೆಯಿದ್ದವರು ಸಂಪೂರ್ಣವಾಗಿ ತಲೆಯ ಕೂದಲನ್ನು ಶೇವ್ ಮಾಡಿದರೆ ಸಾಕಾಗುವುದಿಲ್ಲ. ದಿನನಿತ್ಯ ಆ ಬಗ್ಗೆ ಕಾಳಜಿ ವಹಿಸಬೇಕು. ಒಂದು ದಿನ ಹಾಗೆಯೇ ಬಿಟ್ಟರೆ ತಲೆಯಲ್ಲಿ ಚಿಕ್ಕ ಚಿಕ್ಕ ಕೂದಲು ಬೆಳೆದು ನಿಮ್ಮ ಮುಖದ ಅಂದವನ್ನು ಹಾಳು ಮಾಡುತ್ತದೆ. ಗಾಯವಾಗದ ರೀತಿಯಲ್ಲಿ ಶೇವ್ ಮಾಡಲು ಮರೆಯದಿರಿ. ಮೊದ ಮೊದಲಿಗೆ ಇದು ಕಿರಿಕಿರಿ ಅನಿಸಿದರೂ ದಿನ ಕಳೆದಂತೆ ಅಭ್ಯಾಸವಾಗುತ್ತದೆ
* ತಲೆಬುರುಡೆಯಲ್ಲಿ ತೇವವಾಗಿಟ್ಟುಕೊಳ್ಳಿ : ದಿನಾಲೂ ಶೇವ್ ಮಾಡುತ್ತಿದ್ದರೆ ಸಾಲುವುದಿಲ್ಲ. ಹೆಡ್ ಶೇವಿಂಗ್ ನಿಂದಾಗಿ ತಲೆ ಡ್ರೈ ಆಗುತ್ತದೆ. ಹೀಗಾಗಿ ದಿನ ನಿತ್ಯ ಹೆಡ್ ಲೋಶನ್ ಬಳಸುವ ಮೂಲಕ ತಲೆ ಬುರುಡೆಯು ನೈಸ್ ಆಗುತ್ತದೆ. ತಲೆ ಬುರುಡೆ ಬಿಳಿಯಾಗಿ ಹೊಳೆಯುವುದಲ್ಲದೆ, ಮುಖದ ಕಾಂತಿ ಕೂಡ ಹೆಚ್ಚುತ್ತದೆ.
* ಮುಖದಂತೆ ತಲೆ ಬುರುಡೆಗೂ ಮೇಕಪ್ ಇರಲಿ : ಹುಡುಗರಿಗೂ ಎಲ್ಲರ ಮುಂದೆ ಅಂದವಾಗಿ ಕಾಣಿಸಿಕೊಳ್ಳಬೇಕು ಎನ್ನುವುದಿರುತ್ತದೆ. ಹೀಗಾಗಿ ಹೆಚ್ಚಿನವರು ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತಾರೆ. ಬೋಳು ತಲೆಯಿದ್ದರೆ ತಲೆ ಶೇವ್ ಮಾಡಿಕೊಂಡಿದ್ದರೆ ತಲೆ ಬುರುಡೆಗೂ ಮೇಕಪ್ ಮಾಡಿಕೊಂಡರೆ ಅಂದ ಹೆಚ್ಚಿಸಿಕೊಳ್ಳಿ.
* ತಲೆಗೆ ಮಸಾಜ್, ಸ್ಕ್ರಬ್ ಮಾಡಿಕೊಳ್ಳಿ : ಮುಖಕ್ಕೆ ಹೇಗೆ ಸ್ಕ್ರಬ್ ಹಾಗೂ ಫೇಶಿಯಲ್ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ತಲೆಗೆ ಸ್ಕ್ರಬ್ ಮಾಡಿಕೊಳ್ಳುವುದನ್ನು ಮರೆಯದಿರಿ. ತಲೆಯ ಚರ್ಮವೂ ಸಾಮಾನ್ಯವಾಗಿ ಡೆಡ್ ಸ್ಕಿನ್ ಆಗಿ ಬದಲಾಗುತ್ತದೆ. ಹೀಗಾಗಿ ಡೆಡ್ ಸ್ಕಿನ್ ತೊಡೆದು ಹಾಕಲು ಸ್ಕ್ರಬ್ ಮಾಡಿ ಎಣ್ಣೆಯಿಂದ ಬುರುಡೆ ಮಸಾಜ್ ಮಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Mon, 7 October 24