ನೀವು ನಿತ್ಯ ಆರೋಗ್ಯಯುತ ಆಹಾರ ಸೇವಿಸುತ್ತಿದ್ದೀರೋ ಅಥವಾ ನಿಮ್ಮ ಆಹಾರ ಅಭ್ಯಾಸವು ನಿಮ್ಮನ್ನು ಸಾವಿನ ದವಡೆಗೆ ತಳ್ಳುವಂತಿದೆಯೇ? ಪ್ರೊಸೆಸ್ಡ್ ಆಹಾರಗಳು ನೀವು ಯೋಚಿಸಲೂ ಸಾಧ್ಯವಾಗದ ರೀತಿ ನಿಮ್ಮ ಆರೋಗ್ಯವನ್ನು ಹದಗೆಡಿಸಿಬಿಡುತ್ತದೆ.
ಹೆಚ್ಚು ಸಕ್ಕರೆ, ಉಪ್ಪು, ಕೊಬ್ಬಿನಾಂಶ ಹೆಚ್ಚಿರುವ ಆಹಾರವನ್ನು ಸೇವಿಸುವ ಬದಲು ಹಣ್ಣುಗಳು, ತರಕಾರಿ, ಪ್ರೋಟೀನ್, ಕಡಿಮೆ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಿ. ಹೃದಯದಷ್ಟು ದೇಹದಲ್ಲಿ ಪ್ರಾಮುಖ್ಯತೆ ಪಡೆದಿರುವಂತಹ ಅಂಗವು ಮತ್ತೊಂದು ಇರಲಾರದು ಎಂದೇ ಹೇಳಬಹುದು. ಯಾಕೆಂದರೆ ಇದನ್ನು ಪ್ರೀತಿಯ ದ್ಯೋತಕವಾಗಿಯೂ ಬಳಸಲಾಗುತ್ತದೆ.
ಹೀಗಾಗಿ ಹೃದಯ ಎಂದ ಕೂಡಲೇ ಅಲ್ಲಿ ಪ್ರೀತಿ, ಕಾಳಜಿ ಎರಡೂ ಇದ್ದೇ ಇರುತ್ತದೆ. ಹೃದಯದ ಆರೈಕೆ ಸರಿಯಾಗಿದ್ದರೆ, ಆಗ ಯಾವುದೇ ರೀತಿಯ ಅನಾರೋಗ್ಯಗಳು ಕಾಡದು. ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಜನರಿಗೆ ಹೃದಯ ರೋಗಗಳು ಕಾಡುವುದು ಇದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು.
ಈ ಪದಾರ್ಥಗಳನ್ನು ಬಳಸಬೇಡಿ
ಸೋಡಾ: ನೀವು ಆರೋಗ್ಯವಾಗಿರಬೇಕು ಎಂದರೆ ಸೋಡಾ ಬಳಕೆಯನ್ನು ಕಡಿಮೆ ಮಾಡಲೇಬೇಕು. ಸೋಡಾದಲ್ಲಿರುವ ಕೆಮಿಕಲ್ಗಳು ನಿಮ್ಮ ಹೃದಯದ ಆರೋಗ್ಯದ ಮೇಲೆ ತೀವ್ರತರದ ಪರಿಣಾಮವನ್ನು ಬೀರುತ್ತದೆ.
ಫ್ರೆಷ್ ಜ್ಯೂಸ್: ಜ್ಯೂಸ್ ಕುಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೆಚ್ಚು ಸಕ್ಕರೆ ಬಳಕೆ ಮಾಡಿದ ಜ್ಯೂಸ್ ಅನ್ನು ಕುಡಿಯುತ್ತಾರೆ ಇದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಉಪ್ಪು: ಹೆಚ್ಚು ಪ್ರಮಾಣದಲ್ಲಿ ಉಪ್ಪು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗಲಿದೆ. ಇದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಯೂ ಇದೆ. ಆಹಾರದಲ್ಲಿ ಉಪ್ಪು ಹೆಚ್ಚು ಬಳಕೆ ಮಾಡಿದರೆ ಬಾಯಾರಿಕೆ ಹೆಚ್ಚಾಗಲಿದೆ.
ಅನ್ನ: ದಿನಕ್ಕೆ ಮೂರು ಬಾರಿ ಅನ್ನ ತನ್ನಿವುದರಿಂದ ಮಧುಮೇಹ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.
ಆಹಾರ ಹೀಗಿರಲಿ
ಆರೋಗ್ಯಕಾರಿ ಆಹಾರ
ಆಹಾರ ಕ್ರಮದಲ್ಲಿ ಪೋಷಕಾಂಶಗಳು ಹಾಗೂ ಆರೋಗ್ಯಕಾರಿ ಆಗಿರುವ ಆಹಾರಗಳನ್ನು ಮಾತ್ರ ಸೇರ್ಪಡೆ ಮಾಡಿ. ನೈಸರ್ಗಿಕ ಗಿಡಮೂಲಿಕೆಗಳೂ ಮತ್ತು ಮಸಾಲೆಗಳಾಗಿರುವಂತಹ ಜೀರಿಗೆ, ಕೊತ್ತಂಬರಿ, ಶುಂಠಿ ಇತ್ಯಾದಿಗಳು ಹೃದಯಕ್ಕೆ ತುಂಬಾ ಒಳ್ಳೆಯದು. ಇವುಗಳು ರುಚಿ ಕೂಡ ಹೆಚ್ಚಿಸುವುದು.
ಸರಿಯಾದ ನಿದ್ರೆ
ನಿದ್ರೆಯು ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ನಿತ್ಯವೂ ಎಂಟು ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಬೇಕು. ನಿದ್ರಾಹೀನತೆಯು ಇದ್ದರೆ, ಆಗ ಅದರಿಂದ ಬೇರೆ ಆರೋಗ್ಯ ಸಮಸ್ಯೆಗಳು ಕೂಡ ಬರುವುದು.
ಕಡಿಮೆ ನಿದ್ರೆ ಮಾಡಿದರೆ, ಅದರಿಂದ ದೇಹವು ಸೆರೊಟೊನಿನ್ ಹಾರ್ಮೋನ್ ನ್ನು ಹೆಚ್ಚು ಬಿಡುಗಡೆ ಮಾಡುವುದು, ಇದು ಉತ್ತಮ ಭಾವನೆ ಉಂಟು ಮಾಡುವುದು. ಹೀಗಾಗಿ ಒತ್ತಡ ಕಡಿಮೆ ಮಾಡುವುದು ಹಾಗೂ ಅತಿಯಾಗಿ ತಿನ್ನುವುದು ಹೆಚ್ಚಾಗುವುದು.
ವ್ಯಾಯಾಮ
ನಿತ್ಯದ ಜೀವನ ಕ್ರಮದಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ. ಜಡ ಜೀವನಶೈಲಿಯು ಹಲವಾರು ರೀತಿಯ ಸಮಸ್ಯೆಗೆ ಕಾರಣವಾಗುವುದು. ಮುಖ್ಯವಾಗಿ ಇದು ಹೃದಯದ ಕಾಯಿಲೆಗೆ ಕಾರಣವಾಗಬಹುದು.
ಹೀಗಾಗಿ ವ್ಯಾಯಾಮ ಮಾಡಿದರೆ, ಅದರಿಂದ ಆರೋಗ್ಯಕಾರಿ ತೂಕ ಕಾಪಾಡಬಹುದು. ಅಧಿಕ ಕೊಲೆಸ್ಟ್ರಾಲ್, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ಇದು ಕಡಿಮೆ ಮಾಡುವುದು.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿ ಆಧರಿಸಿರುತ್ತದೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ